ಹಲೋ ಸ್ನೇಹಿತರೇ, 2024-25ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್’ಗಾಗಿ ರಾಜ್ಯ ಸರ್ಕಾರ ವಿವಿಧ ನಿಗಮಗಳ ಮೂಲಕ ರೈತರಿಂದ ಅರ್ಜಿ ಆಹ್ವಾನಿಸಿದೆ. ಯಾವೆಲ್ಲಾ ರೈತರು ಈ ಸೌಲಭ್ಯ ಪಡೆಯಬಹುದು. ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಮುಖ್ಯ ದಾಖಲೆಗಳೇನು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಸರ್ಕಾರ ಸಣ್ಣ & ಅತೀ ಸಣ್ಣ ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ನೀರಾವರಿ ಅನುಕೂಲಕ್ಕಾಗಿ ವಿವಿಧ ನಿಗಮಗಳ ಮೂಲಕ ಸಣ್ಣ & ಅತೀ ಸಣ್ಣ ರೈತರಿಗೆ ಉಚಿತ ಬೋರ್ವೆಲ್ ಯೋಜನೆಯಾಗಿದೆ.
ಎಷ್ಟು ಸಹಾಯಧನ ಸಿಗುತ್ತದೆ?
ಈ ಯೋಜನೆಯಡಿ ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಘಟಕದ ವೆಚ್ಚವನ್ನು 4.75 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ವಿದ್ಯುದೀಕರಣ ಸೇರಿ 4.25 ಲಕ್ಷ ಸಹಾಯಧನ. ಅವಶ್ಯವಿದ್ದರೆ ಶೇ.4ರ ಬಡ್ಡಿ ದರದಲ್ಲಿ 50,000 ರೂ. ಸಾಲ ಮಂಜೂರು ಮಾಡಲಾಗುವುದು.
ರಾಜ್ಯದ ಉಳಿದ ಜಿಲ್ಲೆಗಳ ಘಟಕ ವೆಚ್ಚವನ್ನು 3.75 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ವಿದ್ಯುದೀಕರಣ ಸೇರಿ 3.25 ಲಕ್ಷ ಸಹಾಯಧನ. ಅವಶ್ಯವಿದ್ದರೆ ಶೇ.4ರ ಬಡ್ಡಿ ದರದಲ್ಲಿ 50,000 ರೂ. ಸಾಲವನ್ನು ಮಂಜೂರು ಮಾಡಲಾಗಿದೆ.
ವೈಯಕ್ತಿಕ ನೀರಾವರಿ ಕೊಳವೆ ಬಾವಿ ಘಟಕಕ್ಕೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ & ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಸಲು ಅವಕಶವಿರಲಿದೆ.
ಈ ಯೋಜನೆಯ ಮಾನದಂಡವೇನು?
ಗಂಗಾಕಲ್ಯಾಣ ನೀರಾವರಿ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ನೀರಾವರಿ ಸೌಲಭ್ಯ ಹೊಂದಿಲ್ಲದ ಸಣ್ಣ & ಅತಿ ಸಣ್ಣ ರೈತರಾಗಿರಬೇಕು. ಕನಿಷ್ಠ 2 ಎಕರೆ ಗರಿಷ್ಠ 5 ಎಕರೆ ಜಮೀನಿರಬೇಕು. ಈ ಜಮೀನು ಒಂದೇ ಸ್ಥಳದಲ್ಲಿರಬೇಕು.
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ ನಿಗದಿ ಮಾಡಲಾಗಿದೆ. ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ಹುದ್ದೆಯಲ್ಲಿರಬಾರದು. ವಾರ್ಷಿಕ ವರಮಾನ ಗ್ರಾಮಾಂತರ 98,000 ರೂ. ಮತ್ತು ಪಟ್ಟಣ ಪ್ರದೇಶದವರಿಗೆ 1,20,000 ರೂ.ಗಳ ಮಿತಿಯಲ್ಲಿರಬೇಕು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಗುಡ್ ನ್ಯೂಸ್.!! ಸರ್ಕಾರದಿಂದ ನಿಮ್ಮ ಕೈ ಸೇರಲಿದೆ ಪರಿಹಾರ
ಆಧಾರ್ ನಂಬರ್ ಜೋಡಣೆಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಈಗಾಗಲೇ ಆಯಾ ಜಾತಿ ಸಮುದಾಯದ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಮತ್ತೊಮ್ಮೆ ಸೌಲಭ್ಯ ಕೋರಿ ಅಪ್ಲೇ ಮಾಡಲು ಅವಕಾಶವಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
- ಜಾತಿ & ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ & ರೇಷನ್ ಕಾರ್ಡ್
- ಸಣ್ಣ/ಅತಿ ಸಣ್ಣ ರೈತರ ದೃಢೀಕರಣ ಪತ್ರ
- ರೈತರ ಈIಆ ಸಂಖ್ಯೆ
- ಪಹಣಿ (RTC)
ಯಾವೆಲ್ಲ ಜಾತಿಯ ರೈತರು ಅರ್ಜಿ ಸಲ್ಲಿಸಬಹುದು?
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಹಿಂದುಳಿದ ವರ್ಗದ ರೈತರು
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ವೀರಶೈವ-ಲಿಂಗಾಯತ ರೈತರು
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಒಕ್ಕಲಿಗ ಸಮುದಾಯದ ರೈತರು
- ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ವಿಶ್ವಕರ್ಮ ಸಮುದಾಯದ ರೈತರು
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಉಪ್ಪಾರ ಸಮುದಾಯದ ರೈತರು
- ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಅಂಬಿಗರ ಸಮುದಾಯದ ರೈತರು
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಸವಿತಾ ಸಮುದಾಯದ ರೈತರು
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಮಡಿವಾಳ ಸಮುದಾಯದ ರೈತರು
- ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಕಾಡುಗೊಲ್ಲ ಸಮುದಾಯದ ರೈತರು
- ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ರೈತರು
ಎಲ್ಲಿ ಅರ್ಜಿ ಸಲ್ಲಿಸಬೇಕು?
ಗ್ರಾಮ ಒನ್/ ಬೆಂಗಳೂರು ಒನ್/ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
- ಸೇವಾಸಿಂಧು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕ: 31-08-2024.
- ಅಂಬಿಗ ಮತ್ತು ಒಕ್ಕಲಿಗ ಸಮುದಾಯದ ರೈತರು ಅರ್ಜಿ ಸಲ್ಲಿಸಲು 30-08-2024 ಕೊನೆ ದಿನಾಂಕವಾಗಿದೆ.
- ಈ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತರೆ ವಿಷಯಗಳು :
ಯಜಮಾನಿಯರಿಗೆ ಅಭಯ ನೀಡದ ಸಿಎಂ.!! ಈ ದಿನಾಂಕದೊಳಗೆ ಖಾತೆ ಸೇರಲಿದೆ ಬಾಕಿ ಹಣ
ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ.! ಈ ಸ್ಕೀಮ್ನಿಂದ ರಾಜ್ಯದ ಯುವಕರಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ