ಹಲೋ ಸ್ನೇಹಿತರೇ, ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ ಸ್ವ-ಉದ್ಯೋಗ ಮಾಡಲು ಆಸಕ್ತಿ ಇರುವವರಿಗೆ 1 ಲಕ್ಷ ಸಾಲ & ಸಹಾಯಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ 1.00 ಲಕ್ಷಗಳ ಸಾಲ-ಸಹಾಯಧನ ಪಡೆದುಕೊಳ್ಳಬಹುದು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ & ನಗರ ಪ್ರದೇಶದವರಿಗೆ ರೂ. 3,00,000/-ಗಳ ಮಿತಿಯೊಳಗಿರಬೇಕು.
- ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದೊಳಗಿನವರಾಗಿರಬೇಕು.
- ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು & ನಮೂನೆ-ಜಿ ನಲ್ಲಿ ಜಾತಿ & ಆದಾಯ ಪ್ರಮಾಣಪತ್ರ ಪಡೆದುಕೊಂಡಿರಬೇಕು..
- ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಮತ್ತು ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
- ಒಂದು ಕುಟುಂಬದಲ್ಲಿ ಒಂದು ಫಲಾನುಭವಿಯನ್ನು ಮಾತ್ರ ಆಯ್ಕೆ ಮಾಡಲಾಗುವುದು.
BPL ಕಾರ್ಡ್ ಕುಟುಂಬಗಳಿಗೆ ಸಿಹಿ ಸುದ್ದಿ ಕೊಟ್ಟ ರತನ್ ಟಾಟಾ! ಹೊಸ ಘೋಷಣೆ
ಈ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು?
- ಈ ಯೋಜನೆಯಲ್ಲಿ ನಿಗಮವು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.1,00,00/-ಗಳ ಆರ್ಥಿಕ ನೆರವು ಒದಗಿಸಲಾಗುತ್ತದೆ & ಈ ಮೊತ್ತದಲ್ಲಿ ಗರಿಷ್ಠ ರೂ.20,000/-ಗಳ ಸಹಾಯಧನ, ಬಾಕಿ ಉಳಿಕೆ ಮೊತ್ತವಾದ ಗರಿಷ್ಠ ರೂ.80,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುತ್ತದೆ.
- ಘಟಕ ವೆಚ್ಚವು ಕನಿಷ್ಠ ರೂ.50,000/-ಗಳು ಹಾಗೂ ಈ ಮೊತ್ತಕ್ಕೆ ಸಹಾಯಧನವು ಕನಿಷ್ಠ ಅಂದರೆ ರೂ.10,000/-ಗಳು ಹಾಗೂ ಬಾಕಿ ಮೊತ್ತವಾದ ರೂ.40,000/-ಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.
- ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರುಪಾವತಿಸಬೇಕು ಹಾಗೂ ಇದರಲ್ಲಿ 2 ತಿಂಗಳು ವಿರಾಮ ಅವಧಿ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಜುಲೈ 12 ರಿಂದ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31
ಇತರೆ ವಿಷಯಗಳು:
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.!! ಪ್ರತಿಯೊಬ್ಬರಿಗೂ ಮನೆ ಭಾಗ್ಯ
LPG Cylinder eKYC: ಅಡುಗೆ ಅನಿಲ ಕೆವೈಸಿ ಕುರಿತು ಕೇಂದ್ರ ಸಚಿವರ ಪ್ರಮುಖ ಪ್ರತಿಕ್ರಿಯೆ..!