ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ದೇಶದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 9ನೇ ತಾರಿಕಿನಂದು ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಹೊಸ ಸರ್ಕಾರದ ಮೇಲೆ ಜನರಿಗೆ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಅಪಾರವಾದ ನಿರೀಕ್ಷೆ ಇದೆ. ಈ ಹೊಸ ಸರ್ಕಾರ ಜುಲೈ ತಿಂಗಳಿನಲ್ಲಿ ಬಜೆಟ್ ಮಂಡನೆ ಮಾಡಲಿದೆ. ಈ ಬಜೆಟ್ ಮಂಡನೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚನೆಯ ನಿರೀಕ್ಷೆ ಇದೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ಸರ್ಕಾರ ಒಮ್ಮೆ ಈ ವೇತನ ಆಯೋಗವನ್ನು ರಚನೆ ಮಾಡಲು ತೀರ್ಮಾನಿಸಿದರೆ ಅದು ವೇತನ, ಭತ್ಯೆ, ಪಿಂಚಣಿ ಮುಂತಾದವುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಕೆ ಮಾಡಲು ಸುಮಾರು 12 ರಿಂದ 18 ತಿಂಗಳ ಅವಧಿಯನ್ನು ತೆಗೆದುಕೊಳ್ಳಲಿದೆ. ಆದರೆ ದೇಶದಲ್ಲಿ ಇನ್ನೂ 5 ವರ್ಷ ಲೋಕಸಭೆ ಚುನಾವಣೆ ಇಲ್ಲ.
8ನೇ ವೇತನ ಆಯೋಗ ರಚನೆಯಾಗಿ ಜಾರಿಯಾದರೆ ಇದರಿಂದ ಸುಮಾರು 49 ಲಕ್ಷ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ಸಹಾಯಕವಾಗಲಿದೆ. ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಫಿಟ್‌ಮೆಂಟ್ ಸೌಲಭ್ಯಗಳು ಸೇರಿ ಸರ್ಕಾರಿ ನೌಕರರ ಮೂಲ ವೇತನ 8,000 – 26,000 ದವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್.! ಬಂದೇ ಬಿಡ್ತು ಒಂದು ರಾಷ್ಟ್ರ-ಒಂದು ಪಡಿತರ ಚೀಟಿ
7ನೇ ವೇತನ ಆಯೋಗವು ಕೇಂದ್ರ ನೌಕರರಿಗೆ 2.57ರಷ್ಟು ಫಿಟ್‌ಮೆಂಟ್ ಸೌಲಭ್ಯದ ಶಿಫಾರಸು ಮಾಡಿತ್ತು. ಇದರ ಬಳಿಕ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 18 ಸಾವಿರ ರೂ.ಗಳಿಗೆ ಏರಿಕೆಯಾಗಿತ್ತು. ವೇತನದ ಜೊತೆ ವಿವಿಧ ಭತ್ಯೆಗಳು, ಪಿಂಚಣಿ ವ್ಯವಸ್ಥೆಯಲ್ಲಿ ಸಹ ಬದಲಾವಣೆಯಾಗಲಿದೆ.
ಈ 8ನೇ ವೇತನ ಆಯೋಗ ರಚನೆ ಮಾಡುವ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. NDA ಸರ್ಕಾರ 2.0 2023ರ ಡಿಸೆಂಬರ್‌ನಲ್ಲಿ ಈಗ 8ನೇ ವೇತನ ಆಯೋಗ ರಚನೆ ಮಾಡುವ ಪ್ರಸ್ತಾಪವಿಲ್ಲ ಎಂದಿತ್ತು. ಈಗ ಚುನಾವಣೆ ಪೂರ್ಣಗೊಳಿಸಿ NDA 3.0 ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಯಾವ ನಿಲುವು ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ಬದಲಾಗುತ್ತಿರುವ ಜೀವನ ಶೈಲಿಗೆ ಅನುಗುಣವಾಗಿ ನೌಕರರ ವೇತನವೂ ಏರಿಕೆಯಾಗಬೇಕಿದೆ. ಆದರೆ 8ನೇ ವೇತನ ಆಯೋಗ ರಚನೆಯಾಗಿ ಅದರ ವರದಿ ಅನುಷ್ಠಾನವಾಗಬೇಕು ನೌಕರರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕೇಂದ್ರದ ಹೊಸ ಸರ್ಕಾರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕಿದೆ.
ಇತರೆ ವಿಷಯಗಳು:
ದೇಶದ ಜನತೆಗೆ ಬಿಗ್ ಶಾಕ್.!! ರೇಷನ್ ಕಾರ್ಡ್ ಇದ್ದವರಿಗಾಗಿ 2 ಮಹಾ ನಿರ್ಧಾರ
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ