ಹಲೋ ಸ್ನೇಹಿತರೇ, ಸಾರ್ವಜನಿಕರಿಗೆ ಜನನ & ಮರಣ ಪ್ರಮಾಣ ಪತ್ರ ಪಡೆಯಲು ಹಳ್ಳಿಯ ಜನರು ನಗರ ಪ್ರದೇಶದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ನೂತನ ಕ್ರಮವನ್ನು ಜಾರಿಗೆ ತರಲಾಗಿದೆ ಇನ್ಮುಂದೆ ಹಳ್ಳಿ ಜನರು ನಗರದ ಕಚೇರಿಗಳಿಗೆ ಅಲೆಯುವ ಅಶ್ಯಕತೆ ಇರುವುದಿಲ್ಲ. ಹೇಗೆ ಪಡೆಯಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಸರ್ಕಾರದ ಕೆಲವು ಯೋಜನೆಗಳ ಸೌಲಭ್ಯ ಪಡೆಯಲು ನಾಗರಿಕರಿಗೆ ಜನನ-ಮರಣ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯ ಇದೇ ಕಾರಣಕ್ಕೆ ಪ್ರಮಾಣ ಪತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡ
ರಾಜ್ಯ ಸರ್ಕಾರದ ನೂತನ ಕ್ರಮವೇನು? ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಎಲ್ಲಿ ಪಡೆಯಬಹುದಾಗಿದೆ?
ಸಾರ್ವಜನಿಕರು ಜನನ & ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಇನ್ಮುಂದೆ ನಿಮ್ಮ ಊರಿನ ಗ್ರಾಮ ಪಂಚಾಯತಿಯಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆ ಜುಲೈ 1 ರಿಂದಲೇ ಆರಂಭವಾಗಿದೆ.
ನೋಂದಣಿ ಹೇಗೆ?
ಗ್ರಾಮೀಣ ಪ್ರದೇಶದಲ್ಲಿ ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ 30 ದಿನದೊಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ & ಮರಣ ಉಪನೋಂದಣಾಧಿಕಾರಿಗಳನ್ನಾಗಿ ಸರ್ಕಾರವೇ ನೇಮಕ ಮಾಡಿದೆ.
ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಸೇವೆ! ಕೇಂದ್ರದಿಂದ ಮಹತ್ವದ ಸ್ಕೀಮ್
ಪ್ರಮಾಣ ಪತ್ರ ಪಡೆಯಲು ಶುಲ್ಕದ ವಿವರ:
- ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ ಅಥವಾ ಮರಣಗಳಾದ 21 ದಿನಗಳ ಒಳಗಾಗಿ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಬೇಕು.
- 21 ದಿನಗಳ ಬಳಿಕ 30 ದಿನದೊಳಗೆ ನೋಂದಾಯಿಸಿದರೆ- 2 ಶುಲ್ಕ
- 30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸೂಚಿಸಿದೆ.
- ಜನನ- ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ-ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ.
- ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ.
- 30 ದಿನಗಳ ಬಳಿಕ ಒಂದು ವರ್ಷದೊಳಗಾದರೆ ತಹಶೀಲ್ದಾರರ ಪತ್ರ ಲಗತ್ತಿನ ಜೊತೆ ₹5 ಶುಲ್ಕ
- 1 ವರ್ಷ ನಂತರವಾದರೆ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾಪ್ರಾಂತ ದಂಡಾಧಿಕಾರಿ ಆದೇಶ ಪತ್ರ ಲಗತ್ತು- 10 ಶುಲ್ಕ
ಇನ್ನು ಹೆಚ್ಚಿನ ಮಾಹಿತಿಗಾಗಿ:
ಪಂಚಮಿತ್ರ ವೆಬ್ಸೈಟ್: Click here
ಇತರೆ ವಿಷಯಗಳು :
ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ..!
ಶ್ರೀಸಾಮಾನ್ಯರಿಗೆ ಭಾರೀ ಶಾಕ್: ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ!