ಈ ಒಂದು ಕಾರ್ಡ್‌ ಇದ್ರೆ 2 ಲಕ್ಷ ವಿಮೆ, 3 ಸಾವಿರ ರೂ. ಸಹಾಯಧನ!

ಹಲೋ ಸ್ನೇಹಿತರೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2021ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಾಮ್ ಪೋರ್ಟಲ್ ಯೋಜನೆ ಪ್ರಾರಂಭಿಸಿದೆ. ವಲಸೆ ಕಾರ್ಮಿಕರು ಮತ್ತು ಗೃಹ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರಿಗೆ ಅನುಕೂಲವಾಗುವಂತೆ ಪೋರ್ಟಲ್ ಈ ಪ್ರಾರಂಭಿಸಲಾಗಿದೆ. ಈಗ ಈ ಯೋಜನೆಯಡಿ ಹೆಚ್ಚು ಲಾಭಗಳನ್ನು ಘೋಷಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

E-Sharm Card

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಎಲ್ಲರೂ ಇ-ಶ್ರಮ್ ಕಾರ್ಡ್ ಅಥವಾ ಶ್ರಮ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಈ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇ-ಶ್ರಮ್ ಕಾರ್ಡ್ ಮೂಲಕ ವಿವಿಧ ಪ್ರಯೋಜನಗಳನ್ನ ಪಡೆಯಬಹುದು.

ಏನಿದು ಇ-ಶ್ರಮ್ ಕಾರ್ಡ್?

ಈ ಯೋಜನೆ ಅಡಿಯಲ್ಲಿ, ಅಸಂಘಟಿತ ವಲಯದ ಕಾರ್ಮಿಕರು 60 ವರ್ಷಗಳ ನಂತರದಲ್ಲಿ ಪಿಂಚಣಿ, ಮರಣ ವಿಮೆ ಮತ್ತು ಅಂಗವೈಕಲ್ಯ ಸಂದರ್ಭದಲ್ಲಿ ಆರ್ಥಿಕ ಸಹಾಯದಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಅಡಿಯಲ್ಲಿ, ಫಲಾನುಭವಿಗಳು ಭಾರತದಾದ್ಯಂತ ಮಾನ್ಯವಾಗಿರುವ 12 ಅಂಕಿಯ ಸಂಖ್ಯೆಯನ್ನು ನೀಡಲಾಗುತ್ತದೆ.

ಈ ಯೋಜನೆಯ ಲಾಭ:

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ಇ-ಶ್ರಮ್ ಪೋರ್ಟಲ್‌ಗೆ ಸೇರುವ ಕೆಲಸಗಾರರು ರೂ. 2 ಲಕ್ಷ ವಿಮಾ ಲಾಭ ಕೂಡ ಸಿಗಲಿದೆ. ವಿಮೆಗಾಗಿ ಇಲ್ಲಿ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ವಾಸ್ತವವಾಗಿ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಸಂಪೂರ್ಣ ಅಂಗವಿಕಲರಾದರೆ ರೂ. 2 ಲಕ್ಷ ವಿಮಾ ಮೊತ್ತ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ರೂ. 1 ಲಕ್ಷ ವಿಮೆ ಸಹ ಸಿಗಲಿದೆ.

ಇದನ್ನು ಓದಿ: ಕೇಂದ್ರದಿಂದ ಬಜೆಟ್‌ ಧಮಾಕ ಆಫರ್.!!‌ ನಿರ್ಮಲ ಸೀತಾರಾಮನ್‌ರವರ ಪ್ರಮುಖ ಘೋಷಣೆ ಇದು

ಈ ಯೋಜನೆಯ ನೋಂದಣಿ ಹೇಗೆ.?

ಇ-ಶ್ರಮ ಪೋರ್ಟಲ್‌’ನಲ್ಲಿ ನೀಮ್ಮ ಹೆಸರನ್ನು ನೋಂದಾಯಿಸಲು, ನೋಂದಣಿಯನ್ನು ಸ್ವಯಂ-ನೋಂದಣಿ ಮತ್ತು ಸಹಾಯಕ ಮೋಡ್ ಮೂಲಕ ಮಾಡಬಹುದಾಗಿದೆ. ಸ್ವಯಂ-ನೋಂದಣಿಗಾಗಿ, ನೀವು ಇಶ್ರಾಮ್ ಪೋರ್ಟಲ್, ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಏಜ್ ಗವರ್ನೆನ್ಸ್ (UMANG) ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಸಹಾಯ ಮೋಡ್ ನೋಂದಣಿಗಾಗಿ, CSC ಅಥವಾ ರಾಜ್ಯ ಸೇವಾ SSK) ಕೇಂದ್ರಗಳಿಗೆ ಭೇಟಿ ನೀಡಬಹುದು.

ನೋಂದಣಿಗಾಗಿ ಈ ದಾಖಲೆಗಳು ಅಗತ್ಯವಿದೆ.!

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ
  • ಮೊಬೈಲ್ ಸಂಖ್ಯೆಯನ್ನ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು.

ಇತರೆ ವಿಷಯಗಳು

ಕೇಂದ್ರ ಬಜೆಟ್ 2024: ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 10 ಲಕ್ಷ ರೂ

ದೇವರಾಜ ಅರಸು ಯೋಜನೆಯಡಿ ಅರ್ಜಿ ಆಹ್ವಾನ! ಆಧಾರ್, ರೇಷನ್ ಕಾರ್ಡ್ ಹೊಂದಿದವರಿಗೆ ವಸತಿ ಸೌಲಭ್ಯ

Leave a Reply

Your email address will not be published. Required fields are marked *