ಸರ್ಕಾರ ನೀಡುವ ಉಚಿತ ಸೋಲಾರ್ ಪಂಪ್ ಸೆಟ್ ಪಡೆಯುವುದು ಹೇಗೆ?

ಹಲೋ ಸ್ನೇಹಿತರೇ, ರೈತರು ಕೃಷಿ ಚಟುವಟಿಗೆ ಬಳಕೆ ಮಾಡುವ ಪಂಪ್ ಸೆಟ್ ಗಳಿಗೆ ಸರ್ಕಾರದಿಂದ ಬರುವ ಸಹಾಯಧನವನ್ನು ಪಡೆದುಕೊಳ್ಳುವುದು ಹೇಗೆ? ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

solar pump set subsidy

ರಾಜ್ಯ ಸರ್ಕಾರದಿಂದ ರೈತರಿಗೆ ಹಗಲು ಸಮಯದಲ್ಲಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಸೋಲಾರ್ ಪಂಪ್‌ಸೆಟ್ ಯೋಜನೆ (ಕುಸುಮ್ – ಬಿ) ಯೋಜನೆಯಡಿ ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್ ಪಡೆದುಕೊಳ್ಳಲು ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

40,000 ಸೌರ ಕೃಷಿ ಪಂಪ್‌ಸೆಟ್ ಗುರಿ

ಸೋಲಾರ್ ಪಂಪ್‌ಸೆಟ್ ಯೋಜನೆ (ಕುಸುಮ್ – ಬಿ) ಅನುಸ್ಥಾನ ಇಲಾಖೆ ವತಿಯಿಂದ ಈ ವರ್ಷ ಅಂದರೆ 2024-25ನೇ ಸಾಲಿನಲ್ಲಿ 40 ಸಾವಿರ ಸೌರ ಕೃಷಿ ಪಂಪ್‌ಸೆಟ್ ಅಳವಡಿಸುವ ಗುರಿಯನ್ನು ಹೊಂದಿದೆ ಸೋಲಾರ್ ಪಂಪ್ ಸೆಟ್ ಅವಶ್ಯಕತೆ ಇದ್ದರೆ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಈ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ಗೆ ಎಷ್ಟು ಸಬ್ಸಿಡಿ ಪಡೆಯಬಹುದು:

3 ಹೆಚ್.ಪಿ.ಯಿಂದ 10 ಹೆಚ್.ಪಿ. ವರೆಗೂ ಈ ಸಾಮರ್ಥ್ಯದ ತೆರೆದ ಅಥವಾ ಕೊರೆದ ಬಾವಿಗಳಿಗೆ ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸಬ್ಸಿಡಿ ದೊರೆಯುವುದು. ರೈತರ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಹಾಯಧನವನ್ನು ಶೇಕಡ 30 ರಿಂದ ಶೇಕಡ 50%ಕ್ಕೆ ಹೆಚ್ಚಿಸಿದ್ದು. ಕೇಂದ್ರ ಸರ್ಕಾರದಿಂದ ಶೇಕಡ 30 ರಷ್ಟು ಸಹಾಯಧನ ದೊರೆಯಲಿದೆ ರೈತರು ಭರಿಸಬೇಕಾಗಿರುವುದು ಕೇವಲ ಶೇಕಡ 20% ರಷ್ಟು ಮಾತ್ರ.

ಅಂದರೆ ಶೇ 80 ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಅನ್ನು ರೈತರು ಅಳವಡಿಸಿಕೊಳ್ಳಬಹುದು ಉದಾಹರಣೆಗೆ ಹೇಳುವುದಾದರೆ ಒಟ್ಟು ಸೋಲಾರ್ ಅಳವಡಿಸಲು 1 ಲಕ್ಷ ಖರ್ಚು ಆದರೆ ರೈತರು 20,000 ಪಾವತಿಸಬೇಕು ಉಳಿಕೆ ಹಣವನ್ನು ರಾಜ್ಯ & ಕೇಂದ್ರ ಸರ್ಕಾರ ಸಬ್ಸಿಡಿ ರೂಪದಲ್ಲಿ ಪಾವತಿ ಮಾಡುತ್ತವೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಈ ಯೋಜನೆಗೆ ಸಂಬಂಧಪಟ್ಟ ಅಧಿಕೃತ ಸೌರಮಿತ್ರ(souramitra.com) ವೆಬ್ಸೈಟ್ ಭೇಟಿ ಮಾಡಿ ಅಗತ್ಯ ದಾಖಲೆ ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Step-1: ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಸೌರಮಿತ್ರ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ಬಳಿಕ ಒಂದು ನಿಯಮದ ನೋಟಿಪಿಕೇಶನ್ ತೋರಿಸುತ್ತದೆ ಅದನ್ನು ಸಂಪೂರ್ಣವಾಗಿ ಓದಿ ನಂತರ close ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ “ನೀವು ಈಗಾಗಲೇ ಅಕ್ರಮ ಸಂಪಕ೯ದ ನೀರಾವರಿ pump set ಸಕ್ರಮಕ್ಕಾಗಿ ವಿಸಕಂಗೆ ಹಣ ಪಾವತಿಸಿದ ಗ್ರಾಹಕರೇ?” ಎಂದು ಪ್ರಶ್ನೆಯನ್ನು ಕೇಳುತ್ತದೆ ಇದಕ್ಕೆ “ಇಲ್ಲ/No” ಎಂದು click ಮಾಡಿ ಅರ್ಜಿದಾರರ ಅಧಾರ್ ವಿವರ & ಜಮೀನಿನ ವಿವರ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣುವ “ಅರ್ಜಿಯನ್ನು ಸಲ್ಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ.

ರೈತರುಗಳಿಗೆ ಈ ಕೆಳಕಂಡ ಆದ್ಯತೆಗಳ ಮೇರೆಗೆ ಸೌರ ಕೃಷಿ ಪಂಪ್‌ ಸೆಟ್ ಗಳ ಸ್ಥಾಪನೆ

ಆದ್ಯತೆ – 1: ರೈತರು ಈಗಾಗಲೇ ಅನಧಿಕೃತ ಪಂಪ್‌ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿಯಲ್ಲಿ ₹10,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು & ಇವರುಗಳ ಕೊರೆದ ಅಥವಾ ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರವಿದ್ದವರಿಗೆ ಮೊದಲ ಆದ್ಯತೆ ಮತ್ತು ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾವಣೆಗೆ ಮೊದಲು ನೀಡುವ ಆಧಾರದ ಮೇರೆಗೆ ಅಳವಡಿಸಲಾಗುತ್ತದೆ.

ಆದ್ಯತೆ – 2: ರೈತರು ಈಗಾಗಲೇ ಅನಧಿಕೃತ ಪಂಪ್‌ ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಲ್ಲಿ ರೂ. 50/- ಅರ್ಜಿ ಶುಲ್ಕ ಪಾವತಿಸಿ ಅರ್ಜಿ ನೋಂದಾಯಿಸಿದ್ದು & ಇವರುಗಳ ಕೊರೆದ ಅಥವಾ ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿದ್ದವರಿಗೆ 2ನೇ ಆದ್ಯತೆಯಲ್ಲಿ ಮತ್ತು ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಣಿ ಮಾಡಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ ಅಳವಡಿಸಲಾಗುತ್ತದೆ.

ಇತರೆ ವಿಷಯಗಳು

ಒಂದು ಕುಟುಂಬ ಒಂದು ಉದ್ಯೋಗ ಯೋಜನೆ: ಇಲ್ಲಿ ಹೆಸರು ನೋಂದಾಯಿಸಿದರೆ ಸಿಗುತ್ತೆ ಉದ್ಯೋಗ

ಈ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಬಡ ಮಕ್ಕಳಿಗೆ ಉಚಿತ ಲ್ಯಾಪ್‌ ಟಾಪ್‌! 

Leave a Reply

Your email address will not be published. Required fields are marked *