ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ‘ಗೃಹ ಲಕ್ಷ್ಮಿ’ ಯೋಜನೆಗೆ ಇದೇ ಆಗಸ್ಟ್‌ಗೆ ಒಂದು ವರ್ಷ ತುಂಬುತ್ತಿದೆ. ಕಳೆದ 2023 ಆಗಸ್ಟ್ 30ರಂದು ಸರ್ಕಾರ ಯೋಜನೆಗೆ ಚಾಲನೆ ನೀಡಿತ್ತು. ಆದ್ರೆ ಈ ಹಿಂದಿನ ಎರಡು ತಿಂಗಳಿನಿಂದ ಹಣವು ಜಮೆ ಆಗಿಲ್ಲ ಎಂಬ ದೂರುಗಳು ಅನೇಕ ಬಾರಿ ಬಂದಿವೆ.
‘ಗೃಹ ಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ ರೂ.2000 ಜಮೆ ಮಾಡಲಾಗುತ್ತದೆ. ಜೂನ್, ಜುಲೈ ತಿಂಗಳ ಹಣ ಜಮೆ ಆಗಿಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಎರಡು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಏಕಕಾಲಕ್ಕೆ ಜಮೆಯನ್ನು ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ತಿಳಿಸಿದರು.
2 ತಿಂಗಳ ಹಣ ಒಟ್ಟಿಗೆ ಜಮೆ: ಸಚಿವೆ
ಈ ಕುರಿತು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, ತಾಂತ್ರಿಕ ಕಾರಣದಿಂದಾಗಿ ಈ ರೀತಿಯ ವಿಳಂಬವಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ. ನಿಮಗೆ ಕಳೆದ ಎರಡು ತಿಂಗಳಿಂದ ಭಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯ ಹಣ ಆಗಸ್ಟ್‌ನಲ್ಲಿ ಜಮೆಯು ಆಗಲಿದೆ ಎಂದು ಹೇಳಿದರು.
ಹಣ ಜಮೆ ವೇಳೆ ಒಂದಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಯೋಜನೆಯ ಫಲಾನಭವಿಗಳಿಗೆ ಸಕಾಲಕ್ಕೆ ಹಣ ಜಮೆ ಆಗಿಲ್ಲ. ಇದೀಗ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ಆದಷ್ಟು ಶೀಘ್ರವೇ ನಿಮ್ಮ ಖಾತೆಗೆ ಹಣ ಬರಲಿದೆ. ಆತಂಕ, ಚಿಂತೆ ಪಡಬೇಡಿ, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ ಎಂದರು.
ಸರ್ಕಾರದಿಂದ ಸಣ್ಣ ಉಳಿತಾಯ ಯೋಜನೆಗೆ ಹೊಸ ಬಡ್ಡಿದರ ಘೋಷಣೆ..!
ವರಮಹಾಲಕ್ಷ್ಮೀ ಹಬ್ಬಕ್ಕೂ ಮೊದಲೇ ಗುಡ್‌ನ್ಯೂಸ್
ಇದಷ್ಟೇ ಅಲ್ಲದೇ ಯೋಜನೆ ಅಡಿ ನೋಂದಾಯಿಯ ಫಲಾನುಭವಿಗಳಿಗೆ ಇನ್ಮುಂದೆ ಪ್ರತಿ ತಿಂಗಳು15ನೇ ತಾರೀಖಿನೊಳಗೆ ಹಣವನ್ನು ಜಮೆ ಮಾಡಲು ನಿರ್ಧರವನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣವು ವರ್ಗಾವಣೆ ಆಗಲಿದೆ ಎಂದು ಅವರು ತಿಳಿಸಿದರು. ಈ ಮೂಲಕವಾಗಿ ಮುಂಬರಲಿರುವ ವರಮಹಾಲಕ್ಷ್ಮೀ ಹಬ್ಬಕ್ಕೂ ಮೊದಲೇ ಸಚಿವೆ ಮನೆಯ ಯಜಮಾನಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಸಚಿವೆ ಹೇಳಿಕೆಯಿಂದ ಅನುಮಾನ ನಿವಾರಣೆ
ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಘೋಷಣೆಗಳನ್ನು ಜಾರಿ ಮಾಡಿತು. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಯು ಒಂದಾಗಿದೆ. ಇದರಡಿ ಮನೆಯ ಗೃಹಿಣಿಯೊಬ್ಬರಿಗೆ ಮನೆ ನಿರ್ವಹಣೆ, ಆರ್ಥಿಕ ಸ್ಥಿತಿ ಸರಿದೂಗಿಸಲು, ಮಹಿಳೆಯರ ಆರ್ಥಿಕ ಸಬಲತೆಗಾಗಿ ಮಾಸಿಕವಾಗಿ ಎರಡು ಸಾವಿರ ರೂಪಾಯಿ ಹಣ ನೀಡುತ್ತಾ ಬಂದಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಹಣ ಬಾರದಿದ್ದಾಗ, ಸರ್ಕಾರ ಯೋಜನೆ ನಿಲ್ಲಿಸಿತಾ? ಎಂಬ ಅನುಮಾನ ಕಾಡಿತ್ತು. ಇದೀಗ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನಿಂದ ಸಂಶಯಗಳು, ಗೊಂದಲಗಳು ನಿವಾರಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು :
ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ 10,000 ರೂ. ಸಬ್ಸಿಡಿ ಸಾಲ! ಹೀಗೆ ಅಪ್ಲೇ ಮಾಡಿ
ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ!