ಹಲೋ ಸ್ನೇಹಿತರೇ, ಬಿಪಿಎಲ್ ಕಾರ್ಡ್ ಅನ್ನೋದು ಸರಕಾರದಿಂದ ಬಡವರ್ಗದ ರೇಖೆಗಿಂತ ಕೆಳಗಿರುವಂತಹ ಜನರಿಗೆ ಯೋಜನೆಗಳನ್ನು ಹಾಗೂ ಉಚಿತ ಪಡಿತರವನ್ನು ನೀಡುವುದಕ್ಕೆ ಬಳಸಿಕೊಳ್ಳಲಾಗುವಂತಹ ಒಂದು ಮಾಧ್ಯಮ ಎಂದು ಹೇಳಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಅರ್ಹ ವಾಗಿರುವಂತಹ ಜನರಿಗೆ ಉಚಿತ ಪಡಿತರ ಸೇರಿದಂತೆ ಬೇರೆ ಬೇರೆ ಸೌಲಭ್ಯಗಳನ್ನು ಸರ್ಕಾರ ನೀಡುವಂತಹ ಕೆಲಸವನ್ನು ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.
ಮನೆಯಲ್ಲಿ ಕೆಲವೊಮ್ಮೆ ಒಳ್ಳೆಯ ರೀತಿಯಲ್ಲಿ ಕೆಲಸ ಇಲ್ದೆ ಇರುವಂತಹ ಜನರು ಇಲ್ಲದೆ ಇದ್ದಾಗ ಅಥವಾ ಉತ್ತಮ ಆದಾಯ ಹೊಂದಿರದೆ ಇದ್ದಾಗ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುವಂತಹ ಸರ್ಕಾರಿ ಸೌಲಭ್ಯಗಳು ಸಾಕಷ್ಟು ಉತ್ತಮವಾಗಿರುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ. ಅದರಲ್ಲಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದಿರುವಂತಹ ಇವರಿಗೆ ಸರ್ಕಾರ ಸಾಮಾನ್ಯ ಜನರಿಗೆ ಹೋಲಿಸಿದರೆ ಬೇರೆಯದೆ ಸೌಲಭ್ಯಗಳನ್ನ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಆದ್ರೆ ಇದೀಗ ಈಗ ಬಂದಿರುವಂತಹ ಹೊಸ ನಿಯಮಗಳ ಪ್ರಕಾರ ಇಲ್ಲಿ ಕೆಲಸ ಮಾಡುವಂತಹ ಜನರ ಕುಟುಂಬದವರಿಗೆ BPL ರೇಷನ್ ಕಾರ್ಡ್ ನ್ನು ನೀಡಲು ಸಾಧ್ಯವಿಲ್ಲ ಹಾಗೂ ಈಗಾಗಲೇ ಅದನ್ನು ಹೊಂದಿದ್ದರೆ ಅದನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಹಾಗಾದ್ರೆ ಆ ಉದ್ಯೋಗ ಎಂತಹದು ಎಂಬುದನ್ನು ನಾವು ತಿಳಿಯೋಣ.
ಕಿಸಾನ್ 17 ನೇ ಕಂತು ಈ ದಿನ ಬಿಡುಗಡೆ! ಫಲಾನುಭವಿಗಳ ಪಟ್ಟಿ ಇಲ್ಲಿದೆ
ಈ ಉದ್ಯೋಗದಲ್ಲಿ ಇದ್ರೆ ಬಿಪಿಎಲ್ ರೇಷನ್ ಕಾರ್ಡ್ ಇಲ್ಲ.
ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ನೀಡುವುದಕ್ಕೆ ಕೂಡ ಸರ್ಕಾರದಿಂದ ಸಾಕಷ್ಟು ಮಾನ್ಯತೆಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ವಿಶೇಷವಾಗಿ BPL ರೇಷನ್ ಕಾರ್ಡ್ ಅನ್ನು ನೀಡುವುದಕ್ಕೆ ಪ್ರಮುಖವಾದ ಮಾನದಂಡ ಅಂದ್ರೆ ಅದು ಆರ್ಥಿಕವಾದ ಪರಿಸ್ಥಿತಿ. ಆರ್ಥಿಕ ಪರಿಸ್ಥಿತಿಯನ್ನು ನೋಡೋದಕ್ಕಿಂತ ಮುಂಚೆ ನಿಮ್ಮ ಕುಟುಂಬದ ಸದಸ್ಯರ ಆದಾಯ ಮತ್ತು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋದನ್ನ ಸಹ ನೋಡಲಾಗುತ್ತೆ.
ನೀವು ಸರ್ಕಾರಿ ನೌಕರಿಯಲ್ಲಿ ಇದ್ದರೆ, ಸಾಮಾಜಿಕವಾದ ವಲಯದ ಉದ್ಯಮದಲ್ಲಿ ಕೆಲಸವನ್ನು ಮಾಡ್ತಾ ಇದ್ರೆ ಅಥವಾ ಮಂಡಳಿಗಳಲ್ಲಿ ಕೆಲಸ ಮಾಡ್ತಾ ಇದ್ರೆ, ಯಾವುದೇ ಸರ್ಕಾರಿ ನಿಗಮಗಳ ಉದ್ಯೋಗದ ಕೆಲಸ ಮಾಡ್ತಾ ಇದ್ರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲು ಸಾಧ್ಯ ಇಲ್ಲ. ಇನ್ನು ನೀವು ಸ್ವಾಯತ್ತ ಮಂಡಳಿಯಲ್ಲಿ ಕೆಲಸವನ್ನು ಮಾಡ್ತಾ ಇದ್ರು ಸಹ ನಿಮಗೆ BPL ರೇಷನ್ ಕಾರ್ಡ್ ನೀಡುವುದಿಲ್ಲ ಮತ್ತು ನೀಡಿದರೆ ಅದರ ರದ್ದುಗೊಳಿಸಲಾಗುತ್ತದೆ.
ಸಹಕಾರಿ ಸಂಸ್ಥೆಗಳಲ್ಲಿ ಒಂದು ವೇಳೆ ನೀವು ಖಾಯಂ ಉದ್ಯೋಗಿಯಾಗಿದ್ರೆ ನಿಮಗೂ ಸಹ ಸಿಗೋದಿಲ್ಲ. ಆಸ್ಪತ್ರೆಯಲ್ಲಿ ಕೆಲಸವನ್ನು ಮಾಡುವಂತಹ ವೈದ್ಯರು ಹಾಗೂ ವಕೀಲರು ಮತ್ತು ಲೆಕ್ಕಪರಿಶೋಧಕರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ನೀಡುವಂತಹ ಸಾಧ್ಯತೆ ಇಲ್ಲ ಎಂಬುದನ್ನು ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸರ್ವೇಸಾಮಾನ್ಯವಾಗಿ ಇವರು ಆರ್ಥಿಕವಾಗಿ ಉತ್ತಮ ಸ್ಥಾನವನ್ನು ಹೊಂದಿರುತ್ತಾರೆ ಅನ್ನೋದನ್ನ ನಾವಿಲ್ಲಿ ಸ್ಪಷ್ಟವಾಗಿ ಗಮನಿಸಬಹುದಾಗಿದೆ.
ಇತರೆ ವಿಷಯಗಳು:
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್.! ಬಂದೇ ಬಿಡ್ತು ಒಂದು ರಾಷ್ಟ್ರ-ಒಂದು ಪಡಿತರ ಚೀಟಿ
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ