ಹಲೋ ಸ್ನೇಹಿತರೇ, ಸಾರ್ವಜನಿಕರೇ ಹುಷಾರ್. ನೀವು ಆನ್ಲೈನ್ ನಲ್ಲಿ ವ್ಯವಹಾರ ಮಾಡುವವರಾದರೇ ಈ ಸುದ್ದಿಯನ್ನು ಬಿಡುವು ಮಾಡಿಕೊಂಡು ಓದಿ ಏಕೆ ಅಂದ್ರೆ ಇದು ನಿಮ್ಮ ದಿನ ನಿತ್ಯದ ಜೀವನಕ್ಕೆ ಸಂಬಂಧಿಸಿದೆ. ಹೌದು ಸ್ನೇಹಿತರೇ ಇದಕ್ಕೆಲ್ಲ ಕಾರಣ ಅದ್ರೆ ಅದು ನಾವು ದಿನನಿತ್ಯ ಬಳಕೆ ಮಾಡುವ ಆನ್ಲೈನ್ ಮಾಧ್ಯಮ. ಇಲ್ಲಿ ಅನೇಕರು ನಮಗೆ ಗೊತ್ತಿಲ್ಲದ ಹಾಗೇ ನಮ್ಮ ಹಣವನ್ನು ಕಳ್ಳತನ ಮಾಡುತ್ತಾರೆ. ಅದೆ ರೀತಿಯ ಪ್ರಕರಣದ ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಈ ಲೇಖನವನ್ನು ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಈ ರೀತಿಯ ಮೋಸದಿಂದ ನೀವು ಮತ್ತು ನಿಮ್ಮ ಕುಟುಂಬದವರನ್ನು ಕಾಪಾಡಿಕೊಳ್ಳಿ.
ಹೈದರಾಬಾದ್ನ 30 ವರ್ಷದ ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಇತ್ತೀಚಿನದಿನದಲ್ಲಿ ತಮ್ಮೊಂದಿಗೆ ಒಂದು ಘಟನೆಯನ್ನು ನಿಮ್ಮೊಂದಿಗೆ ಶೇರ್ ಮಾಡಿದ್ದಾರೆ. ಅವರು ಕೂಡ ಆನ್ಲೈನ್ ಮಾಧ್ಯಮದಿಂದ ವಂಚನೆಗೆ ಒಳಗಾಗಿದ್ದಾರೆ. ಅವರು ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಕಾರಣದಿಂದ ಕಳೆದು ಕೊಂಡಿದ್ದಾರೆ. ಜನರನ್ನು ವಂಚಿಸಿ ಹನವನ್ನು ಪಡೆದುಕೊಳ್ಳುವ ಸೈಬರ್ ಅಪರಾಧಿಗಳು ಹೊಸ ತಂತ್ರವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಅಮಾಯಕ ಜನರ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ. ಇದು ಅನೇಕರ ತಲೆ ನೋವಿಗೆ ಕಾರಣವಾದ ಸಂಗತಿಯಾಗಿದೆ.
ಈ ಘಟನೆ ನಡೆಯುವ ಮೊದಲು ಹೈದರಾಬಾದ್ ನ ಈ ವ್ಯಕ್ತಿಗೆ ಅಪರಿಚಿತ ವಾಟ್ಸ್ ಪ್ ನಿಂದ ಸಂದೇಶ ಒಂದು ಬಂದಿತ್ತು ಅದರಲ್ಲಿ ಗ್ರಾಹಕನ್ನು ಬೆಂಬಲಿಸುವ ಶೀರ್ಷಿಕೆಯ ಅಡಿಯಲ್ಲಿ APK ಫೈಲ್ ಅನ್ನು ಕೂಡ ಲಿಂಕ್ ಮಾಡಲಾಗಿತ್ತು.
ಗೃಹಿಣಿಯರಿಗೆ ಸಂತಸದ ಸುದ್ದಿ.!! ಒಂದೇ ದಿನ ಏರಡು ತಿಂಗಳ ಹಣ ಖಾತೆಗೆ ಜಮಾ
ಹೊಸದಾದ ಕ್ರೆಡಿಟ್ ಕಾಡ್ ಗೆ ಸಂಬಂಧಿಸಿದ ಸಂಗತಿಗಳನ್ನು ಇಲ್ಲಿ ಕೇಳಾಲಾಗಿತ್ತು. ಈ ಮಾಹಿತಿಯನ್ನು ಓದಿದ ಬಳಕೆದಾರರಿಗೆ ಇದು ಅಧಿಕೃತ ಎನ್ನಿಸುವಂತಿದ್ದರಿಂದ ಅವರು ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದಾನೆ.
ಅದರ ನಂತರ APK ಅನ್ನು ಸ್ಥಾಪಿಸಿದ ತಕ್ಷಣ, ಸ್ಕ್ಯಾಮರ್ಗಳು ಮೊಬೈಲ್ ಒಳ ಹೊಕ್ಕಿ ಎಲ್ಲ ಮಾಹಿತಿ ಪಡೆದಿದ್ದಾರೆ. ಎಲ್ಲ ಮಾಹಿತಿ ನೀಡಿದ ನಂತ್ರ ಫೋನ್ ನ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಎಸ್ ಎಂಎಸ್, ಕರೆ ಸೇರಿದಂತೆ ಎಲ್ಲವೂ ಕಡಿತವಾಗಿತ್ತು. ಜೊತೆಗ ಇ ಸಿಮ್ ಬಳಸಿ ವಂಚಕರು ಹಣವನ್ನು ವಿತ್ ಡ್ರಾ ವನ್ನು ಮಾಡಿದ್ದಾರೆ. ಇದಕ್ಕೆ ಯಾವುದೇ ಒಟಿಪಿ ಅಗತ್ಯವಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಖಾತೆಯಲ್ಲಿ ಇದ್ದಂತಹ 1,06,650 ರೂಪಾಯಿ ವಿತ್ ಡ್ರಾ ಆಗಿರೋದು ಆತನಿಗೆ ತಿಳಿದಿದೆ. ಈ ಸಂಬಂಧ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.
ಇತರೆ ವಿಷಯಗಳು :
ಸರ್ಕಾರದಿಂದ ಸಣ್ಣ ಉಳಿತಾಯ ಯೋಜನೆಗೆ ಹೊಸ ಬಡ್ಡಿದರ ಘೋಷಣೆ..!
ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ!