ಹಲೋ ಸ್ನೇಹಿತರೇ, HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲೇಬೇಕು ಎನ್ನುವುದಾಗಿ ಅದಾಗಲೇ ರಾಜ್ಯ ಸಾರಿಗೆ ಇಲಾಖೆ ಅಧಿಕೃತವಾಗಿ ನಿಯಮಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಮೇ 31 ಕೊನೆಯ ದಿನಾಂಕ ಎಂಬುದಾಗಿ ಪರಿಗಣಿಸಲಾಗಿತ್ತು ಹಾಗೂ ಪ್ರತಿಯೊಬ್ಬರು ಕೂಡ ಈ ದಿನಾಂಕದೊಳಗೆ ಪರಿವಾಹನ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ HSRP ನಂಬರ್ ಪ್ಲೇಟ್ ಅನ್ನು ಅವರವರ ವಾಹನಗಳಿಗೆ ಅಳವಡಿಸಿಕೊಳ್ಳುವಂತಹ ಸೂಚನೆಯನ್ನು ನೀಡಲಾಗಿತ್ತು.
ಆದ್ರೆ ಈಗಾಗಲೇ ಸಮಯವು ಕೂಡ ಮುಗಿದು ಜೀವನ ತಿಂಗಳು ಕೂಡ ಅರ್ಧಕ್ಕೆ ಬಂದು ನಿಂತಿದೆ. ಈಗಲೂ ಸಹ ಕರ್ನಾಟಕದಲ್ಲಿ ಒಟ್ಟಾರೆ ಇರುವಂತಹ ವಾಹನಗಳ ಸಂಖ್ಯೆಯಲ್ಲಿ ಕೇವಲ 20 ಪ್ರತಿಶತ ವಾಹನಗಳು ಮಾತ್ರ ಇನ್ನೂ ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಕೊಂಡಿವೆ ಎಂಬುದಾಗಿ ಮಾಹಿತಿಗಳು ತಿಳಿದು ಬರುತ್ತಿವೆ.
ಆದರೆ ಈಗ ಸರಿಯಾದ ಪ್ರಮಾಣದಲ್ಲಿ ಜನರ ರಾಜ್ಯದಲ್ಲಿ ರಿಜಿಸ್ಟರ್ ಮಾಡಿಕೊಂಡಿಲ್ಲ ಎನ್ನುವುದಾಗಿ ಹಾಗೂ ಇತ್ತೀಚಿಗಷ್ಟೇ ಹೈಕೋರ್ಟ್ ಕೂಡ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದಕ್ಕೆ ದಿನಾಂಕದ ಗಡುವನ್ನು ಆಗಸ್ಟ್ ಅಥವಾ ಸಪ್ಟೆಂಬರ್ ತಿಂಗಳಿಗೆ ವಿಸ್ತರಿಸುವ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಸದ್ಯದ ಮಟ್ಟಿಗೆ ಸರ್ಕಾರದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸಾರಿಗೆ ಇಲಾಖೆ ಈ ಗಡುವನ್ನು ಜುಲೈ ನಾಲ್ಕರವರೆಗೆ ವಿಸ್ತರಿಸುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಇನ್ನಷ್ಟೇ ಅಧಿಕೃತವಾಗಿ ಈ ವಿಚಾರದ ಬಗ್ಗೆ ಘೋಷಣೆ ಹೊರಬೇಕಾಗಿದೆ.
ದೇಶದ ಜನತೆಗೆ ಬಿಗ್ ಶಾಕ್.!! ರೇಷನ್ ಕಾರ್ಡ್ ಇದ್ದವರಿಗಾಗಿ 2 ಮಹಾ ನಿರ್ಧಾರ
HSRP ನಂಬರ್ ಪ್ಲೇಟ್ ಅಳವಡಿಕೆಯ ಕೊನೆಯ ದಿನಾಂಕದ ಅವಧಿ ಮುಗಿದ ನಂತರ ಒಂದು ವೇಳೆ ಆ ಸಂದರ್ಭದಲ್ಲಿ ಕೂಡ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದರೆ ಆಗ ಮೊದಲ ಬಾರಿಗೆ 500 ಹಾಗೂ ಅದನ್ನು ಮತ್ತೆ ಮುಂದುವರಿಸಿದರೆ ಸಾವಿರ ರೂಪಾಯಿಗಳ ಫೈನ್ ಅನ್ನು ವಿಧಿಸುವ ಬಗ್ಗೆ ಕೂಡ ಈ ಸಂದರ್ಭದಲ್ಲಿ ಮಾಹಿತಿಗಳು ಒದಗಿ ಬಂದಿದೆ.
ಹೀಗಾಗಿ ಮುಂದಿನ ಅಧಿಕೃತ ದಿನಾಂಕದ ಗಡುವು ಹೊರಬರುವುದಕ್ಕಿಂತ ಮುಂಚೆ ಅಧಿಕೃತ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ನಂಬರ್ ಪ್ಲೇಟ್ ಅನ್ನು ನೀವು ನಿಮ್ಮ ಶೋರೂಂಗೆ ಹೋಗಿ ಪಡೆದುಕೊಂಡು ಅಳವಡಿಸಿಕೊಂಡು ಬರಬಹುದಾಗಿದೆ. ಸಾರಿಗೆ ಇಲಾಖೆ ಜಾರಿಗೆ ತಂದಿರುವಂತಹ ಈ ನಿಯಮವನ್ನು ಒಬ್ಬ ಪ್ರಜ್ಞಾವಂತ ಭಾರತೀಯ ನಾಗರಿಕನಾಗಿ ಪರಿಪಾಲಿಸುವುದು ಒಳ್ಳೆಯ ಲಕ್ಷಣ ಎಂದು ಹೇಳಬಹುದಾಗಿದೆ. ಸದ್ಯದ ಮಟ್ಟಿಗೆ ತಿಳಿದುಕೊಂಡಿರುವ ಮಾಹಿತಿ ಪ್ರಕಾರ ಜುಲೈ ನಾಲ್ಕರವರೆಗೆ ಈ ದಿನಾಂಕವನ್ನ ವಿಸ್ತರಿಸಿಬಹುದಾಗಿದೆ ಆದರೆ ಸರ್ಕಾರದ ಅಭಿಪ್ರಾಯವನ್ನು ಪಡೆದುಕೊಂಡು ಸಾರಿಗೆ ಇಲಾಖೆ ಇದನ್ನ ಆಗಸ್ಟ್ ಅಥವಾ ಸಪ್ಟೆಂಬರ್ ತಿಂಗಳವರೆಗೂ ಕೂಡ ವಿಸ್ತರಿಸಬಹುದಾಗಿದೆ ಎಂಬ ಮಾಹಿತಿ ಕೂಡ ಇದೆ.
ಇತರೆ ವಿಷಯಗಳು:
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ