ಹಲೋ ಸ್ನೇಹಿತರೇ, ಇದೀಗ ಆಹಾರ ಇಲಾಖೆಯು ನಕಲಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಹೊರಟಿದೆ. ಹೌದು ಇಂದು ಸುಳ್ಳು ಮಾಹಿತಿ,ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಮಾಡಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ.ಇದಕ್ಕಾಗಿ ಕಡಿವಾಣ ಹಾಕಲು ಆಹಾರ ಇಲಾಖೆಯು ಇದೀಗ ಸೂಕ್ತ ಕ್ರಮ ಕೈಗೊಂಡಿದೆ. ಇಂದು ರೇಷನ್ ಕಾರ್ಡ್ ಮೂಲಕ ಸರಕಾರದಿಂದ ಹಲವು ರೀತಿಯ ಸೌಲಭ್ಯ ಗಳು ಸಿಗ್ತಾ ಇದೆ. ರಾಜ್ಯ ಸರಕಾರದಿಂದ ಸಿಗುವ ಗ್ಯಾರಂಟಿ ಯೋಜನೆಗಳಿಗೂ ರೇಷನ್ ಕಾರ್ಡ್ ಮುಖ್ಯವಾಗಿ ಬೇಕು..
ಹಾಗಾಗಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಜನರು ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆ ಫಲಿತಾಂಶ ಕೂಡ ಬಂದಿದ್ದು ಅನರ್ಹ ಬಿಪಿಎಲ್ ರೇಶನ್ ಕಾರ್ಡ್ ಗಳ ರದ್ದತಿ ಪ್ರಕ್ರಿಯೆಗೆ ಸರಕಾರ ಕ್ರಮ ಕೈಗೊಂಡಿದ್ದು ಮತ್ತು ಬಿಪಿಎಲ್ಗಾಗಿ ವರ್ಷದಿಂದ ಕಾಯುತ್ತಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ.ಹಾಗಾಗಿ ಅರ್ಜಿ ಸಲ್ಲಿಸುವ ಅವಕಾಶ ಯಾವಾಗ ಸಿಗಲಿದೆ ಎಂದು ತಿಳಿಯಲು ಈ ಲೇಖನಓದಿ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮೂಲಕ ಆದ್ಯತಾ ಪಡಿತರ ಕುಟುಂಬ BPL 1.03 ಕೋಟಿ ಮತ್ತು ಅಂತ್ಯೋದಯ ಕುಟುಂಬಗಳು 10.83 ಲಕ್ಷ ಸೇರಿ 1.14 ಕೋಟಿ ಇರಬೇಕು. ಆದ್ರೆ ರಾಜ್ಯದಲ್ಲಿ ಮಿತಿಯನ್ನು ಮೀರಿ 10.33 ಲಕ್ಷ ಹೆಚ್ಚುವರಿಕ್ಕೂ ಹೆಚ್ಚು BPL ಕಾರ್ಡ್ ಹೊಂದಿದ್ದು ಅನರ್ಹರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದು ಹೊಸದಾಗಿ ಲಕ್ಷಾಂತರ ಅರ್ಜಿಗಳು ಬಾಕಿ ಇರಲಿದ್ದು ಆಹಾರ ಇಲಾಖೆಯು ಬಹಳಷ್ಟು ಹಣವು ವ್ಯಯಿಸುತ್ತಿದೆ ಹಾಗಾಗಿಯೇ ಇದೀಗ ಇಂತಹ ಕಾರ್ಡ್ ರದ್ದು ಮಾಡಲು ಹೊರಟಿದೆ.
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ
ಕೆಲವರು ಆರ್ಥಿಕವಾಗಿ ಸಬಲರಾಗಿದ್ದೂ ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ಹೆಚ್ಚು ಆದಾಯವನ್ನು ಹೊಂದಿದ್ದರು ಸಹ BPL ರೇಷನ್ ಕಾರ್ಡ್ ಹೊಂದಿದ್ದು ಇಂತಹ ಕಾರ್ಡ್ ರದ್ದು ಆಗಲಿದೆ. ಇನ್ನೂ ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟವರ ಹೆಸರುಗಳನ್ನೂ ಅಳಿಸಲಾಗಿಲ್ಲ. ಹೆಸರುಗಳನ್ನು ತೆಗೆದುಹಾಕಿದರೆ ಆಗ ಯೂನಿಟ್ಗಳು ಕಡಿಮೆಯಾಗಲಿದೆ ಹಾಗಾಗಿ ಈ ಕೆಲಸ ಕೂಡ ಮಾಡಲಿದೆ.
ಪ್ರತಿ ತಿಂಗಳು ಬಿಪಿಎಲ್ ಕಾರ್ಡ್ ದಾರರ ಪೈಕಿ ಶೇ. 80-83ರಷ್ಟು ಕುಟುಂಬಗಳು ಮಾತ್ರ ಪಡಿತರ ಪಡೆಯುತ್ತಿದ್ದು ಕೆಲವರು ಸರಕಾರಿ ಯೋಜನೆಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸತತ ಮೂರು ತಿಂಗಳಿಂದ ಪಡಿತರ ತೆಗೆದುಕೊಳ್ಳಲು ಬಾರದ ಕಾರ್ಡ್ಗಳನ್ನು ಅಮಾನತು ಗೊಳಿಸುವುದು, ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಸಂಪೂರ್ಣ ರದ್ದು ಮಾಡಲಿದೆ.
ಈಗಾಗಲೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೂ ಕೂಡ ಸಾಕಷ್ಟು ಅರ್ಜಿ ಸಲ್ಲಿಕೆ ಆಗಿದೆ. ಆದ್ರೆ ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಅರ್ಜಿ ಸ್ಥಗಿತ ಮಾಡಲಾಗಿತ್ತು.ಹೊಸ ಕಾರ್ಡ್ ವಿತರಣೆ ಕೂಡ ಯಾರಿಗೂ ಮಾಡಿಲ್ಲ. ಹೊಸದಾಗಿ ಕಾರ್ಡ್ ವಿತರಿಸುವ ಯಾವುದೇ ಚಿಂತನೆಯೂ ಸದ್ಯ ಇಲಾಖೆ ಮಾಡಿಲ್ಲ. ಹಾಗಾಗಿ ಮುಂದಿನ ದಿನದಲ್ಲಿ ಅನರ್ಹರ ಕಾರ್ಡ್ ರದ್ದು ಪಡಿಸಿ, ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ಇತರೆ ವಿಷಯಗಳು:
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ಮನೆ ಇಲ್ಲದವರಿಗೆ ಮನೆ ಭಾಗ್ಯ.!! ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ