ಹಲೋ ಸ್ನೇಹಿತರೇ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆ ಜಿಯೋ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮದೇ ಆಗಿರುವಂತಹ ದೊಡ್ಡ ಮಟ್ಟದ ಮಾರ್ಕೆಟ್ ಹಾಗೂ ನೆಟ್ವರ್ಕ್ ಹೊಂದಿದ್ದಾರೆ. ನಾವು ಭಾರತೀಯರು ಯುಪಿಐ ನೆಟ್ವರ್ಕ್ಗಳ ಮೂಲಕ ಪೇಮೆಂಟ್ ಅನ್ನು ಮಾಡುತ್ತೇವೆ. ಆದ್ರೆ ಇನ್ಮುಂದೆ ನಿಮ್ಮ ಬಳಿಯಲ್ಲಿ ಮೊಬೈಲ್ ಇದ್ರೆ ನಿಮಗೆ ಗುಡ್ ನ್ಯೂಸ್ ಸಿಕ್ತಾ ಇದೆ ಎಂದು ಹೇಳಬಹುದು. ಹೌದು ಜಿಯೋ ಫೈನಾನ್ಸ್ ಅಪ್ಲಿಕೇಶನ್ ಮೂಲಕವೇ ನೀವು ಈ ರೀತಿಯ ಆನ್ಲೈನ್ ಪೇಮೆಂಟ್ ಗಳನ್ನು ಇನ್ಮುಂದೆ ಮಾಡಿಕೊಳ್ಳಬಹುದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಜಿಯೋ ಫೈನಾನ್ಸಲ್ಲಿ ಏನೆಲ್ಲ ಸಿಗುತ್ತೆ ಗೊತ್ತಾ?
ಜಿಯೋ ಫೈನಾನ್ಸಿಯಲ್ ಸರ್ವಿಸ್ ಲಿಮಿಟೆಡ್ ಇಂದ ಜಿಯೋ ಫೈನಾನ್ಸ್ ಅಪ್ಲಿಕೇಶನ್ ಲಾಂಚ್ ಆಗಿದೆ. ಡಿಜಿಟಲ್ ಬ್ಯಾಂಕಿಂಗ್ ಹಾಗೂ ಫೈನಾನ್ಸ್ ಸರ್ವಿಸ್ ಒಂದೇ ಅಪ್ಲಿಕೇಶನ್ ನಲ್ಲಿ ಸಿಗುವ ನಿಟ್ಟಿನಲ್ಲಿ ಈ ಅಪ್ಲಿಕೇಶನ್ ಅನ್ನು ಜನರ ಮುಂದೆ ತರಲಾಗಿದೆ. ಇದೆ ಜೊತೆಯಲ್ಲಿ UPI ಪೇಮೆಂಟ್ ಸರ್ವಿಸ್ ನ್ನು ಸಹ ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಹೋಂ ಲೋನ್ ಹಾಗೂ ಸಾಮಾನ್ಯ ಲೋನ್ ಅನ್ನು ಸಹ ನೀವು ಈ ಅಪ್ಲಿಕೇಶನ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ. ಸದ್ಯದ ಮಟ್ಟಿಗೆ ಜಿಯೋ ಫೈನಾನ್ಸಿಯಲ್ ಆಪ್ ಟೆಸ್ಟಿಂಗ್ ನಲ್ಲಿ ಇದ್ದು, ಸದ್ಯದಲ್ಲೇ ಲಾಂಚಿಂಗ್ ಆಗಲು ಇರುವಂತಹ ಈ ಅಪ್ಲಿಕೇಶನ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ನ ಮೂಲಕ ಡೌನ್ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದಾಗಿದೆ.
ಮನೆ ಇಲ್ಲದವರಿಗೆ ಮನೆ ಭಾಗ್ಯ.!! ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ
ಜಿಯೋ ಫೈನಾನ್ಸ್ ಅಪ್ಲಿಕೇಶನ್ ಲಾಂಚ್ ಆಗುವುದರಿಂದಾಗಿ ಈಗಾಗಲೇ ಯುಪಿಐ ನೆಟ್ವರ್ಕ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಗ್ರಾಹಕ ಬಳಗವನ್ನು ಹೊಂದಿರುವಂತಹ ಯುಪಿಐ ಗೂಗಲ್ ಪೇ ಹಾಗೂ ಇನ್ನಿತರ ಅಪ್ಲಿಕೇಶನ್ಗಳು ಭಾರತದ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ ಹಿನ್ನಡೆಯನ್ನು ಕಾಣುವಂತಹ ಸಾಧ್ಯತೆ ಇದೆ ಎಂದು ಹೇಳಬಹುದಾಗಿದೆ. ಇನ್ನು ಈ ಅಪ್ಲಿಕೇಶನ್ ನಲ್ಲಿ ಬಡವ ಶ್ರೀಮಂತ ಎನ್ನದೆ ಎಲ್ಲರಿಗು ಕೂಡ ತ್ವರಿತವಾಗಿ ಲೋನ್ ಸಿಗಲಿದೆ ಎನ್ನಲಾಗುತ್ತಿದೆ.
ಯಾಕೆಂದ್ರೆ ಈಗಾಗಲೇ ಅತ್ಯಂತ ಕಡಿಮೆಯ ಸಮಯದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಜೀವ ಸಂಸ್ಥೆ ಯಾವ ರೀತಿಯಲ್ಲಿ ಯಶಸ್ಸನ್ನು ಕಂಡಿದೆ ಎನ್ನುವ ಜೀವಂತ ಉದಾಹರಣೆಯನ್ನು ನಿಮ್ಮ ಕಂಡು ಬಂದಿದೆ. ಇದೇ ರೀತಿಯಲ್ಲಿ ಜೀವ ಫೈನಾನ್ಸಿಯಲ್ ಅಪ್ಲಿಕೇಶನ್ ಯುಪಿಐ ಹಾಗೂ ಫೈನಾನ್ಸ್ ಕ್ಷೇತ್ರದಲ್ಲಿ ಖಂಡಿತವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾದ ಅಗತ್ಯ ಇಲ್ಲ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದ್ದು ಇದೇ ಹಿಂಜರಿಕೆಯಲ್ಲಿ ಬೇರೆ ಯುಪಿಐ ಅಪ್ಲಿಕೇಶನ್ ಗಳು ಕೂಡ ಇವೆ. ಹೀಗಾಗಿ ಮುಕೇಶ್ ಅಂಬಾನಿ ಅವರಿಂದ ನೀವು ಅತಿ ಶೀಘ್ರದಲ್ಲೇ ಜಿಯೋ ಫೈನಾನ್ಸ್ ಅಪ್ಲಿಕೇಶನ್ ಬಗ್ಗೆ ಗುಡ್ ನ್ಯೂಸ್ ಅನ್ನು ಕೇಳಬಹುದಾಗಿದೆ.
ಇತರೆ ವಿಷಯಗಳು:
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ದೇಶದಲ್ಲಿ ಶುರುವಾಯ್ತು ಮೋದಿ ಅಲೆ.!! ಈ ಯೋಜನೆಗೆ ಕರ್ನಾಟಕದಲ್ಲಿ 10 ಲಕ್ಷ ಜನ ಅರ್ಜಿ ಸಲ್ಲಿಕೆ