ಸರ್ಕಾರಿ ನೌಕರರಿಗೆ ಬಿಗ್‌ ಶಾಕ್.!!‌ ಕಛೇರಿಗೆ ತಡವಾಗಿ ಬರುವವರಿಗೆ ಈ ನಿಯಮ ಕಡ್ಡಾಯ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಮಹತ್ವದ ಆದೇಶವನ್ನು ನೀಡಿದೆ. ಇನ್ಮುಂದೆ ಬೆಳಗ್ಗೆ 9.15ಕ್ಕೆ ಕಚೇರಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಕರ್ನಾಟಕ ಸರ್ಕಾರ ಆದೇಶವನ್ನು ನೀಡಿದೆ. ಒಂದು ವೇಳೆ ತಡವಾದ್ರೆ ಅರ್ಧ ದಿನದ ಕ್ಯಾಶುಯಲ್ ರಜೆಯನ್ನು ಕಡಿತಗೊಳಿಸಲಾಗುವುದು ಎಂದು ಕಡ್ಡಾಯವಾದ ನಿಯಮವನ್ನು ಹೊರಡಿಸಲಾಗಿದೆ.

central government employees new rules

ಕೇಂದ್ರ ಸರ್ಕಾರ ದೇಶಾದ್ಯಂತ ತನ್ನ ಉದ್ಯೋಗಿಗಳಿಗೆ ಖಡಕ್​​​ ಆದೇಶವೊಂದನ್ನು ನೀಡಿದೆ. ಕಛೇರಿಗೆ ತಡವಾಗಿ ಬರುವ ಸಿಬ್ಬಂದಿಗಳಿಗೆ ಕೇಂದ್ರ ಚಾಟಿ ಬೀಸಿದೆ. ಇನ್ನು ಮುಂದೆ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಬೆಳಗ್ಗೆ 9:15 ರೊಳಗೆ ಕೆಲಸಕ್ಕೆ ಬರುವಂತೆ ಸೂಚಿಸಿದೆ. ಹೀಗಾಗಿ 15 ನಿಮಿಷಗಳ ಗ್ರೇಸ್ ಅವಧಿಯೂ ಸೇರಿದೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (DoPT) ಸುತ್ತೋಲೆಯನ್ನು ಹೊರಡಿಸಿದೆ. ನೌಕರರು ತಮ್ಮ ಕಚೇರಿಗಳಿಗೆ ಬೆಳಗ್ಗೆ 9:15 ಕ್ಕೆ ತಲುಪಬೇಕು ಮತ್ತು ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ಹಾಕಬೇಕು ಎಂದು ಸೂಚಿಸಿದೆ.

ಸಿಬ್ಬಂದಿಗಳು ಒಂದು ವೇಳೆ ಬೆಳಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ಕ್ಯಾಶುಯಲ್ ರಜೆಯನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ. ಕೇಂದ್ರದ ಸರ್ಕಾರಿ ಕಚೇರಿಗಳು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸುತ್ತೋಲೆಯಲ್ಲಿ ಈಗಾಗಲೇ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಛೇರಿಗೆ ತಡವಾಗಿ ಬರುವುದು ಹಾಗೂ ಕೆಲಸದಲ್ಲಿ ನಿರುಸ್ಸಾಹ ತೋರುವುದು ಹಾಗೂ ಕಚೇರಿಯಿಂದ ಬೇಗನೆ ಬೇರೆ ಕೆಲಸಗಗಳಿಗಾಗಿ ಕಛೇರಿಗಾಗಿ ಹೊರಡುವವರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರವು ಹೇಳಿದೆ.

ಯಾವುದೇ ಪರೀಕ್ಷೆಯಿಲ್ಲದೆ ಆದಾಯ ತೆರಿಗೆಯಲ್ಲಿ ಪಡೆಯಬಹುದು ಉದ್ಯೋಗ!

ಕೋವಿಡ್-19ನಿಂದ ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಬಳಕೆಯನ್ನು ಅಮಾನತುಗೊಳಿಸಲಾಗಿತ್ತು. ಆದರೆ ಇದೀಗ ಆ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಹಾಕಲೇಬೇಕು ಎಂದು ಹೇಳಲಾಗಿದೆ.

ಸಿಬ್ಬಂದಿ ರಜೆ ಬಗ್ಗೆ ಮುಂಚಿತವಾಗಿ ತಿಳಿಸಬೇಕು

ವರದಿಗಳ ಪ್ರಕಾರ, ಸಿಬ್ಬಂದಿಗಳಿಗೆ ಒಂದು ದಿನದ ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ರೆ ಮುಂಚಿತವಾಗಿ ತಿಳಿಸಲು ನೌಕರರಿಗೆ ಸುತ್ತೋಲೆ ಹೇಳಲಾಗಿದೆ. ಇದಕ್ಕಾಗಿಯೇ ಕ್ಯಾಶುಯಲ್ ರಜೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದೆ. ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿಬ್ಬಂದಿಗಳು ಸಂಜೆ 7 ರ ನಂತರ ಹೊರಡುವುದರಿಂದ ಅವರಿಗೆ ನಿಗದಿತ ಕೆಲಸದ ಸಮಯವಿಲ್ಲ. ಹೆಚ್ಚಿದ ಡಿಜಿಟಲೀಕರಣವು ಅನೇಕರ ಫೈಲ್‌ಗಳನ್ನು ವಿದ್ಯುನ್ಮಾನವಾಗಿ ಅವರಿಗೆ ಲಭ್ಯವಾಗುವಂತೆ ಮಾಡಿದೆ. ಇದರಿಂದ ನೀವು ಮನೆಯಿಂದಲೂ ಕೆಲಸವನ್ನು ಮಾಡಬಹುದಾಗಿದೆ.

ಕೋವಿಡ್ -19 ಲಸದ ಸಂಸ್ಕೃತಿಯಲ್ಲಿ ತುಂಬಾ ಬದಲಾವಣೆಯನ್ನು ತಂದಿದೆ. ಲಾಕ್‌ಡೌನ್‌ ಸಮಯದಲ್ಲಿ ಮಾಡಿದ ವರ್ಕ್​​​​ ಫ್ರಮ್ ಹೋಮ್ ವ್ಯವಸ್ಥೆಇಂದಿಗೂ ಕೂಡ ರೂಢಿಯಲ್ಲಿದೆ. ಇದು ವಾಸ್ತವವಾಗಿ ತಮ್ಮ ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿನ ಉದ್ಯೋಗಿಗಳು ವಾದಿಸುತ್ತಾರೆ.

ಇತರೆ ವಿಷಯಗಳು:

50 ಲಕ್ಷ ಉದ್ಯೋಗ ಸೃಷ್ಟಿಗೆ ಸಜ್ಜು.! ನಿರುದ್ಯೋಗ ನಿವಾರಣೆಗೆ ಕೇಂದ್ರ ಸರ್ಕಾರದ ಒತ್ತು

ʻಅನರ್ಹ ಪಡಿತರ ಚೀಟಿದಾರರಿಗೆʼ ಬಿಗ್‌ ಶಾಕ್‌!

Leave a Reply

Your email address will not be published. Required fields are marked *