ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ.!! ಮದ್ಯದ ದರಕ್ಕೆ ಸಿಕ್ತು ಟ್ವಿಸ್ಟ್

ಹಲೋ ಸ್ನೇಹಿತರೇ, ಮದ್ಯದ ದರಕ್ಕೆ ಲಗಾಮು ಹಾಕುವುದಕ್ಕಾಗಿ ಮದ್ಯ ಉತ್ಪಾದಕರು ಇತರೆ ರಾಜ್ಯಗಳಿಗೆ ನೀಡುತ್ತಿರುವ ಕನಿಷ್ಠ ಘೋಷಿತ ದರದಲ್ಲೇ ಕರ್ನಾಟಕಕ್ಕೂ ಮದ್ಯ ಪೂರೈಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

twist for the price of alcohol

ಈ ಉದ್ದೇಶ ಇಂದ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಹಾಗೂ ಶುಲ್ಕಗಳು) ನಿಯಮಗಳು-1968ಕ್ಕೆ ಮತ್ತೊಂದು ತಿದ್ದುಪಡಿ ತರಲು ಹಣಕಾಸು ಇಲಾಖೆ ಶುಕ್ರವಾರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಜುಲೈ 1ರಿಂದಲೇ ಈ ತಿದ್ದುಪಡಿಗಳೂ ಜಾರಿಗೆ ಬರಲಿವೆ.

ಮದ್ಯ ತಯಾರಕರು ಮತ್ತು ಪೂರೈಕೆದಾರರು ನಿಗದಿಪಡಿಸುವ ಘೋಷಿತ ಬೆಲೆಗೆ ಅಬಕಾರಿ ತೆರಿಗೆ ಮತ್ತು ಹೆಚ್ಚುವರಿ ಅಬಕಾರಿ ತೆರಿಗೆಗಳನ್ನು ಸೇರಿಸಿದ ಬಳಿಕವಾದ ಮಾರಾಟ ದರವನ್ನು ನಿರ್ಧರಿಸಲಾಗುತ್ತದೆ. ಬಹುತೇಕ ಮದ್ಯ ತಯಾರಿಕಾ ಕಂಪನಿಗಳು ಮತ್ತು ಪೂರೈಕೆದಾರರು ಇತರೆ ರಾಜ್ಯಗಳಿಗೆ ಕಡಿಮೆ ಘೋಷಿತ ದರಕ್ಕೆ ಮದ್ಯ ಪೂರೈಸುತ್ತಿದ್ದು, ಕರ್ನಾಟಕಕ್ಕೆ ಹೆಚ್ಚಿನ ಘೋಷಿತ ದರವನ್ನು ವಿಧಿಸುತ್ತಿವೆ. ಇದರಿಂದ ರಾಜ್ಯದಲ್ಲಿ ಮದ್ಯ ಖರೀದಿದಾರರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಅಬಕಾರಿ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಹೊಸ ನಿಯಮಗಳ ಪ್ರಕಾರ, ಎಲ್ಲ ಮದ್ಯ ತಯಾರಕರು, ಬ್ರೀವರಿ, ವೈನರಿ ಮಾಲೀಕರು ಮತ್ತು ಮದ್ಯ ಪೂರೈಕೆದಾರರು ಪ್ರತಿಯೊಂದು ಘೋಷಿತ ಬ್ರ್ಯಾಂಡ್‌ ಮದ್ಯದ ಘೋಷಿತ ದರದ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು. ಉತ್ಪಾದನಾ ವೆಚ್ಚದ ಮಾಹಿತಿಯನ್ನೂ ಲೆಕ್ಕ ಪರಿಶೋಧಕರು ಮತ್ತು ವೆಚ್ಚ ಪರಿಶೋಧಕರ ಪ್ರಮಾಣೀಕರಣದೊಂದಿಗೆ ಸಲ್ಲಿಸಬೇಕು.

ಪೋಸ್ಟ್‌ ಆಫೀಸ್‌ ನಿಂದ ಭರ್ಜರಿ ಕೊಡುಗೆ.!! ಯಾವುದು ಗೊತ್ತಾ ಈ ಸ್ಕೀಮ್

ರಾಜ್ಯಕ್ಕೆ ನೀಡುವ ಮದ್ಯದ ಘೋಷಿತ ಬೆಲೆಯು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಥವಾ ಸೇನಾ ಕ್ಯಾಂಟೀನ್‌ ಸ್ಟೋರ್ಸ್‌ ಇಲಾಖೆಗೆ ನೀಡುವ ಕನಿಷ್ಠ ಘೋಷಿತ ಬೆಲೆಗಿಂತ ಕಡಿಮೆ ಇರಬೇಕು ಅಥವಾ ಸಮನಾಗಿರಬೇಕು. ಇದರಲ್ಲಿ ಯಾವುದು ಕಡಿಮೆಯೋ ಅದನ್ನೇ ವಿಧಿಸಬೇಕು ಎಂಬ ತಿದ್ದುಪಡಿಯೂ ಇದೆ.

ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಿಸುತ್ತಿರುವ ಘೋಷಿತ ದರದ ಕುರಿತು ಅಲ್ಲಿನ ಸರ್ಕಾರಿ ಸಂಸ್ಥೆಗಳ ದೃಢೀಕರಣದೊಂದಿಗೆ ಸಲ್ಲಿಸಬೇಕು. ಯಾವುದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಘೋಷಿತ ದರ ಕಡಿಮೆ ಮಾಡಿದರೆ ಅದನ್ನು ರಾಜ್ಯಕ್ಕೂ ಅನ್ವಯಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.

‘ಬಹುತೇಕ ಮದ್ಯ ತಯಾರಕರು ಇತರ ರಾಜ್ಯಗಳಿಗಿಂತ ಹೆಚ್ಚಿನ ಘೋಷಿತ ದರದಲ್ಲಿ ಕರ್ನಾಟಕಕ್ಕೆ ಮದ್ಯ ಮಾರಾಟ ಮಾಡುತ್ತಿವೆ. ಈ ತಿದ್ದುಪಡಿ ಜಾರಿಯಾದ ಬಳಿಕ ಮದ್ಯದ ಘೋಷಿತ ಬೆಲೆಯೂ ಇಳಿಕೆಯಾಗಲಿದೆ. ಇದರಿಂದ ಬಹುತೇಕ ಬ್ರ್ಯಾಂಡ್‌ಗಳ ಮದ್ಯದ ದರಗಳು ಮತ್ತಷ್ಟು ಇಳಿಕೆಯಾಗಲಿವೆ’ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.

ಇತರೆ ವಿಷಯಗಳು:

ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್! ಖಾರಿಫ್ ಬೆಳೆಗಳ MSP ಹೆಚ್ಚಳ

ಜನಸಾಮಾನ್ಯರಿಗೆ ಬಿತ್ತು ಮತ್ತೊಂದು ಬರೆ.! ಪೆಟ್ರೋಲ್‌ & ಡೀಸೆಲ್ ದರ ಭಾರೀ ಏರಿಕೆ

Leave a Reply

Your email address will not be published. Required fields are marked *