ಹಲೋ ಸ್ನೇಹಿತರೇ, ದೇಶಾದ್ಯಂತ ಬಡ & ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಪ್ರಾರಂಭಿಸಿತು. ಈಗ ರೇಷನ್ ಕಾರ್ಡ್ ಬಗ್ಗೆ ಕೆಲ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ನೀವು ಪಡಿತರ ಚೀಟಿದಾರರಾಗಿದ್ದರೆ ನಿಮಗಾಗಿ ಮಹತ್ವದ ಮಾಹಿತಿಯೊಂದಿದೆ. ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಕೇಂದ್ರ ಸರ್ಕಾರ ಪಡಿತರ & ಆಧಾರ್ ಲಿಂಕಿಂಗ್ ಗೆ ನಿಗಡಿಗೊಳಿಸಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ.
ರೇಷನ್ ಕಾರ್ಡ್-ಆಧಾರ್ ಲಿಂಕ್ ಮಾಡಲು 3 ತಿಂಗಳ ಗಡುವು ವಿಸ್ತರಣೆ:
ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, ಆಧಾರ್ & ರೇಷನ್ ಕಾರ್ಡ್ ಲಿಂಕ್ ಮಾಡಲು 3 ತಿಂಗಳವರೆಗೆ ಗಡುವು ವಿಸ್ತರಿಸಿದೆ. ಈ ಬಗ್ಗೆ ಆಹಾರ & ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೆ ನಿಗಡಿಗೊಳಿಸಿದ್ದ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
“ಒಂದು ರಾಷ್ಟ್ರ-ಒಂದು ಪಡಿತರ ಚೀಟಿ” !
ಕೋವಿಡ್-19 ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ “ಒಂದು ರಾಷ್ಟ್ರ-ಒಂದು ಪಡಿತರ ಚೀಟಿ” ಅನ್ನು ಘೋಷಿಸಿದೆ. ಇದರ ಅಧಿಯಲ್ಲಿ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ವಾಹನ ಸವಾರರಿಗೆ ಸಿಕ್ತು ಬಿಗ್ ಟ್ವೀಸ್ಟ್.!! ಕೋರ್ಟ್ ಮಹತ್ವದ ನಿರ್ಧಾರ
ವಾಸ್ತವವಾಗಿ, ಕೆಲವರು ಒಂದಕ್ಕಿಂತ ಅಧಿಕ ರೇಷನ್ ಕಾರ್ಡ್ ಹೊಂದಿದ್ದು, ವಿವಿಧೆಡೆ ಉಚಿತ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ, ಪಡಿತರ ಚೀಟಿಗಳಲ್ಲಿ ಮೃತರ ಹೆಸರನ್ನು ತೆಗೆಯದೆ ಸರ್ಕಾರದ ಸವಲತ್ತುಗಳನ್ನು ಪಡೆಯಲಾಗುತ್ತಿದೆ ಎಂಬ ಬಗ್ಗೆ ಹಲವು ದೂರುಗಳನ್ನು ಸ್ವೀಕರಿಸಲಾಗಿದೆ. ಇಂತಹ ಆಕ್ರಮಗಳನ್ನು ತಡೆಗಟ್ಟಲು ಹಾಗೂ ಅಗತ್ಯವಿರುವವರಿಗೆ ಪಡಿತರ ಚೀಟಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಇದೀಗ ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಸರ್ಕಾರವು ಇನ್ನೂ 3 ತಿಂಗಳವರೆಗೆ ಸಮಯಾವಕಾಶ ನೀಡಿರುವುದರಿಂದ ಜೂನ್ ಬಳಿಕವೂ ಅರ್ಹ ಫಲಾನುಭವಿಗಳು ಪಡಿತರ ಪ್ರಯೋಜನವನ್ನು ಪಡೆಯುವುದನ್ನು ಮುಂದುವರೆಸುತ್ತಾರೆ. ಆದರೆ, ಸರ್ಕಾರದಿಂದ ನೀಡಲಾಗುತ್ತಿರುವ ಅಗ್ಗದ ಪಡಿತರ & ಉಚಿತ ಪಡಿತರ ಪ್ರಯೋಜನವನ್ನು ಯಾವುದೇ ಅಡೆತಡೆ ಇಲ್ಲದೆ ಪಡೆಯಲು ಬಯಸಿದರೆ ಸೆಪ್ಟೆಂಬರ್ 30, 2024ರ ಮೊದಲು ನಿಮ್ಮ ಆಧಾರ್-ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಮರೆಯಬೇಡಿ.
ಇತರೆ ವಿಷಯಗಳು:
ದೇಶದ ಜನತೆಗೆ ಬಿಗ್ ಶಾಕ್.!! ರೇಷನ್ ಕಾರ್ಡ್ ಇದ್ದವರಿಗಾಗಿ 2 ಮಹಾ ನಿರ್ಧಾರ
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ