ಫ್ರೀ ಬಸ್‌ ಸೌಲಭ್ಯ ಪಡೆಯುವವರಿಗೆ ಶಾಕ್.!!‌ ಸಾರಿಗೆ ಸಚಿವರಿಂದ ಹೊಸ ಅಪ್ಡೇಟ್

ಹಲೋ ಸ್ನೇಹಿತರೇ, ಸರ್ಕಾರಿ ಬಸ್ ಕಾಲ ಕ್ರಮೇಣ ಈ ಆಧುನಿಕ ಜಗತ್ತಿನ ಅಗತ್ಯತೆಗೆ ತಕ್ಕಂತೆ ತನ್ನಲ್ಲಿ ಕೆಲವೊಂದು ಬದಲಾವಣೆ ಮಾರ್ಪಾಡು ಮಾಡಿಕೊಳ್ಳುತ್ತಾ ಸಾಗುವುದು ನಮಗೆಲ್ಲ ತಿಳಿದ ವಿಚಾರವೆ ಆಗಿದೆ. ಸರಕಾರಿ ಬಸ್ ಎಂದು ಅಸಡ್ಡೆ ಮಾಡುತ್ತಿದ್ದ ಜನರೇ ಈಗ ಸರಕಾರಿ ಬಸ್ ಗೆ ಅಧಿಕ ಮಾನ್ಯತೆ ನೀಡುತ್ತಿದ್ದಾರೆ. ಹಾಗಾಗಿ ಬಸ್ ನಲ್ಲಿ ನಿತ್ಯ ಪ್ರಯಾಣ ಮಾಡುವವರು ಹೆಚ್ಚಾಗಿದ್ದಾರೆ‌.

North Western Karnataka Road Transport Corporation

ಅದರಲ್ಲಿಯೂ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಈ ಹಿಂದಿಗಿಂತಲೂ ಅಧಿಕ ಆಗಿದೆ ಹಾಗಾಗಿ ಸರಕಾರಿ ಬಸ್ ನಲ್ಲಿ ಅನ್ಯಾಯ ಅಪರಾಧ ಇತ್ಯಾದಿ ನಡೆಯಬಾರದು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ನೂತನ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗುತ್ತಿದೆ.

ಕರ್ನಾಟಕದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ರವರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾತನಾಡಿ, ಸರ್ಕಾರದ ಆಡಳಿತ ಅವಧಿಯಲ್ಲಿ ಸಾರಿಗೆ ಇಲಾಖೆಯ ಮುಂದಿನ ಯೋಜನೆ ಬಗ್ಗೆ ತಿಳಿಸಿದ್ದಾರೆ. ಪ್ರಯಾಣಿಕರ ಹಿತರಕ್ಷಣೆ ಉದ್ದೇಶಕ್ಕಾಗಿ ಸುರಕ್ಷತೆ ಪ್ರಯಾಣಕ್ಕೆ ಆದ್ಯತೆ ನೀಡುವ ಸಲುವಾಗಿ ವಾಯುವ್ಯ ಸಾರಿಗೆಯಲ್ಲಿ ನೂತನ ಸಿಸಿ ಕ್ಯಾಮರಾ ಆಧಾರಿತ ಬಸ್ ಬಿಡುಗಡೆ ಮಾಡಲು ಸರಕಾರ ಚಿಂತನೆ ನಡೆಸಿದ್ದಾಗಿ ಸಾರಿಗೆ ಸಚಿವರು ತಿಳಿಸಿದ್ದಾರೆ.

ಉದ್ದೇಶ ಏನು?

ಸಾರಿಗೆ ಇಲಾಖೆಯಲ್ಲಿ ಸಿಸಿ ಕ್ಯಾಮರಾ ಆಧಾರಿತ 425 ಬಸ್ ಗಳು ಬರಲಿವೆ. ಇದು ಪ್ರಯಾಣಿಕರಿಗೆ ಸುರಕ್ಷತೆಯ ಪ್ರಯಾಣಕ್ಕೆ ಸಹಕಾರಿ ಆಗಲಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆಯ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲಿ ಯಾರಿಂದ ಅಪಘಾತ ಆಗಿದ್ದು ಎಂಬುದಕ್ಕೆ ಉತ್ತರವು ದೊರಕಲಾರದು. ಅದೇ ರೀತಿಯಲ್ಲಿ ಬಸ್ ರಶ್ ಇದ್ದ ಸಂದರ್ಭದಲ್ಲಿ ಸಹ ಪ್ರಯಾಣಿಕರ ಅನುಚಿತ ವರ್ತನೆ ನಿಂಧನೆ ಮತ್ತು ಚಾಲಕರ ನಿರ್ಲಕ್ಷ್ಯ, ಅತೀ ವೇಗದ ವಾಹನ ಚಲಾವಣೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಸಂಘರ್ಷ ಆದಾಗಲೂ ಸರಿಯಾದ ಸಾಕ್ಷಿ ಸಿಗಲಾರದು ಈ ಎಲ್ಲ ಸಮಸ್ಯೆ ಪರಿಹಾರವನ್ನು ನೀಡುವ ಉದ್ದೇಶಕ್ಕಾಗಿ ಸಿಸಿ ಕ್ಯಾಮರಾ ಮತ್ತು GPS ಆಧಾರಿತ ಹೊಸ ಬಸ್ ಪರಿಚಯಿಸುವ ಉದ್ದೇಶವು ಹೊಂದಿರುವುದನ್ನು ನಾವು ಕಾಣಬಹುದು. ಇದರಿಂದಾಗಿಯೇ ಸಾರಿಗೆ ಇಲಾಖೆಗೆ ಸರ್ಕಾರಿ ಬಸ್ ಎಲ್ಲಿ ಹೋಗಿದೆ ಇತರ ಪ್ರಯಾಣದ ಮಾಹಿತಿಯ ಕ್ಷಣಾರ್ಧದಲ್ಲಿ ತಿಳಿಯುತ್ತದೆ.

ವಾಹನ ಸವಾರರಿಗೆ ಸಿಕ್ತು ಬಿಗ್‌ ಟ್ವೀಸ್ಟ್.!! ಕೋರ್ಟ್ ಮಹತ್ವದ ನಿರ್ಧಾರ

ಪ್ರಾರಂಭದಲ್ಲಿ ವಾಯುವ್ಯ ಸಾರಿಗೆಯಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಲಿದೆ. ವಾಯುವ್ಯ ಸಾರಿಗೆಯು ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದು ಸಾರಿಗೆಯ ಸಂಸ್ಥೆಗಳು ತಪ್ಪು ಇಲ್ಲದಿದ್ದರು ಇದೆ ಅಪಘಾತಕ್ಕೆ ಚಾಲಕರು ಕಾರಣರಾಗದಿದ್ದರೂ ಪರಿಹಾರವನ್ನು ನೀಡಲು ಜನರು ಮನವಿಯನ್ನು ಮಾಡುತ್ತಾರೆ. ಇದೇ ಕಾರಣಕ್ಕೆ ಅನೇಕ ಪ್ರಕರಣ ಸಾರಿಗೆ ಇಲಾಖೆ ಈಗಲೂ ಸಿಲುಕಿ ಕೊಂಡಿದೆ. ಇದುವರೆಗೆ ಅಪಘಾತ ಪರಿಹಾರ ನೀಡುವಂತೆ ಅನೇಕರು ಮನವಿ ಬಂದಿದ್ದು ಒಟ್ಟು 63 ಕೋಟಿ ರೂಪಾಯಿ ಇನ್ನು ಸಹ ಪಾವತಿ ಮಾಡಲು ಬಾಕಿ ಇದೆ. ಸಂಸ್ಥೆಯ ಚಾಲಕರನ್ನು ನಿರಪರಾಧಿ ಎನ್ನಲು ಯಾವ ಸಾಕ್ಷಿ ಕೂಡ ಇರಲಾರದು ಹಾಗಾಗಿ ಅಂತಹ ಸಾಕ್ಷಿ ಇನ್ಮುಂದೆ ಖಂಡಿತಾ ಸಿಗುತ್ತದೆ ಎನ್ನಬಹುದು.

ಅತ್ಯಾಧುನಿಕ ವ್ಯವಸ್ಥೆ
425 ಬಸ್ ನಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಸಿಸಿ ಕ್ಯಾಮರಾ ಮೂಲಕ ಕ್ಯಾಮರಾ ಫುಟೇಜ್ ಸಂಗ್ರಹ ಮಾಡಬಹುದು. 1TBನಷ್ಟು ಫುಟೇಜ್ ಸಂಗ್ರಹ ಮಾಡಲು ಅವಕಾಶ ಇದ್ದು 15 ದಿನದ ದೃಶ್ಯಾವಳಿಗಳನ್ನು ಸಂಗ್ರಹಿಸಬಹುದು. ಇದನ್ನು ಸುಲಭವಾಗಿ ಪೆನ್ ಡ್ರೈವ್ ನಲ್ಲಿ ಸಂಗ್ರಹವನ್ನು ಮಾಡಿಡ ಬಹುದು. ಈ ನೂತನವಾದ ವ್ಯವಸ್ಥೆ ಜಾರಿಯಾದ ಬಳಿಕ ಸುಳ್ಳು ಮೊಕದಮ್ಮೆ ದಾಖಲಿಸಿ ಅಪಘಾತ ಪರಿಹಾರ ಪಡೆಯುವವರ ಪ್ರಮಾಣ ಕೂಡ ಕಡಿಮೆ ಆಗಲಿದೆ.

ಇತರೆ ವಿಷಯಗಳು:

ದೇಶದ ಜನತೆಗೆ ಬಿಗ್‌ ಶಾಕ್.!!‌ ರೇಷನ್‌ ಕಾರ್ಡ್‌ ಇದ್ದವರಿಗಾಗಿ 2 ಮಹಾ ನಿರ್ಧಾರ

ಗೃಹಲಕ್ಷ್ಮಿಯರೇ ಹುಷಾರ್.!!‌ ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ

Leave a Reply

Your email address will not be published. Required fields are marked *