ಕೃಷಿ ಭಾಗ್ಯ ಯೋಜನೆ: ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

ಹಲೋ ಸ್ನೇಹಿತರೆ, ಕೃಷಿ ಭಾಗ್ಯ ಯೋಜನೆಯ ಸಹಾಯಧನ ಸೌಲಭ್ಯ ಪಡೆದುಕೊಳ್ಳಬೇಕೆ..? ಹಾಗಿದ್ದರೇ ಈ ಲೇಖನ ನಿಮಗಾಗಿ. ಕರ್ನಾಟಕ ಸರ್ಕಾರ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ವಿವಿಧ ಕಾರ್ಯಗಳಿಗೆ ಸಹಾಯಧನ ನೀಡುತ್ತದೆ. ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Krushi Bhagya Scheme

2023-24 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಅಂತರ್ಜಲ ವೃದ್ಧಿ ಮತ್ತು ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ಬೇಸಿಗೆಯಲ್ಲಿಯೂ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸಲು ಈ ಯೋಜನೆ.

ಕೃಷಿ ಭಾಗ್ಯ ಯೋಜನೆ 2024

ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ, ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್ ಖರೀದಿಸಲು ಅವಕಾಶ, ನೀರನ್ನು ಬೆಳೆಗೆ ಹಾಯಿಸಲು ತುಂತುರು, ಹನಿ ನೀರಾವರಿ ಘಟಕ ಅನುಷ್ಠಾನಕ್ಕೆ ಸಬ್ಸಿಡಿ ನೀಡಲಾಗುತ್ತದೆ.

ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದ್ದು, ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿ ಎಂದು ಸರ್ಕಾರದಿಂದ ತಿಳಿಸಲಾಗಿದೆ.

  1. ಕ್ಷೇತ್ರ ಬದು ನಿರ್ಮಾಣ
  2. ಕೃಷಿ ಹೊಂಡ ನಿರ್ಮಾಣ (Krishi Honda Scheme)
  3. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Fencing)
  4. ಕೃಷಿ ಹೊಂಡದಿಂದ ನೀರು ಎತ್ತಲು ಪಂಪ್ ಸೆಟ್
  5. ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ

ಕೃಷಿ ಭಾಗ್ಯ ಯೋಜನೆ 2024 ದಾಖಲೆಗಳು:

  • ರೈತರ ಅರ್ಜಿ
  • ರೈತರ ಭಾವಚಿತ್ರ
  • FID (FID ಇಲ್ಲವಾದಲ್ಲಿ ಆಧಾ‌ರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ)

ಅರ್ಜಿ ಸಲ್ಲಿಸುವುದು ಹೇಗೆ?:

ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸ್ವೀಕೃತವಾದ ಅರ್ಹ ಅರ್ಜಿಗಳ ಜೇಷ್ಠತೆಯನ್ವಯ ಹಾಗೂ ಹೋಬಳಿಗೆ ನಿಗದಿಪಡಿಸಿದ ಗುರಿಗಳನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಇತರೆ ವಿಷಯಗಳು:

ವಾಹನದ ಮೇಲೆ ಚಲನ್‌ ಕಟ್ಟಿದವರಿಗೆ ಸರ್ಕಾರದ ಹೊಸ ರೂಲ್ಸ್!

ಸರ್ಕಾರ ನೀಡುವ ಉಚಿತ ಸೋಲಾರ್ ಪಂಪ್ ಸೆಟ್ ಪಡೆಯುವುದು ಹೇಗೆ?

Leave a Reply

Your email address will not be published. Required fields are marked *