ಹಲೋ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾವು ಕಟ್ಟುವಂತಹ ಟ್ಯಾಕ್ಸ್ ನಲ್ಲಿ ಉಳಿತಾಯ ಮಾಡುವಂತಹ ಯೋಜನೆ ಖಂಡಿತವಾಗಿ ಇದ್ದೇ ಇರುತ್ತದೆ. ಇದೇ ಕಾರಣಕ್ಕಾಗಿ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಯಾವೆಲ್ಲ ಮೂಲಗಳಲ್ಲಿ ನೀವು ಹಣವನ್ನು ಟ್ಯಾಕ್ಸ್ ರೂಪದಲ್ಲಿ ಉಳಿತಾಯ ಮಾಡಬಹುದು ಎನ್ನುವುದನ್ನು ಇವತ್ತಿನ ಲೇಖನದಲ್ಲಿ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಈ ಕೆಲವೊಂದು ಆದಾಯಗಳ ಮೂಲದಲ್ಲಿ ನೀವು ಟ್ಯಾಕ್ಸ್ ಉಳಿತಾಯ ಮಾಡಬಹುದೆನ್ನುವಂತಹ ವಿಚಾರ ನಿಮಗೂ ಕೂಡ ತಿಳಿದಿರುವುದಿಲ್ಲ. ಹಾಗಿದ್ದರೆ ಬನ್ನಿ ಯಾವೆಲ್ಲ ಮೂಲಗಳಿಂದ ಆದಾಯವನ್ನು ನೀವು ಉಳಿತಾಯ ಮಾಡಬಹುದು ಅನ್ನೋದನ್ನ ತಿಳಿಯೋಣ.
* ಒಂದು ವೇಳೆ ನೀವು ನಿಮ್ಮ ವಂಶ ಪಾರಂಪರಿಕ ನಿಮ್ಮ ಹೆತ್ತವರು ಹಾಗೂ ಹಿರಿಯವರಿಂದ ಉಡುಗೊರೆಯಾಗಿ ಪಡೆದುಕೊಂಡಿರುವಂತಹ ವಸ್ತು ಇಲ್ಲವೇ ಆಸ್ತಿಯ ಮೇಲೆ ನೀವು ಯಾವುದೇ ರೀತಿಯ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ. ಕೇವಲ ಅದರಿಂದ ನೀವು ಯಾವುದಾದರು ಆದಾಯವನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದರೆ ಮಾತ್ರ ಅದರ ಮೇಲೆ ಟ್ಯಾಕ್ಸ್ ಕಟ್ಟಬೇಕಾಗಿರುತ್ತದೆ ಹೊರತು ಈ ರೀತಿ ಉಡುಗೊರೆಯಾಗಿ ಪಡೆದುಕೊಂಡಿರುವಂತಹ ವಿಲ್ ಇರುವಂತಹ ಆಸ್ತಿಯ ಮೇಲೆ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ.
* ನಿಮ್ಮ ಮದುವೆ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸಾಕಷ್ಟು ಜನರು ಬೆಲೆಬಾಳುವಂತಹ ಗಿಫ್ಟ್ ಗಳನ್ನು ಉಡುಗೊರೆಯಾಗಿ ನೀಡಬಹುದಾಗಿದೆ. ಅದನ್ನು ಕೂಡ ಟ್ಯಾಕ್ಸ್ ಗಣನೆಗೆ ನೀವು ಸೇರಿಸಬೇಕಾದ ಅಗತ್ಯವಿಲ್ಲ. ಇದು ಐವತ್ತು ಸಾವಿರ ರೂಪಾಯಿಗಳ ಮೌಲ್ಯದಿಂದ ಹೆಚ್ಚಾಗಿದ್ದರೂ ಕೂಡ ನೀವು ಟ್ಯಾಕ್ಸ್ ಕಟ್ಟಬೇಕಾಗಿಲ್ಲ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.
ಆಧಾರ್ ಬಗ್ಗೆ ಬೆಳ್ಳಂಬೆಳಿಗ್ಗೆ ಶಾಕಿಂಗ್ ನ್ಯೂಸ್.!! ಇನ್ಮುಂದೆ ಯಾವು ಮೂಲಾಜಿಲ್ಲ ಎಂದ ಮೋದಿ
* ಒಂದು ವೇಳೆ ನೀವು ಪಾಲುದಾರಿಕೆ ವ್ಯಾಪಾರವನ್ನು ಮಾಡುತ್ತಾ ಇದ್ದಲ್ಲಿ ಅದರಿಂದ ಪಡೆದುಕೊಂಡಿರುವಂತಹ ಲಾಭದ ಮೇಲೆ ಸಹ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿರುವುದಿಲ್ಲ ಯಾಕೆಂದರೆ ನಿಮ್ಮ ಪಾರ್ಟ್ನರ್ ಈಗಾಗಲೇ ಅದಕ್ಕೆ ಕಟ್ಟ ಬೇಕಾಗಿರುವಂತಹ ಟ್ಯಾಕ್ಸ್ ಅನ್ನು ಅದಾಗಲೇ ಕಟ್ಟಿರುತ್ತಾರೆ ಹೀಗಾಗಿಯೇ ನೀವು ಹೆಚ್ಚಾಗಿ ಟ್ಯಾಕ್ಸ್ ಕಟ್ಟಬೇಕಾದ ಅಗತ್ಯವಿಲ್ಲ. ಇದು ಕೇವಲ ಸಂಸ್ಥೆಯಿಂದ ಪಡೆದುಕೊಂಡಿರುವಂತಹ ಲಾಭದ ಮೇಲೆ ಮಾತ್ರ ನಿಯಮವನ್ನು ನಿಗದಿಯಾಗಿರುತ್ತದೆ ಆದ್ದರಿಂದ ಪಡೆದುಕೊಳ್ಳುವಂತಹ ಸಂಬಳದ ಮೇಲಲ್ಲ.
* ಒಂದು ವೇಳೆ ನೀವು ಇನ್ಶೂರೆನ್ಸ್ ಅನ್ನು ಕಟ್ತಾ ಇದ್ರೆ, ಅದರ ಮೆಚುರಿಟಿ ಹಣ ಕೂಡ ಟ್ಯಾಕ್ಸ್ ಫ್ರೀ ಆಗಿರುತ್ತದೆ. ಆದರೆ ಪ್ರೀಮಿಯಂ ಅನ್ನೋದು ಅದರ ಒಟ್ಟಾರೆ ಹಣದ 10 ಪ್ರತಿಶತಕ್ಕಿಂತ ಮೇಲಿರಬಾರದು ಎನ್ನುವಂತಹ ನಿಯಮವನ್ನು ಕೂಡ ಇಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಕೆಲವೊಂದು ಕಡೆಗಳಲ್ಲಿ ಇದರ ಲಿಮಿಟ್ 15 ಪ್ರತಿಶತ ಆಗಿರುತ್ತದೆ. ಇದಕ್ಕಿಂತ ಹೆಚ್ಚಾಗಿರುವಂತಹ ಹಣದ ಮೇಲೆ ಟ್ಯಾಕ್ಸ್ ಅನ್ನು ವಿಧಿಸಲಾಗುತ್ತದೆ.
* ಒಂದು ವೇಳೆ ನೀವು ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಯಲ್ಲೇ ಹಣವನ್ನು ಹೂಡಿಕೆ ಮಾಡಿದ್ರೆ ಅದನ್ನು ಮಾರಾಟ ಮಾಡಿ ಬಂದಿರುವಂತಹ ಒಂದು ಲಕ್ಷ ರೂಪಾಯಿಗಳ ಹಣದವರೆಗೆ ನಿಮಗೆ ಟ್ಯಾಕ್ಸ್ ನ್ನು ರಿಯಾಯಿತಿ ಮಾಡಲಾಗುತ್ತದೆ.
ಇತರೆ ವಿಷಯಗಳು:
ಇನ್ಮುಂದೆ ಟೆನ್ಷನ್ ಬೇಡ! ₹250 ರಿಂದ ಸಿಗತ್ತೆ ಗರಿಷ್ಠ1.5 ಲಕ್ಷ
ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ ಪದವೀಧರರಿಗೆ ಉದ್ಯೋಗಾವಕಾಶ!