ಹಲೋ ಸ್ನೇಹಿತರೇ, ಭಾರತ ಸರ್ಕಾರ ತನ್ನ ಪ್ರಜೆಗಳಿಗಾಗಿ ಅವರ ಜೀವನಶೈಲಿಯನ್ನು ಸುಧಾರಿಸುವುದಕ್ಕಾಗಿ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ಸರ್ಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವುದಕ್ಕಾಗಿ ಕೂಡ ಸರ್ಕಾರ ಸಾಕಷ್ಟು ಮೂಲಗಳನ್ನು ಕಂಡು ಹುಡುಕಿದೆ. ಇದೇ ಕಾರಣದಿಂದಾಗಿ ಮೇಲ್ವರ್ಗದ ಹಾಗೂ ಬಡತನದ ರೇಖೆಗಿಂತ ಕೆಳವರ್ಗದ ಜನರನ್ನ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸುವ ಕೆಲಸವನ್ನು ಕೂಡ ಮಾಡಿದೆ.
ಇದೇ ಕಾರಣಕ್ಕಾಗಿ ಸರ್ಕಾರ ಎಪಿಎಲ್ BPL ಕಾರ್ಡ್ ಗಳ ಸೃಷ್ಟಿಯನ್ನು ಮಾಡಿರೋದು. ಈ ರೇಷನ್ ಕಾರ್ಡುಗಳ ಮೂಲಕವೇ ಬಡವರ್ಗದ ಜನರಿಗೆ ಸೇರಬೇಕಾಗಿರುವಂತಹ ಪ್ರತಿಯೊಂದು ಯೋಜನೆಯ ಮತ್ತು ಸೌಲಭ್ಯಗಳನ್ನು ಸರ್ಕಾರವು ಒದಗಿಸುವಂತಹ ಕೆಲಸವನ್ನು ಮಾಡುತ್ತದೆ.
ಹೀಗೆ ಅಂದ ಮಾತ್ರಕ್ಕೆ ಪ್ರತಿಯೊಬ್ಬರಿಗೂ ಸಹ BPL ರೇಷನ್ ಕಾರ್ಡ್ ಸಿಗುತ್ತೆ ಅಂತ ಅಂದುಕೊಳ್ಳಬೇಡಿ. ಯಾಕೆಂದ್ರೆ ಈಗ ಸರ್ಕಾರದ ಕಣ್ಣಿಗೆ ಮಣ್ಣನ್ನು ಎರಚಿ ಸಾಕಷ್ಟು ಆರ್ಥಿಕವಾಗಿ ಸ್ಥಿತಿವಂತರಾಗಿರುವಂತಹ ಜನರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನಕಲಿ ದಾಖಲೆಗಳನ್ನು ನೀಡುವ ಮೂಲಕ ಹೊಂದಿರುವುದನ್ನು ನೀವು ಕಾಣಬಹುದಾಗಿದೆ. ಈ ಮೂಲಕ ಅರ್ಹ ಆಗಿರುವಂತಹ ಜನರಿಗೆ ಸೇರಬೇಕಾಗಿರುವಂತಹ ಸೇವೆ ಸೌಲಭ್ಯಗಳು ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಕೆಲವು ಅನರ್ಹ ಅಯೋಗ್ಯರಿಗು ಕೂಡ ಸೇರ್ತಾಯಿದೆ ಅನ್ನೋದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ.
ಮಾಹಿತಿ ಪ್ರಕಾರ ಈ ರೀತಿಯ ನಕಲಿ ದಾಖಲೆಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವಂತಹ ಆರ್ಥಿಕವಾಗಿ ಚೆನ್ನಾಗಿರುವಂತಹ ಕುಟುಂಬದ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವ ಕೆಲಸವನ್ನು ಆಹಾರ ಇಲಾಖೆ ಮಾಡ್ತಾಯಿದೆ. ಇನ್ನೂ ಸಾಕಷ್ಟು ಪ್ರಕರಣಗಳಲ್ಲಿ ಈ ರೀತಿ ತಪ್ಪು ಮಾಡಿರುವುದಕ್ಕಾಗಿ ಕಾನೂನು ಪ್ರಕರಣಗಳನ್ನು ಜರುಗಿಸುವ ಸಾಧ್ಯತೆ ಸಹ ಇದೆ.
ಫ್ರೀ ಬಸ್ ಸೌಲಭ್ಯ ಪಡೆಯುವವರಿಗೆ ಶಾಕ್.!! ಸಾರಿಗೆ ಸಚಿವರಿಂದ ಹೊಸ ಅಪ್ಡೇಟ್
ಅದಕ್ಕಾಗಿ ಅದಕ್ಕಿಂತ ಮುಂಚೆನೇ ನಿಮ್ಮ ಕಾರ್ಡುಗಳನ್ನು ಸರೆಂಡರ್ ಮಾಡಿಬಿಡಿ ಎನ್ನುವುದಾಗಿ ಕೂಡ ಹೇಳಲಾಗುತ್ತಿದೆ. ಇನ್ನು ನೀವು ಕೃಷಿಕರಾಗಿದ್ದರೂ ಸಹ ಇಂತಿಷ್ಟು ಜಮೀನಿಗಿಂತ ಹೆಚ್ಚಿಗೆ ಜಮೀನು ನಿಮ್ಮ ಬಳಿ ಇದ್ದರೆ ನಿಮಗೂ ಸಹ BPL ರೇಷನ್ ಕಾರ್ಡ್ ಸಿಗೋದಿಲ್ಲ ಅನ್ನೋದನ್ನು ತಿಳಿದುಕೊಳ್ಳಿ.
ಇದಕ್ಕಿಂತ ಹೆಚ್ಚಿನ ಜಮೀನು ಇರಬಾರದು:
ಹೌದು ಆಹಾರ ಇಲಾಖೆಯ ನಿಯಮಗಳ ಪ್ರಕಾರ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುವಂತಹ ಕುಟುಂಬದವರು ಮೂರು ಹೆಕ್ಟೇರ್ಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದರೆ ಅಥವಾ ಭೂಮಿಯನ್ನು ಹೊಂದಿದ್ದರೆ ಯಾವುದೇ ಕಾರಣಕ್ಕೂ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲು ಸಾಧ್ಯವಿಲ್ಲ ಎಂಬುದಾಗಿ ನಿಯಮಾವಳಿಗಳಲ್ಲಿ ಬರೆಯಲಾಗಿದೆ.
ಹೀಗಾಗಿ ನೀವು ಕೃಷಿಕರೇ ಆಗಿದ್ದರೂ ಸಹ ನೀವು ಈ ನಿಯಮಗಳ ಅಡಿಯಲ್ಲಿ ಈ ಭೂಮಿಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದ್ರೆ ನಿಮಗೆ BPL ರೇಷನ್ ಕಾರ್ಡ್ ನೀಡಲಾಗುವುದಿಲ್ಲ ಹಾಗೂ ಈಗಾಗಲೇ ನಿಮ್ಮ ಬಳಿ ಇದ್ದರೆ ಕೂಡಲೆ ಸರಂಡರ್ ಮಾಡಿಬಿಡಿ. ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ ಹಾಗೂ ಇದರಿಂದ ನಿಮಗೆ ಅಧಿಕಾರಿಗಳಿಂದ ವಾರ್ನಿಂಗ್ ಸಿಗುವಂತಹ ಸಾಧ್ಯತೆ ಕೂಡ ಇರುತ್ತದೆ.
ಇತರೆ ವಿಷಯಗಳು:
ದೇಶದ ಜನತೆಗೆ ಬಿಗ್ ಶಾಕ್.!! ರೇಷನ್ ಕಾರ್ಡ್ ಇದ್ದವರಿಗಾಗಿ 2 ಮಹಾ ನಿರ್ಧಾರ
ವಾಹನ ಸವಾರರಿಗೆ ಸಿಕ್ತು ಬಿಗ್ ಟ್ವೀಸ್ಟ್.!! ಕೋರ್ಟ್ ಮಹತ್ವದ ನಿರ್ಧಾರ