ಹಲೋ ಸ್ನೇಹಿತರೆ, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಅನಿರೀಕ್ಷಿತವಾದ ಆಘಾತಕ್ಕೆ ಒಳಗಾಗಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ಸೋಲು-ಗೆಲುವಿನ ಲೆಕ್ಕಾಚಾರದ ಜೊತೆಗೇ ತನ್ನ ಜನಪ್ರಿಯ “ಗ್ಯಾರಂಟಿ’ ಯೋಜನೆಗಳನ್ನೂ ಪರಾಮರ್ಶೆಗೊಳಪಡಿಸಲು ಸರ್ಕಾರ ಮುಂದಾಗಿದೆ.
ವಿಧಾನಸಭಾ ಚುನಾವಣೆ ಮುನ್ನ ಘೋಷಿಸಿದ ಗ್ಯಾರಂಟಿಗಳು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ನಿಜ. ನಂತರದಲ್ಲಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೂ ಅಷ್ಟೇ ಸತ್ಯ. ಆದರೆ, ಅದೇ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ “ಕೈ’ ಹಿಡಿಯಲಿಲ್ಲ ಎಂಬುದು ಸಹ ಸತ್ಯ.
ಹೀಗಿರುವಾಗ, ಗ್ಯಾರಂಟಿಗಳನ್ನು ಮುಂದುವರಿಸುವುದು ಸರಿಯೇ ಎಂಬ ಚರ್ಚೆ ಈಗ ಪಕ್ಷದಲ್ಲಿ ಆರಂಭವಾಗಿದೆ.
ಸಹಜವಾಗಿ ಲೋಕಸಭಾ ಚುನಾವಣೆಯ ಲೆಕ್ಕಾಚಾರ ಇದ್ದುದು ನಿಜ. ಆದರೆ, ಎಲ್ಲ ಪ್ರಯತ್ನದ ಮಾಡಿದರೂ ಸಹ “ಗ್ಯಾರಂಟಿ’ಗಳು ನಿರೀಕ್ಷಿತ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಅಸ್ತಿತ್ವದ ಬಗ್ಗೆ ಸಹಜವಾಗಿ ಚರ್ಚೆ ಶುರುವಾಗಿದೆ. ಗ್ಯಾರಂಟಿಗಳು ಮುಂದುವರಿಯಬೇಕಾ? ಒಂದು ವೇಳೆ ಮುಂದುವರಿದರೂ ಸಹ ಯಾವ ಪ್ರಮಾಣದಲ್ಲಿ ಇರಬೇಕು? ನಿಜವಾಗಿಯೂ ಬಡ ವರ್ಗಗಳ ಕುಟುಂಬಗಳಿಗೆ ಆ “ಕೊಡುಗೆ’ಗಳು ತಲುಪುತ್ತಿವೆಯೇ? ಬಡವರನ್ನು ಗುರಿಯಾಗಿಟ್ಟುಕೊಂಡು ಅನುಷ್ಠಾನ ಪ್ರಕ್ರಿಯೆಯಲ್ಲಿ ಇನ್ನಷ್ಟು ಬಿಗಿ ಕ್ರಮ ಮಾಡಬಹುದೇ? ಫಲಿತಾಂಶದ ಬೆನ್ನಲ್ಲೇ ಇಂತಹ ಹಲವು ಚರ್ಚೆಗಳು ಪಕ್ಷದ ವಲಯದಲ್ಲಿ ಈಗಾಗಲೇ ನಡೆಯುತ್ತಿವೆ.
ಇದನ್ನು ಓದಿ: ಆಧಾರ್ – ಪ್ಯಾನ್ ಕಾರ್ಡ್ ದಾರರಿಗೆ ನ್ಯೂ ರೂಲ್ಸ್.!! ಇನ್ಮುಂದೆ ಈ ನಿಯಮ ಕಡ್ಡಾಯ
ಆದರೆ ಹಲವು ನಕಾರಾತ್ಮಕ ಅಂಶಗಳ ಹೊರತಾಗಿಯೂ ಸರ್ಕಾರ ಸದ್ಯಕ್ಕಂತೂ ಗ್ಯಾರಂಟಿಗಳಿಗೆ ಬ್ರೇಕ್ ಹಾಕುವ ಯೋಚನೆಯಲ್ಲಿಲ್ಲ ಎಂದು ತಿಳಿಸಲಾಗಿದೆ. ಕಾರಣವೆನೆಂದರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಎದುರಿಸಬೇಕಿದೆ. ಇದಕ್ಕೆ ಪೂರಕವಾಗಿ “ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತಗೊಳ್ಳುವುದಿಲ್ಲ. ಲೋಕಸಭಾ ಚುನಾವಣೆ ನಂತರವೂ ಮುಂದುವರಿಯಲಿವೆ’ ಎಂದು ಸ್ವತಃ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರದಲ್ಲಿ ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ಭಾರೀ ಗೆಲುವನ್ನು “ಗ್ಯಾರಂಟಿ’ ಯೋಜನೆಗಳು ತಂದುಕೊಡದಿರಬಹುದು. ಆದರೆ, ಬಡತನ ಮತ್ತು ವಲಸೆ ಹೆಚ್ಚು ಇರುವ ಕಡೆಗಳಲ್ಲಿ ಸರ್ಕಾರದ ಈ ಯೋಜನೆಗಳು “ಕೈ’ ಹಿಡಿದಿವೆ. 28 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆದ್ದ ಒಂಬತ್ತು ಸ್ಥಾನಗಳಲ್ಲಿ 5 ಕಲ್ಯಾಣ ಕರ್ನಾಟಕದ ಕ್ಷೇತ್ರಗಳಾಗಿವೆ. ಹೆಚ್ಚು ವಲಸೆ ಇರುವುದೂ ಆ ಭಾಗದಲ್ಲೇ ಎನ್ನುವುದು ವಾಸ್ತವ ಸಂಗತಿಯಾಗಿದೆ.
ಇತರೆ ವಿಷಯಗಳು:
ತಗ್ಗಿದ ಚಿನ್ನದ ಬೆಲೆ, ಚಿನ್ನಾಭರಣ ಖರೀದಿಗೆ ಒಳ್ಳೆ ಟೈಮ್!
ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ.!! ಆಧಾರ್ ಇದ್ದವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ