ಹಲೋ ಸ್ನೇಹಿತರೇ, ನಮ್ಮ ರಾಜ್ಯ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ಗ್ರಹ ಜ್ಯೋತಿ ಯೋಜನೆಯ ಅಡಿಯಲ್ಲಿ ರಾಜ್ಯದ ಜನರಿಗೆ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಅನ್ನು ನೀಡುವಂತಹ ಕೆಲಸವನ್ನು ಮಾಡುತ್ತಾರೆ. ಇದೆ ಆದ್ರೆ ಕೇಂದ್ರ ಸರ್ಕಾರವು ಇದಕ್ಕಿಂತಲೂ ಒಂದು ಹೆಜ್ಜೆ ಮೇಲೆ ಹೋಗಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಜಾರಿಗೆ ತಂದಿದ್ದು ಇದ್ರ ಬಗ್ಗೆ ಇವತ್ತಿನ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳುವ.
ಈ ಯೋಜನೆಯ ಮೂಲಕ ಈಗ ಹೆಚ್ಚಾಗುತ್ತಿರುವಂತಹ ವಿದ್ಯುತ್ ಬಳಕೆಗೆ ಪರ್ಯಾಯ ರೂಪ ಎನ್ನುವ ರೀತಿಯಲ್ಲಿ ಸೋಲಾರ್ ಸಿಸ್ಟಮ್ ಮೂಲಕ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳಿ
ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನ್ನು ಪಡೆದುಕೊಳ್ಳಬಹುದಾಗಿದ್ದು ಸಾಮಾನ್ಯವಾಗಿ ವಿದ್ಯುತ್ ಬಳಕೆಯ ಖರ್ಚು ಸಹ ಇದರಿಂದಾಗಿ ಕಡಿಮೆಯಾಗಲಿದೆ. ಇದರಿಂದಾಗಿ ಭಾರತ ದೇಶದಲ್ಲಿ ಬರೋಬ್ಬರಿ ಒಂದು ಕೋಟಿ ಕುಟುಂಬಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣದ ಖರ್ಚಿನ ರೂಪದಲ್ಲಿ ಕಡಿಮೆಯಾಗಲಿದೆ.
ಪರಿಸರ ಸ್ನೇಹಿ ಆಗಿರುವಂತಹ ಸೋಲಾರ್ ವಿದ್ಯುತ್ ಬಳಕೆಯಿಂದಾಗಿ ಕೇವಲ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ನಿಮ್ಮ ಖರ್ಚನ್ನು ಕೂಡ ವಿದ್ಯುತ್ ಬಳಕೆಯಲ್ಲಿ ಕಡಿಮೆ ಮಾಡಬಹುದಾಗಿದೆ. ಈ ಯೋಜನೆಯನ್ನು ಪಡೆದುಕೊಳ್ಳಲು ನಿಮ್ಮ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ನೌಕರರು ಇರಬಾರದು. ಸೌರ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದಕ್ಕೆ ವಾರ್ಷಿಕವಾಗಿ 1.50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನದಾದ ಆದಾಯವು ಇರಬಾರದು. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಬಳಿಯಲ್ಲಿ ಕೆಲವೊಂದು ಪ್ರಮುಖ ಡಾಕ್ಯುಮೆಂಟ್ಗಳು ಸಹ ಇರಬೇಕು.
ಜನರನ್ನು ಕಂಗೆಡಿಸುತ್ತಿದೆ ಟೊಮೊಟೋ ಬೆಲೆ.!! ಇಂದಿನ ಬೆಲೆ ಎಷ್ಟು ಗೊತ್ತಾ??
ಈ ಡಾಕ್ಯುಮೆಂಟ್ಸ್ ಇರಲೇಬೇಕು
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಕರೆಂಟ್ ಬಿಲ್
* ನಿವಾಸ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ಬ್ಯಾಂಕ್ ಪಾಸ್ ಬುಕ್
* ಆದಾಯ ಪ್ರಮಾಣ ಪತ್ರ
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲನೆಯದಾಗಿ ನೀವು ಯೋಜನೆಯ ಅಧಿಕೃತವಾದ ವೆಬ್ ಸೈಟ್ ಗೆ ಹೋಗಬೇಕಾಗಿರುತ್ತದೆ.
* ಅಲ್ಲಿ ಕಾಣಿಸುವಂತಹ Apply for Rooftop Solar ಆಪ್ಷನ್ ಮೇಲೆ ಕ್ಲಿಕ್ ಅನ್ನು ಮಾಡಬೇಕಾಗಿರುತ್ತದೆ. ಇದಾದ ಆನಂತರ ತೆರೆದುಕೊಳ್ಳುವಂತಹ ಪುಟದಲ್ಲಿ ನಿಮ್ಮ ರಾಜ್ಯ ಮತ್ತು ಜಿಲ್ಲೆ ಸೇರಿದಂತೆ ಅನೇಕ ಆಯ್ಕೆ ಮಾಡುವುದಕ್ಕೆ ನಿಮಗೆ ಆಪ್ಷನ್ ಗಳು ಸಿಗುತ್ತವೆ ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ.
* ಇದಾದ ನಂತರ ನಿಮ್ಮ ವಿದ್ಯುತ್ ಇಲಾಖೆಯ ಹೆಸರು ಹಾಗೂ ನಿಮ್ಮ ಕಸ್ಟಮರ್ ಐಡಿ ನಂಬರ್ ಅನ್ನು ದಾಖಲಿಸಬೇಕಾಗುತ್ತದೆ.
* ಇದಾದ ನಂತರ ನೆಕ್ಸ್ಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಅರ್ಜಿ ಫಾರ್ಮ್ ಅನ್ನು ನೋಡಬಹುದಾಗಿದೆ. ಅಲ್ಲಿ ಕೇಳಲಾಗುವಂತಹ ಅನೇಕ ವಿವರಗಳನ್ನು ಮತ್ತು ಡಾಕ್ಯೂಮೆಂಟ್ ಗಳನ್ನು ಸಹ ನೀವು ಅರ್ಜಿ ಫಾರ್ಮ್ ನಲ್ಲಿ ಅಟ್ಯಾಚ್ ಮಾಡಿ ಸಬ್ಮಿಟ್ ಮಾಡಬೇಕಾಗಿರುತ್ತದೆ.
* ಕೊನೆಗೆ ಸಬ್ಮಿಟ್ ಬಟನ್ ನ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಅರ್ಜಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಮನೆಯ ಛಾವಣಿಯ ಮೇಲೆ ಸೌರಫಲಕವನ್ನು ಹಾಕಿಕೊಳ್ಳುವುದಕ್ಕೆ ಸರ್ಕಾರವೇ ಈ ಯೋಜನೆ ಅಡಿಯಲ್ಲಿ 78,000ಗಳ ವರೆಗೆ ಸಹಾಯಧನವನ್ನು ನೀಡುವುದರಿಂದಾಗಿ ಖಂಡಿತವಾಗಿ ಈ ಯೋಜನೆಯ ವಿರುದ್ಧವಾಗಿ ಯಾವುದೇ ಯೋಜನೆ ಬಂದರೂ ಕೂಡ ಇದೆ ಬೆಸ್ಟ್ ಎಂದು ಹೇಳಬಹುದು.
ಇತರೆ ವಿಷಯಗಳು:
ಕೇಂದ್ರ ಸರ್ಕಾರದ ಭರ್ಜರಿ ಸುದ್ದಿ.!! ಈ ಯೋಜನೆಯಡಿ 25 ವರ್ಷ ಕರೆಂಟ್ ಬಿಲ್ ಕಟ್ಟೋ ತಾಪತ್ರಯ ಇಲ್ಲ
ರೇಷನ್ ಕಾರ್ಡ್ ಉಳ್ಳವರಿಗೆ ಬಿಗ್ ಶಾಕ್.!!! ಇನ್ಮುಂದೆ ಈ 5 ನಿಯಮ ಪಾಲನೆ ಕಡ್ಡಾಯ