ಹಲೋ ಸ್ನೇಹಿತರೆ, ಇಂದು ಮಹಿಳಾ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು, ಅವರನ್ನು ಪುರುಷ ರಂತೆ ಸಮಾನ ರೀತಿಯಲ್ಲಿ ನೋಡಬೇಕೆಂದು ಸರಕಾರವು ಹೆಚ್ಚು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಈ ಭಾರಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರಿಗೆ ಹೆಚ್ಚು ಉಪಯೋಗವಾಗುತ್ತಿದೆ.
ಇದು ವರೆಗೆ 10 ತಿಂಗಳು ಪೂರ್ಣಗೊಂಡಿದ್ದು. ಪ್ರತಿ ತಿಂಗಳು ತಲಾ 2 ಸಾವಿರ ರೂಪಾಯಿಯಂತೆ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನೋಂದಣಿಯಾಗಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗುತ್ತಾರೆ.
ಇದನನು ಓದಿ: ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ!! ಈ ತಿಂಗಳಿನಲ್ಲಿ ಗ್ಯಾಸ್ ಬಳಸುವವರಿಗೆ ಸಂತಸದ ಸುದ್ದಿ
ಈಗಾಗಲೇ 10 ಕಂತಿನ ವರೆಗೆ ಗೃಹಲಕ್ಷ್ಮಿ ಹಣ ಜಮೆ ಗೊಂಡಿದ್ದು ಕೆಲವು ಮಹಿಳೆಯರಿಗೆ ಈ ಹಣ ಖಾತೆಗೆ ಜಮೆಯಾಗಿಲ್ಲ. ಕೆಲವು ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದ ಮಹಿಳೆಯರು ಗೃಹಲಕ್ಷ್ಮೀಯ ಹಣದಿಂದ ವಂಚಿತರಾಗಿದ್ದಾರೆ. ನಿಮ್ಮ ಈ ಎಲ್ಲಾ ದಾಖಲೆ ಸರಿಪಡಿಸಿ ಕೊಂಡಲ್ಲಿ ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆಯಾಗಲಿದೆ.
11 ನೇ ಕಂತಿನ ಹಣ ಜಮೆ ಬಗ್ಗೆ ವಿವರ:
ಗೃಹಲಕ್ಷ್ಮಿ ಹನ್ನೊಂದನೆಯ ಕಂತಿನ ಹಣ ನಾಳೆ ಸರ್ಕಾರ ಬಿಡುಗಡೆ ಮಾಡಲಿದ್ದು ಮೊದಲು ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಈ ಎಲ್ಲಾ ಜಿಲ್ಲೆಗಳಿಗೆ ಮೊದಲು ಗೃಹಲಕ್ಷ್ಮಿ ಹಣ ಬಿಡುಗಡೆ ಯಾಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಕೆಲಸ ಮಾಡುವುದು ಕಡ್ಡಾಯ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರು ಈ ಲಿಂಕ್ ಮಾಡಿಸುವುದು ಕಡ್ಡಾಯವಾಗಿದ್ದು ರೇಷನ್ ಕಾರ್ಡ್ ಅಪ್ಡೇಟ್, ಬ್ಯಾಂಕ್ ಖಾತೆಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮ್ಯಾಚ್ ಆಗಿದೆಯಾ? ಏನಾದರೂ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು, ಮತ್ತು ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿದ್ದಲ್ಲಿ ಸರಿ ಪಡಿಸಿಕೊಳ್ಳಬೇಕು.
ಇತರೆ ವಿಷಯಗಳು:
ಮುಂದಿನ 5 ದಿನ ಭಾರಿ ಮಳೆ! ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ
45,000 ಅತಿಥಿ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡಿದ ಸರ್ಕಾರ!