ಹಲೋ ಸ್ನೇಹಿತರೆ, ರೈತರ ಅಭಿವೃದ್ಧಿ ಗಾಗಿ ರಾಜ್ಯ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಈಗಾಗಲೇ ಕೃಷಿಯ ಕಡೆ ಆಕರ್ಷಿಸುವಂತೆ ಮಾಡಲು ರೈತ ಸಿರಿ ಯೋಜನೆ, ಕಿಸಾನ್ ಯೋಜನೆ ಇತ್ಯಾದಿ ಅನೇಕ ಯೋಜನೆಯನ್ನು ಜಾರಿಗೆ ತಂದಿದೆ. ಈ ಭಾರಿ ಮಳೆ ಇಲ್ಲದೆ ರೈತರ ಕೃಷಿ ಬಹಳಷ್ಟು ಹಾನಿಗೊಳಗಾಗಿದ್ದು ಬೆಳೆ ವಿಮೆ ಯನ್ನು ನೀಡಲು ಸರಕಾರ ಮುಂದಾಗಿದೆ. ಇದೀಗ ಕೇಂದ್ರ ಸರ್ಕಾರವು ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹೊಸ ಸೌಲಭ್ಯ ಘೋಷಣೆ ಮಾಡಿದೆ.
ಯೋಜನೆಯ ಸಾಲ ಸೌಲಭ್ಯ?
ಇಂದು ಕೃಷಿ ಯೊಂದಿಗೆ ಹೈನುಗಾರಿಕೆ ಮಾಡುವ ಮುಖಾಂತರ ರೈತರು ಲಾಭ ಗಳಿಸುತ್ತಿದ್ದಾರೆ. ಈ ಉದ್ಯಮವು ರೈತರಿಗೆ ಬಹಳಷ್ಟು ಲಾಭವನ್ನು ತಂದುಕೊಡುತ್ತಿದೆ. ಈ ಕಾರಣಕ್ಕಾಗಿ ಸರಕಾರ ಕೂಡ ಇದಕ್ಕೆ ಪ್ರೋತ್ಸಾಹ ನೀಡಿದ್ದು ಉತ್ತಮ ತಳಿಯ ಜಾನುವಾರುಗಳನ್ನು ಖರೀದಿಸಲು ಹಾಗೂ ದನದ ಕೊಟ್ಟಿಗೆಯನ್ನು ನಿರ್ಮಿಸಲು ಡೈರಿ ಉದ್ಯಮವನ್ನು ಸ್ಥಾಪಿಸಲು ಸಾಲ ಸೌಲಭ್ಯ ನೀಡಲಿದೆ.
ಇದನ್ನು ಓದಿ: ಮನೆ ಇಲ್ಲವರಿಗೆ ಸರ್ಕಾರದಿಂದ 1 ಲಕ್ಷ ಉಚಿತ ಮನೆ ಬಿಡುಗಡೆ!! ಹೀಗೆ ಆನ್‌ಲೈನ್ನಲ್ಲಿ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಾನುವಾರು ಕೊಟ್ಟಿಗೆ ನಿರ್ಮಾಣಕ್ಕಾಗಿ ರೈತರಿಗೆ 2 ಲಕ್ಷ ರೂ.ಗಳವರೆಗೆ ಆರ್ಥಿಕ ನೆರವು ನೀಡಲಿದೆ ಅದಕ್ಕೆ ಸಬ್ಸಿಡಿಯನ್ನು ಕೂಡ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ %50ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ %25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ ನ ಮೂಲಕ ಸಾಲದ ರೂಪದಲ್ಲಿ ನೀಡಲಾಗುತ್ತದೆ.
ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ:
ಪಶುಸಂಗೋಪನೆ ಮಾಡಲು ಇಚ್ಛಿಸುವ ರೈತರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ನೀಡಲಿದೆ. ಮಿಶ್ರತಳಿ ದನಗಳ ನಿರ್ವಹಣೆಗೆ ಪ್ರತಿ ಹಸುವಿಗೆ ಗರಿಷ್ಠ 18000 ರೂ ಗಳಂತೆ, ಎರಡು ಹಸುಗಳ ಸಾಕಾಣಿಕೆಗೆ 36,000 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ, ಪ್ರತಿ ಎಮ್ಮೆಗೆ ಗರಿಷ್ಠ 21,000 ರೂ ಗಳಂತೆ, ಎರಡು ಎಮ್ಮೆಗಳಿಗೆ 42,000 ರೂಗಳವರೆಗೆ ಸಾಲ ಸಿಗಲಿದೆ.
ಅರ್ಜಿ ಹಾಕುವ ವಿಧಾನ:
ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿರುವ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಹತ್ತಿರವಿರುವ ಬ್ಯಾಂಕಿಗೆ ಭೇಟಿ ನೀಡಿ ಆನ್ ಲೈನ್ ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಅರ್ಜಿ ಹಾಕಲು ಈ ದಾಖಲೆಗಳಾದ ಬ್ಯಾಂಕ್ ಪುಸ್ತಕ, ಮತದಾರರ ಚೀಟಿ, ಆಧಾರ್ ಕಾರ್ಡ್, ಭಾವಚಿತ್ರ, ವಿಳಾಸ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಅಗತ್ಯವಾಗಿ ಬೇಕು.
ಇದನ್ನು ಓದಿ:
ಒಮ್ಮೆಗೆ ಪಾತಾಳ ಕಂಡ ಚಿನ್ನದ ದರ.!! ಇಂದಿನ ಬೆಲೆ ಎಷ್ಟು ಗೊತ್ತಾ??
ಬ್ಯಾಂಕ್‌ನಲ್ಲಿ ಲೋನ್ ಮಾಡಿದವರಿಗೆ ಹೊಸ ರೂಲ್ಸ್.!! ಯಾವುದು ಗೊತ್ತಾ ಈ ನಿಯಮ??