ರಾಜ್ಯದಲ್ಲಿ ಹತ್ತು ಸಾವಿರ ಶಿಕ್ಷಕರ ನೇಮಕ.! ಸಚಿವ ಮಧು ಬಂಗಾರಪ್ಪ

ಹಲೋ ಸ್ನೇಹಿತರೇ, ಶಿಕ್ಷಕ ಅಭ್ಯರ್ಥಿಗಳಿಗೆ ಶಿಕ್ಷಣ ಸಚಿವರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಶಿಕ್ಷಕರ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ನೇಮಕ ಪ್ರಕ್ರಿಯೆ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ಈಗ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

teachers recruitment

ಆದರೆ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ 4,900 ಕಾಯಂ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡಿದೆ ಎಂದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳೊಳಗೆ 12,000 ಶಿಕ್ಷಕರ ನೇಮಕಾತಿ ಮಾಡಿದೆ ಎಂದರು.

ಕೊಪ್ಪಳ: ಶಾಲಾ-ಕಾಲೇಜುಗಳ ನಿರ್ಮಾಣವಲ್ಲದೆ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಕುಕನೂರು ತಾಲೂಕಿನ ಕೋಮಲಾಪೂರ ಗ್ರಾಮದಲ್ಲಿ ಕೆಕೆಆರ್ಡಿಬಿ ಯೋಜನೆಯಡಿ ನಿರ್ಮಿಸಲಾದ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು.

ಹಣ ಬಿಡುಗಡೆ ಆರಂಭ! ಈ ಯೋಜನೆಯಡಿ ನೋಂದಣಿ ಮಾಡಿಲ್ಲ ಅಂದ್ರೆ ಇಂದೇ ನೋಂದಾಯಿಸಿಕೊಳ್ಳಿ

ನಾನು ಶಿಕ್ಷಣ ಇಲಾಖೆ ಸಚಿವನಾದ ವೇಳೆ 53 ಸಾವಿರ ಶಿಕ್ಷಕರ ಕೊರತೆಯಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಹತ್ತು ತಿಂಗಳೊಳಗೆ 12,000 ಶಿಕ್ಷಕರ ನೇಮಕಾತಿ ಮಾಡಿದೆ. ಈಗ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಆದರೆ, ಬಿಜೆಪಿ ತನ್ನ ಆಡಳಿತಾವಧಿಯಲ್ಲಿ 4,900 ಕಾಯಂ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡಿದೆ ಎಂದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಹೀಗಾಗಿ ಫಲಿತಾಂಶ ಕುಸಿದಿದೆ. ಮಕ್ಕಳ ಶಿಕ್ಷಣ ಸುಧಾರಿಸಲು ಇಂತಹ ಕ್ರಮ ಅಗತ್ಯ ಎಂದು ಪ್ರತಿಕ್ರಿಯಿಸಿದರು.

ಇ.ಡಿ ರೈಡ್ ಬಿಜೆಪಿ ಹಳೆ ಚಾಳಿ:

ಮಾಜಿ ಸಚಿವ ನಾಗೇಂದ್ರ ಹಾಗೂ ಕೆಲವು ಶಾಸಕರ ಮನೆ ಮೇಲೆ ಇ.ಡಿ ದಾಳಿಗೆ ಸಂಬಂಧಿಸಿದಂತೆ, ಶಾಸಕರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿರುವ ಕುರಿತು ನನಗೆ ಮಾಹಿತಿಯಿಲ್ಲ. ಆದರೆ, ಈ ರೀತಿಯ ದಾಳಿ ನಡೆಸುವುದು ಬಿಜೆಪಿಯವರ ಹಳೇ ಚಾಳಿ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಕುರಿತು, ಸಚಿವ ಸ್ಥಾನಕ್ಕೆ ಗೌರವ ನೀಡಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದರ ಬಗ್ಗೆ ಹಾದಿಬೀದಿಯಲ್ಲಿ ಮಾತನಾಡುವುದು ಸರಿಯಲ್ಲ, ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಗೊತ್ತಾಗಲಿದೆ ಎಂದರು.

ಇತರೆ ವಿಷಯಗಳು

ಇ ಶ್ರಮ್ ಕಾರ್ಡ್‌ದಾರರ ಖಾತೆಗೆ ₹1000..! ಸರ್ಕಾರದ ಹೊಸ ಘೋಷಣೆ

ವಾಣಿಜ್ಯ ಸಿಲಿಂಡರ್ ಬಳಸಿದರೆ ಕಾನೂನು ಕ್ರಮದ ಜೊತೆ ದುಬಾರಿ ದಂಡ..!

Leave a Reply

Your email address will not be published. Required fields are marked *