ಹಿರಿಯ ನಾಗರಿಕರು ಮತ್ತು ಪಿಂಚಣಿದಾರರಿಗೆ ಗುಡ್‌ ನ್ಯೂಸ್.!!‌ ಯಾವುದು ಗೊತ್ತಾ ಈ ಹೊಸ ಸುದ್ದಿ

ಹಲೋ ಸ್ನೇಹಿತರೇ, ಪಿಂಚಣಿ ಪಡೆಯುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ನೀವು ಸರ್ಕಾರಿ ಪಿಂಚಣಿದಾರರಾಗಿರಿ ಇಲ್ಲವೇ ಹಿರಿಯ ನಾಗರಿಕ ಪಿಂಚಣಿದಾರರಾಗಿರಿ ಈ ಸುದ್ದಿಯನ್ನು ಹಿರಿಯ ನಾಗರಿಕರ ಮುಖದಲ್ಲಿ ಮಂದಹಾಸವನ್ನುಂಟು ಮಾಡುವುದು ಖಚಿತವಾಗಿದೆ. ಹೈಕೋರ್ಟ್‌ನಿಂದ ಪಿಂಚಣಿದಾರರಿಗೆ ಉತ್ತಮವಾದ ಭರವಸೆ ದೊರೆತಿದ್ದು ಇದೀಗ ಕೇಂದ್ರ ಸಹ ಪಿಂಚಣಿ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಹೊರಡಿಸಿದೆ.

Good news for pensioners

ಯಾವುದೇ ವಯಸ್ಸಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು

65 ವರ್ಷ ಮೇಲ್ಪಟ್ಟವರಿಗೆ ಈ ಹಿಂದೆ ಹೆಲ್ತ್ ಇನ್ಶೂರೆನ್ಸ್ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಆದರೀಗ ಇನ್ಶೂರೆನ್ಸ್ ರೆಗ್ಯುಲೇಟರಿ ಹಾಗೂ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ ನಿಯಮಗಳನ್ನು ಬದಲಾಯಿಸಿದೆ.

ಇದೀಗ ಯಾವುದೇ ವಯಸ್ಸಿನವರು ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬಹುದು. ಈಗ ಹಿರಿಯ ವಯಸ್ಸಿನ ನಾಗರೀಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದೆನಿಸಿದ್ದು ಈ ಮೊದಲು 65 ಮೇಲ್ಪಟ್ಟವರಿಗೆ ಈ ವಿಮೆ ಸೌಲಭ್ಯವಿರಲಿಲ್ಲ ಆದರೀಗ ನಿಯಮಗಳ ಬದಲಾವಣೆಗಳಿಂದ ಯಾವುದೇ ವಯಸ್ಸಿನವರು ವಿಮೆ ಯೋಜನೆಗೆ ಅರ್ಹರಾಗಿದ್ದಾರೆ.

ಕೋರ್ಟ್‌ಗಳಿಂದ ಕೂಡ ಪರಿಹಾರ

ಪೆನ್ಶನ್ ಸಂಬಂಧಿತವಾದ ಯಾವುದೇ ಕೇಸುಗಳು ಕೋರ್ಟ್‌ಗಳಲ್ಲಿ ಉಳಿದಿದ್ದರೆ ವರ್ಷಾನುಗಟ್ಟಲೆ ಕೋರ್ಟ್‌ಗಳಿಗೆ ಅಲೆಯಬೇಕಾದ ಪರಿಸ್ಥಿತಿ ಕೂಡ ಈಗಿಲ್ಲ. ಪಂಜಾಬ್ ಮತ್ತು ಹರ್ಯಾಣ ಕೋರ್ಟ್ ಈ ನಿಟ್ಟಿನಲ್ಲಿ ಮಹತ್ವವಾದ ಆದೇಶವನ್ನು ಹೊರಡಿಸಿದ್ದು ನಿವೃತ್ತಿ ಮತ್ತು ಪೆನ್ಶನ್ ಸಂಬಂಧಿತ ಕೇಸುಗಳನ್ನು ದೈನಂದಿನ ಪಾಳಿಯ ಪ್ರಕಾರ ಬಗೆಹರಿಸಲಾಗುತ್ತಿದ್ದು ಸಾಧ್ಯವಾದಷ್ಟು ಬೇಗ ಪರಿಹಾರ ನೀಡಲಾಗುತ್ತದೆ. ಇದು ಪೆನ್ಶನ್‌ದಾರರಿಗೆ ಸಾಕಷ್ಟು ಅನುಕೂಲವನ್ನುಂಟು ಮಾಡಲಿದೆ.

ತಪ್ಪಾದ ಕಡಿತಗಳಿಗೆ ಪರಿಹಾರ

ಪೆನ್ಶನ್‌ದಾರರಿಗೆ ಅಲಹಾಬಾದ್ ಹೈಕೋರ್ಟ್ ಕೂಡ ಪರಿಹಾರವನ್ನೊದಗಿಸಿದೆ. ತಪ್ಪಾದ ಸಂಬಳ ಪಾವತಿಯನ್ನಾಧರಿಸಿ ಗ್ರ್ಯಾಚ್ಯುವಿಟಿ ಕಡಿತವನ್ನು ನಡೆಸಿದಲ್ಲಿ 6% ಬಡ್ಡಿಯೊಂದಿಗೆ ಆ ಮೊತ್ತವನ್ನು ರಿಫಂಡ್ ಮಾಡಬೇಕು ಎಂದು ಆದೇಶಿಸಿದೆ.

ಈ ಎಲ್ಲಾ ಆದೇಶಗಳನ್ನು ಸುಪ್ರೀಂ ಕೋರ್ಟ್ ನಿರ್ಧಾರದನ್ವಯ ಹೊರಡಿಸಲಾಗಿದ್ದು ತಿಂಗಳೊಳಗೆ ಇದನ್ನು ಜಾರಿತರಬೇಕೆಂಬ ಆದೇಶವಿದೆ.

ಸರ್ಕಾರಿ ನೌಕರರೇ ಹುಷಾರ್.!!‌ ಈ ನಿಯಮ ಪಾಲನೆ ಕಡ್ಡಾಯ

ಹಿಮಾಚಲ ಹೈಕೋರ್ಟ್‌ನ ಉಡುಗೊರೆ

2016 ರ ಇಸುವಿಯಲ್ಲಿ ನಿವೃತ್ತರಾದ ಉದ್ಯೋಗಿಗಳಿಗೆ ರಿವೈಸ್ಡ್ ಪೇ ಸ್ಕೇಲ್ ಪ್ರಯೋಜನವನ್ನು ಹಿಮಾಚಲ ಹೈಕೋರ್ಟ್ ಆದೇಶಿಸಿದೆ. ಅಂದ್ರೆ 2016 ಮತ್ತು 2022 ರಲ್ಲಿ ನಿವೃತ್ತರಾದವರು ಇದ್ರ ಪ್ರಯೋಜವನ್ನು ಪಡೆಯುತ್ತಾರೆ. ನ್ಯಾಯಾಧೀಶರಾದ ಜ್ಯೋತ್ಸಾ ದುವಾ ಈ ಮಹತ್ವವಾದ ಆದೇಶವನ್ನು ಹೊರಡಿಸಿದ್ದಾರೆ.

ಇಪಿಎಫ್‌ಓನಿಂದ ಪರಿಹಾರ

ಉದ್ಯೋಗಿ ಪ್ರಾವಿಡೆಂಡ್ ಫಂಡ್ ಸಂಸ್ಥೆ ಕೂಡ ಪಿಎಫ್ ಖಾತೆದಾರರಿಗೆ ಪರಿಹಾರವನ್ನು ನೀಡಿದೆ. ಇದೀಗ ಖಾತೆದಾರರು ತಮ್ಮ ಹಾಗೂ ಆಪ್ತರ ಚಿಕಿತ್ಸೆಗಾಗಿ ಖಾತೆಯಿಂದ ರೂ 1ಲಕ್ಷದವರೆಗಿನ ಮೊತ್ತವನ್ನು ವಿದ್‌ಡ್ರಾ ಮಾಡಬಹುದಾಗಿದೆ.ಈ ಹಿಂದೆ ಈ ಮಿತಿ ರೂ 50,000 ವಾಗಿತ್ತು ಇದೀಗ ಈ ಮೊತ್ತವನ್ನು ರೂ 1 ಲಕ್ಷಕ್ಕೆ ಏರಿಸಲಾಗಿದೆ.

ಸಿಜಿಎಚ್‌ಎಸ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ

ಸೆಂಟ್ರಲ್ ಗವರ್ನ್‌ಮೆಂಟ್ ಹೆಲ್ತ್ ಸ್ಕೀಮ್ (ಸಿಜಿಎಚ್‌ಎಸ್) ಫಲಾನುಭವಿಗಳಿಗೆ ಕೂಡ ಅತಿ ಮುಖ್ಯವಾದ ಮಾಹಿತಿಯೊಂದಿದ್ದು, ಎಬಿಎಚ್‌ಎ ಐಡಿ ರಚಿಸುವ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ. ಇದೀಗ ಸಪ್ಟೆಂಬರ್ 24 ರೊಳಗೆ ಎಬಿಎಚ್‌ಎ ಐಡಿ/ಸಂಖ್ಯೆಯನ್ನು ಪಡೆದುಕೊಂಡರೆ ಸಾಕು ಹಾಗೂ ಸಿಜಿಎಚ್‌ಎಸ್‌ ಐಡಿಯನ್ನು ಎಬಿಎಚ್‌ಎ ಐಡಿ/ ಸಂಖ್ಯೆಗೆ ಅಕ್ಟೋಬರ್ 2024 ರೊಳಗೆ ಲಿಂಕ್ ಮಾಡಬೇಕು.

ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿಯ ಉಡುಗೊರೆ

ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಕೂಡ ಶುಭ ಸುದ್ದಿಯನ್ನು ನೀಡಿದೆ. ಸೀನಿಯರ್ ಸಿಟಿಜನ್ ಕೇರ್ FD ಯಲ್ಲಿ ಹೆಚ್ಚುವರಿಯಾದ 0.25% ಬಡ್ಡಿಯನ್ನು ನೀಡುತ್ತಿದೆ. ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿಗೆ ಹೂಡಿಕೆಯನ್ನು ಮಾಡುವ ಕೊನೆಯ ದಿನಾಂಕ ಜಲೈ 30 2024 ಆಗಿದೆ.

ಇತರೆ ವಿಷಯಗಳು:

ದುಬಾರಿಯಾಯ್ತು ಪೆಟ್ರೋಲ್ ಡೀಸೆಲ್; ಜನರ ಮೇಲೆ ಬೆಲೆ ಹೆಚ್ಚಳ ಹೊರೆ

ಮಧ್ಯಮ ವರ್ಗದವರಿಗೆ ಭರ್ಜರಿ ಸುದ್ದಿ.!! ಇಂದೇ ನಿಮ್ಮ ಖಾತೆ ಸೇರಲಿದೆ 15,000 ರೂ.

Leave a Reply

Your email address will not be published. Required fields are marked *