ಹಲೋ ಸ್ನೇಹಿತರೇ, ನಿರುದ್ಯೋಗಿ ಯುವಕ ಯುವತಿಯರಿಗೆ ತುಮಕೂರು ಜಿಲ್ಲಾ ನ್ಯಾಯಾಲಯ ಬರೋಬ್ಬರಿ 60 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು online ಮೂಲಕ ಅರ್ಜಿ ಹಾಕಿ. ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಹುದ್ದೆಯಗಳ ವಿವರ :-
ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸ್ಟೆನೋಗ್ರಾಫರ್, ಗುಮಾಸ್ತ, ಟೈಪಿಸ್ಟ್ ಮತ್ತು ಕಾಪಿಯಿಸ್ಟ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಂಬಂಧಿತ ಡಿಪ್ಲೊಮಾದೊಂದಿಗೆ 12 ನೇ ತರಗತಿಯನ್ನು ಪೂರ್ಣಗಿಂಡಿರಬೇಕು ಹಾಗೂ ಟೈಪಿಸ್ಟ್ ಹಾಗೂ ಕಾಪಿಯಿಸ್ಟ್ ಹುದ್ದೆಗೆ 12nd ಪಿಯುಸಿ ಪೂರ್ಣಗೊಂಡಿರಬೇಕು ಹಾಗೂ ಪ್ಯೂನ್ ಹುದ್ದೆಗೆ ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು.
ಖಾಲಿ ಇರುವ ಹುದ್ದೆಗಳು :-
- ಸ್ಟೆನೋಗ್ರಾಫರ್ ಗ್ರೇಡ್-III – 10.
- ಟೈಪಿಸ್ಟ್ಗೆ: 5.
- ಟೈಪಿಸ್ಟ್-ಕಾಪಿಯಿಸ್ಟ್ ಗೆ :5.
- ಪ್ಯೂನ್ ಹುದ್ದೆಗಳಿಗೆ :40.
ವಯಸ್ಸಿನ ಮಿತಿ :-
- ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 35 ವರ್ಷ
- ಸರ್ಕಾರದ ಮೀಸಲಾತಿ ನಿಯಮದನ್ವಯ SC or ST ಹಾಗೂ Cat-I ಅಭ್ಯರ್ಥಿಗಳಿಗೆ 5 ವರ್ಷಗಳ ಹಾಗೂ Cat-2A / 2B/ 3A & 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ಸಡಿಲಿಕೆಯಿದೆ.
ಶುಲ್ಕ :-
SC /ST / Cat-I / PH ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯಿದೆ ಮತ್ತು ಜನರಲ್ / ಕ್ಯಾಟ್-2ಎ / 2ಬಿ / 3ಎ & 3ಬಿ ಅಭ್ಯರ್ಥಿಗಳು 200 ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಸಲು ಕೊನೆಯ ದಿನ ಏಪ್ರಿಲ್ 11, 2024 ಆಗಿದೆ.
ಸಂಬಳದ ವಿವರ :-
ಹುದ್ದೆಗೆ ಆಯ್ಕೆ ಆದ ಸ್ಟೆನೋಗ್ರಾಫರ್ ಗ್ರೇಡ್-III ಅಭ್ಯರ್ಥಿಯ ತಿಂಗಳ ವೇತನ 27,650 ರೂ. ನಿಂದ 52,650 ರೂ.. ಟೈಪಿಸ್ಟ್ ಮತ್ತು ಕಾಪಿಯಿಸ್ಟ್ ನ ತಿಂಗಳ ವೇತನ 21,400 ರೂ. ನಿಂದ 42,000 ರೂ. ಮತ್ತು ಫ್ಯೂನ್ ಗೆ 18,000 ರೂ. ಯಿಂದ 28,950 ರೂ.
ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು :-
- ನಿಮ್ಮ ಆಧಾರ್ ಕಾರ್ಡ್. (Aadhar card)
- ವಿಳಾಸದ ಪುರಾವೆ. (address proof)
- ಜಾತಿ ಪ್ರಮಾಣಪತ್ರ.
- .ಶೈಕ್ಷಣಿಕ ಪ್ರಮಾಣಪತ್ರಗಳು.
- ಪಾಸ್ಪೋರ್ಟ್ ಸೈಜ್ ಫೋಟೋ.
ಹುದ್ದೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 10 2024 ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ ಭೇಟಿ ಮಾಡಿ. “ಸ್ಟೆನೋಗ್ರಾಫರ್ ಗ್ರೇಡ್-III, ಟೈಪಿಸ್ಟ್, ಟೈಪಿಸ್ಟ್-ಕಾಪಿಸ್ಟ್ & ಪ್ಯೂನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ” ಎಂಬ ಆಪ್ಷನ್ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಪೂರ್ಣವಾಗಿ ತಿಳಿಯಿರಿ. ನಂತರ ವೆಬ್ಸೈಟ್ ನಲ್ಲಿ ಆನ್ಲೈನ್ ನೇಮಕಾತಿ ಎಂಬ ಆಪ್ಷನ್ ಕ್ಲಿಕ್ ಮಾಡಿಕೊಂಡು ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿದ್ದೀರೋ ಆ ಹುದ್ದೆಯ ಆನ್ಲೈನ್ ಅರ್ಜಿ ಲಿಂಕ್ ಓಪನ್ ಮಾಡಿ ನಿಮ್ಮ ಹೆಸರು ವಿಳಾಸ ನಿಮ್ಮ ವಿದ್ಯಾರ್ಹತೆ, ನಿಮ್ಮ ಭಾವಚಿತ್ರ ಮತ್ತು ಎಲ್ಲಾ ದಾಖಲೆಯ ಪುರಾವೆಗಳನ್ನು ಭರ್ತಿ ಮಾಡಿ. ಶುಲ್ಕದ ಹಣವನ್ನು ಪಾವತಿಸಿ ಅರ್ಜಿ ಸಲ್ಲಿಸಿ.