ಪ್ರವಾಹ ಸಂತ್ರಸ್ತರಿಗೆ ಭರವಸೆಯ ಸುದ್ದಿ.!! `ಪರಿಹಾರ’ ಮೊತ್ತ ಘೋಷಿಸಿದ ಸರ್ಕಾರ

ಹಲೋ ಸ್ನೇಹಿತರೇ, ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯನ್ನು ನೀಡಿದ್ದು, ಪ್ರವಾಹದ ಸಂತ್ರಸ್ತರ `ಪರಿಹಾರ ಮೊತ್ತ’ ನಿಗದಿಪಡಿಸಿ ರಾಜ್ಯ ಸರ್ಕಾರವೇ ಆದೇಶವನ್ನು ಹೊರಡಿಸಿದೆ.

compensation money announcement

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ಥಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ನೀಡುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ಕಂಇ 258 ಟಿಎನ್‌ಆರ್ 2024, ದಿನಾಂಕ: 01.08.2024 ರಲ್ಲಿ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಈ ಕೆಳಕಂಡಂತೆ ಪಾವತಿಸಲು ನಿರ್ದೇಶನಗಳನ್ನು ನೀಡಲಾಗಿದೆ.

  1. ಸರ್ಕಾರದ ದಿನಾಂಕ: 01.08.2024 ರ ಆದೇಶದ ಕ್ರ.ಸಂ: 04 ರಲ್ಲಿ ತಿಳಿಸಿರುವಂತೆ ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ಥಿಗೆ ಕನಿಷ್ಟ ರೂ.6,500/- ಗಳಿಂದ ಗರಿಷ್ಟ ರೂ.50,000/-ಗಳನ್ನು ಈ ಕೆಳಕಂಡಂತೆ ಪಾರದರ್ಶಕತೆ ಮಾನದಂಡಗಳನ್ವಯ ಅರ್ಹತೆಯನುಸಾರ ಪಾವತಿಸುವುದು.
  2. ಅತಿವೃಷ್ಟಿ/ಪ್ರವಾಹದಿಂದ ಮನೆಯ ಗೋಡೆಗಳೊಂದಿಗೆ ಮೇಲ್ಮಾವಣಿ ಕುಸಿತ (Walls and roof collapse) (ಶೇ.75% ಕ್ಕಿಂತ ಹೆಚ್ಚು) ಹಾನಿಯಾದ ಮನೆಗಳನ್ನು ಸಂಪೂರ್ಣ ಹಾನಿಯಾದ ಮನೆಯೆಂದು ಪರಿಗಣಿಸಿ, ಸರ್ಕಾರದ ಇದೇ ಸಮಸಂಖ್ಯೆಯ ಆದೇಶ ದಿನಾಂಕ: 01-08-2024ರ ಕ್ರಮ ಸಂಖ್ಯೆ: 02 ರಲ್ಲಿನ ನಿರ್ದೇಶನದಂತೆ ಕ್ರಮವಹಿಸತಕ್ಕದ್ದು.

ಬೇರೆ ಜಾತಿಯವರ ಜೊತೆ ಮದುವೆ ಆದವರಿಗೆ ಭರ್ಜರಿ ಸುದ್ದಿ.!!‌ ಟಕಾ ಟಕ್‌ ಅಂತ ನಿಮ್ಮ ಖಾತೆ ಸೇರಲಿದೆ 3ಲಕ್ಷ ರೂ.

  1. ಮನೆಹಾನಿಯ ಪ್ರಮಾಣವನ್ನು ಈ ಮೇಲಿನಂತೆ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸುವುದು. ಇದೆ ದಿನಾಂಕ: 01.08.2024 ರ ಆದೇಶದಲ್ಲಿ ನಿಗದಿಪಡಿಸಿರುವ ಕಾಲಮಿತಿಯೊಳಗೆ ನಿಯಮಾನುಸಾರ ಅರ್ಹ ಸಂತ್ರಸ್ಥರಿಗೆ ಪರಿಹಾರ ಪಾವತಿಸಲು ಕ್ರವಹಿಸುವುದು.
  2. ಭಾಗಶಃ ಮನೆ ಹಾನಿಗಾಗಿ ರೂ.50,000/- ಗಳ ವರೆಗೆ ಪಾವತಿಸಲಾಗುವ ಮನೆ ಹಾನಿ ಪರಿಹಾರ ಪಡೆಯುವ ಸಂತ್ರಸ್ಥರ ವಿವರಗಳಾದ, ಹಾನಿಯಾದ ಮನೆಯ ಜಿ.ಪಿ.ಎಸ್. ಛಾಯಾಚಿತ್ರ, ಆರ್.ಆರ್. ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸತಕ್ಕದ್ದು.
  3. ಪೂರ್ಣವಾಗಿ ಹಾನಿಯಾದ ಮನೆಗಳಿಗೆ ರಾಜ್ಯದ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳ ಅನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆ ಅಡಿ ಮನೆಯನ್ನು ಹಂಚಿಕೆ ಪತ್ರವನ್ನು ಜಿಲ್ಲಾಧೀಕಾರಿಗಳ ಹಂತದಲ್ಲಿಯೇ RGRHCL ತಂತ್ರಾಂಶಗಳ ಮೂಲಕ ವಿತರಿಸತಕ್ಕದ್ದುಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು

ನಿಮ್ಮ ಆಧಾರ್ ಕಳೆದುಹೋಗಿದೆಯೇ? ಸಂಖ್ಯೆ ನೆನಪಿಲ್ಲವೇ? ಈ ರೀತಿಯಲ್ಲಿ ಕಂಡುಹಿಡಿಯಿರಿ!

ಕಿಸಾನ್ 17ನೇ ಕಂತಿನ ಹಣ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕೀ!

Leave a Reply

Your email address will not be published. Required fields are marked *