ಹಲೋ ಸ್ನೇಹಿತರೆ, ಚಿನ್ನ ಪ್ರೀಯರಿಗೆ ಗುಡ್ ನ್ಯೂಸ್. ಜುಲೈ 23 ರಂದು ಕೇಂದ್ರ ಬಜೆಟ್ ಮಂಡನೆ ಆಗಲಿದ್ದು, ಚಿನ್ನದ ಬೆಲೆ ಇಳಿಕೆಯ ಬಗ್ಗೆ ಬೇಡಿಕೆ ಇಡಲಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಚಿನ್ನದ ಬೆಲೆಯ ಹಾವು ಏಣಿಯ ಆಟ ನಡೆಯುತ್ತಲೇ ಇದೆ. ಚಿನ್ನದ ಬೆಲೆ ಎಷ್ಟು ಇಳಿಕೆಯಾಗಬಹುದು? ಈ ಮಾಹಿತಿ ಬಗ್ಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಈ ವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಶೇಕಡ 2 ರಷ್ಟು ಏರಿಕೆ ಕಂಡಿದೆ. ಶುಕ್ರವಾರ, ಸ್ಪಾಟ್ ಚಿನ್ನವು ಪ್ರತಿ ಔನ್ಸ್ಗೆ 2,411 ಯುಎಸ್ ಡಾಲರ್ಗೆ ಮುಟ್ಟಿದ್ದು, ಇದು ಒಂದು ತಿಂಗಳಿನ ಅತ್ಯಧಿಕ ಮಟ್ಟವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅದೇ ಪ್ರವೃತ್ತಿ ಮುಂದುವರೆದಿದೆ. ಶುಕ್ರವಾರ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 73,285 ರೂ. ತಲುಪಿದೆ.
ಶೇಕಡಾ 15 ರಷ್ಟು ಚಿನ್ನಾಭರಣ ಬೆಲೆ ಏರಿಕೆ:
ಈ ವರ್ಷ ಚಿನ್ನ ಖರೀದಿದಾರರಿಗೆ ಶಾಕ್ ನೀಡಿದ್ದು. ವರ್ಷದ ಆರಂಭದಲ್ಲಿ 63,870 ಇದ್ದ ಚಿನ್ನದ ಬೆಲೆ ಈಗ 73 ಸಾವಿರ ದಾಟಿದೆ. ಅಂದರೆ ಚಿನ್ನದ ಬೆಲೆ ಈ ವರ್ಷ ಶೇಕಡಾ 15 ರಷ್ಟು ಹೆಚ್ಚಳವಾಗಿದೆ. ಇದರ ನೇರ ಪರಿಣಾಮ ಚಿನ್ನದ ಬೇಡಿಕೆ ಮೇಲೆ ಕಂಡು ಬಂದಿದೆ. ಇಟಿ ವರದಿಯ ಆಧಾರದ ಮೇಲೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ ದೇಶದಲ್ಲಿ ಚಿನ್ನದ ಬೇಡಿಕೆಯು ಶೇಕಡಾ 15 ರಷ್ಟು ಕುಸಿದಿದೆ.
1961 ರ ಕಾಯ್ದೆ ತಿದ್ದುಪಡಿ! ನೌಕರರ ಕೆಲಸದ ಸಮಯ ಇಷ್ಟು ಗಂಟೆ ಹೆಚ್ಚಳ
ಸುಂಕ ಕಡಿತಕ್ಕೆ ಆಗ್ರಹ
ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತವಾಗುತ್ತಿದ್ದು. ಈ ಬಗ್ಗೆ ಕೇಂದ್ರ ಮಧ್ಯಸ್ಥಿಕೆ ವಹಿಸಿ ಚಿನ್ನ ಆಭರದಣದ ಆಮದು ಸುಂಕವನ್ನು ಶೇಕಡಾ 5 ರಿಂದ 10 ರಷ್ಟು ಇಳಿಸಬೇಕೆಂದು ಉದ್ಯಮಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇನ್ನು ಹಲವರು ಈ ಸುಂಕವನ್ನು 15 ಪ್ರತಿಶತದಿಂದ 4 ಪ್ರತಿಶತಕ್ಕೆ ಇಳಿಸಲು ಬೇಡಿಕೆಯನ್ನು ಇಟ್ಟಿದ್ದಾರೆ. ಕಸ್ಟಮ್ ಸುಂಕ ಕಡಿತವು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಚಿನ್ನದ ಖರೀದಿಯ ಬೆಲೆ ಅಗ್ಗವಾಗಲಿದೆ.
ಇತರೆ ವಿಷಯಗಳು:
ಸರ್ಕಾರಿ ಉದ್ಯೋಗಿಗಳಿಗೆ ಬಿಗ್ ಶಾಕ್! ಇನ್ಮುಂದೆ 5 ವರ್ಷಕೊಮ್ಮೆ ಅಧಿಕಾರಿಗಳ ವರ್ಗಾವಣೆ ಫಿಕ್ಸ್
1.73 ಲಕ್ಷ ಹೊಸ BPL ಕಾರ್ಡ್ ವಿತರಣೆ! ಅರ್ಜಿದಾರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ