ಹಲೋ ಸ್ನೇಹಿತರೇ, ರಾಜ್ಯ ಸರ್ಕಾರವು 2017 ಹಾಗೂ 2018ನೇ ಸಾಲಿನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡುವ ಯೋಜನೆಯ ಅಡಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಕ್ಕೆ ಅನ್ವಯವಾಗುವಂತೆ ರಾಜ್ಯದ ಒಟ್ಟು 17.37 ಲಕ್ಷ ರೈತರು ಬೆಳೆ ಸಾಲ ಮನ್ನಾದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಆದ್ರೆ ರಾಜ್ಯಾದ್ಯಂತ ಈ ಯೋಜನೆಯ ಯಡಿಯಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ರಾಜ್ಯದ 31,000 ರೈತರಿಗೆ ಇದ್ರ ಪ್ರಯೋಜನವು ದೊರೆತಿಲ್ಲ. ಈ ಕಾರಣದಿಂದಾಗಿ ಇತ್ತೀಚಿಗೆ ನಡೆದಂತಹ ವಿಧಾನ ಪರಿಷತ್ ಸಚಿವ ಸಂಪುಟದಲ್ಲಿ ಸಹಕಾರ ಸಚಿವರಾಗಿರುವಂತಹ ಕೆ. ಎನ್ ರಾಜನ್ ರವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಬೆಳೆ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಪ್ರಯೋಜನ ಪಡೆಯದೇ ಇರುವಂತಹ 31 ಸಾವಿರ ರೈತರಿಗೆ ನೀಡಬೇಕಾಗಿರುವ 161.51 ಕೋಟಿ ರೂಪಾಯಿ ಹಣವನ್ನು ಮತ್ತು ಬಾಕಿ ಇರುವ ರೈತರ ಮೊತ್ತ 64 ಕೋಟಿ ರೂಪಾಯಿ ಹಣವು ಸೇರಿ ಒಟ್ಟು 232 ಕೋಟಿ ರೂಪಾಯಿ ಹಣವನ್ನು ಬಿಡುಗಡೆಯನ್ನು ಮಾಡಲಾಗುವುದೆಂದು ತಿಳಿಸಿದ್ದಾರೆ.
ಇತರೆ ವಿಷಯಗಳು
ಟ್ರಾಫಿಕ್ ಚಲನ್ ಹೊಸ ನಿಯಮ! ಇನ್ಮುಂದೆ ಒಂದು ರೂಪಾಯಿ ಕೂಡ ಪಾವತಿಸಬೇಕಾಗಿಲ್ಲ
EPFO ಬಳಕೆದಾರರಿಗೆ ಬಿಗ್ ಅಪ್ಡೇಟ್..!