ಕೇಂದ್ರದಿಂದ ಬಂಪರ್‌ ಆಫರ್.!!‌ ಹೊಸ ಜೋಡಿಗೆ ಸರ್ಕಾರದಿಂದ ಸಿಗಲಿದೆ 2.5ಲಕ್ಷ ರೂ.

ಹಲೋ ಸ್ನೇಹಿತರೇ, ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು, ನರೇಂದ್ರ ಮೋದಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಡಾ. ಅಂಬೇಡ್ಕರ್ ಫೌಂಡೇಶನ್ (ಡಿಎಎಫ್) ಆಶ್ರಯದಲ್ಲಿ ಸಾಮಾಜಿಕ ಏಕೀಕರಣಕ್ಕಾಗಿ ಡಾ. ಅಂಬೇಡ್ಕರ್ ಯೋಜನೆಯನ್ನು ಪ್ರಾರಂಭಿಸಿದೆ.

Incentives for inter-caste marriages

ದಲಿತ ಹುಡುಗಿಯನ್ನು ಮದುವೆಯಾದವರಿಗೆ ಈ ಯೋಜನೆಯಡಿ 2.5 ಲಕ್ಷ ರೂಪಾಯಿ ಸಿಗುತ್ತದೆ.

ಅಂತರ್ಜಾತಿ ವಿವಾಹಿತರಾದ ದಂಪತಿ ಸಮಾಜದ ಮುಖ್ಯವಾಹಿನಿಗೆ ಸೇರಲು ಸಹಾಯವನ್ನು ಮಾಡುವ ಉದ್ದೇಶದಿಂದ ಹಣಕಾಸಿನ ನೆರವು ನೀಡುವ ಗುರಿಯನ್ನು ಈ ಯೋಜನೆಯು ಹೊಂದಿದೆ. ಈ ಯೋಜನೆ ಪ್ರಾರಂಭವಾದಾಗ ದಂಪತಿ ವಾರ್ಷಿಕ ಆದಾಯವು 5 ಲಕ್ಷ ರೂಪಾಯಿ ಮೀರಬಾರದು ಎಂದು ಕಡ್ಡಾಯವಾಗಿತ್ತು. 2017 ರಲ್ಲಿ ಆದಾಯ ಮಿತಿಗಳನ್ನು ತೆಗೆದುಹಾಕಲಾಗಿದೆ. ದಂಪತಿ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರೋತ್ಸಾಹ ಧನ ಪಡೆಯಬಹುದು.

ಆದ್ರೆ ಒಂದೇ ಬಾರಿ ನಿಮಗೆ ಹಣ ಸಿಗುವುದಿಲ್ಲ. ಎರಡು ಹಂತದಲ್ಲಿ ಈ ಮೊತ್ತವನ್ನು ದಂಪತಿಗೆ ನೀಡಲಾಗುತ್ತದೆ. ಆರಂಭದಲ್ಲಿ ಹೊಸದಾದ ಜೀವನ ಶುರು ಮಾಡಲು ದಂಪತಿಗೆ 1.5 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಉಳಿದ ಒಂದು ಲಕ್ಷವನ್ನು ಅವರ ಜಂಟಿ ಬ್ಯಾಂಕ್ ಖಾತೆಗೆ ಜಮಾವನ್ನು ಮಾಡಲಾಗುತ್ತದೆ. ಆದ್ರೆ ಮೂರು ವರ್ಷಗಳ ಅನಂತರ ಮಾತ್ರವೇ ಈ ಹಣವನ್ನು ಹಿಂಪಡೆಯಬಹುದಾಗಿದೆ.

ಮದ್ಯ ಪ್ರಿಯರೇ ಎಚ್ಚರ.!!‌ ರಮ್‌, ವೋಡ್ಕಾ, ವೈನ್‌, ವಿಸ್ಕಿ ಕುಡಿಯುವವರೇ ಹುಷಾರ್

ಈ ಯೋಜನೆ ಲಾಭ ಪಡೆಯಲು ಅನೇಕ ಷರತ್ತುಗಳಿವೆ. ಹಾಗೆಯೇ ದಾಖಲೆಗಳನ್ನು ನೀಡಬೇಕು. ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿರಬೇಕು. ಅರ್ಜಿ ನಮೂನೆಯು ಹಾಲಿ ಸಂಸದ/ಶಾಸಕ/ಜಿಲ್ಲಾಧಿಕಾರಿಗಳ ಶಿಫಾರಸನ್ನು ಹೊಂದಿರಬೇಕು. ಹಿಂದೂ ವಿವಾಹ ಕಾಯ್ದೆ 1955ರ ಯಡಿಯಲ್ಲಿ ವಿವಾಹವಾದ ಪ್ರಮಾಣಪತ್ರವನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರು ಎಂದು ಖಚಿತ ಪಡಿಸುವ ಜಾತಿ ಪ್ರಮಾಣಪತ್ರ ಹಾಗೂ ಜಂಟಿ ಬ್ಯಾಂಕ್ ಖಾತೆ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ.

ಇಬ್ಬರಿಗೂ ಇದು ಮೊದಲ ಮದುವೆ ಆಗಿರಬೇಕು. ಮದುವೆಯಾಗಿ ಒಂದು ವರ್ಷದೊಳಗೆ ಪ್ರಸ್ತಾವನೆ ಸಲ್ಲಿಸಿದ್ರೆ ಮಾತ್ರವೇ ಅದನ್ನು ಮಾನ್ಯವೆಂದು ಇಲಾಖೆಯು ಪರಿಗಣಿಸಲಾಗುತ್ತದೆ. ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರಗಾಗಿರಬಾರದು. ಮದುವೆಯ ಸಮಯದಲ್ಲಿ ವರನ ವಯಸ್ಸು ಇಪ್ಪತ್ತೊಂದು ವರ್ಷಗಳು ಹಾಗೂ ವಧುವಿನ ವಯಸ್ಸು ಹದಿನೆಂಟು ವರ್ಷ ತುಂಬಿದವರಾಗಿರಬೇಕು ಎಂದು ಇಲಾಖೆಯು ತಿಳಿಸುತ್ತದೆ.

ಇತರೆ ವಿಷಯಗಳು :

ಜನನ-ಮರಣ ಪ್ರಮಾಣಪತ್ರ ಪಡೆಯಲು ಕಚೇರಿ ಅಲೆದಾಟಕ್ಕೆ ಬ್ರೇಕ್.! ಹೊಸ ಮಾರ್ಗ ಸೂಚಿಸಿದ ಸರ್ಕಾರ

ಪಿಯುಸಿ ಪಾಸಾದವರಿಗೆ ಸಿಹಿ ಗುಡ್ ನ್ಯೂಸ್.!! ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳ ನೇರ ನೇಮಕಾತಿ

Leave a Reply

Your email address will not be published. Required fields are marked *