ಹಲೋ ಸ್ನೇಹಿತರೇ, ಕರ್ನಾಟಕ ಸಾಕಷ್ಟು ಯೋಜನೆಗಳ ಜೊತೆಗೆ ಅಂತರ್ ಜಾತಿಯ ವಿವಾಹ ಪ್ರೋತ್ಸಾಹ ಯೋಜನೆಗಳನ್ನು ಕೂಡ ಹೊಂದಿದೆ. ಅಂತರ್ ಜಾತಿಯ ವಿವಾಹ ಸಹಾಯ ಯೋಜನೆಯು ಜಾತಿಯ ಆಧಾರಿತವಾದ ತಾರತಮ್ಯವನ್ನು ಹೋಗಲಾಡಿಸುವುದು ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯನ್ನು 2015 ರಿಂದ ಜಾರಿಗೊಳಿಸಲಾಗಿದೆ.
ಅಂತರ್ ಜಾತಿ ವಿವಾಹ ಸಹಾಯ ಯೋಜನೆಗೆ ಅರ್ಹತೆ
ಕರ್ನಾಟಕ ಅಂತರ್ ಜಾತಿ ಜೋಡಿಯ ವಿವಾಹ ಸಹಾಯ ಯೋಜನೆ ಅಡಿ, ಕರ್ನಾಟಕ ಸರ್ಕಾರವು ರೂ. 2,50,000/- ವರನಿಗೆ ಹಾಗೂ ರೂ. 3,00,000/- ವಧುವಿಗೆ ಆರ್ಥಿಕವಾದ ಸಹಾಯವನ್ನು ನೀಡಲಿದೆ. ಇದು ಅಂತರ್ಜಾತಿಯ ವಿವಾಹ ನೆರವು ಯೋಜನೆ ಎಂಬುದು ಹೆಸರಿನಿಂದಲೇ ಸ್ಪಷ್ಟವಾಗಿರುವುದರಿಂದ ದಂಪತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಕ್ಕೆ ಸೇರಿರುವುದು ಕಡ್ಡಾಯವಾಗಿದೆ.
ಅಂತರ್ಜಾತಿ ಜೋಡಿ ವಿವಾಹದ ಸಹಾಯ ಯೋಜನೆಯಡಿಯಲ್ಲಿ ಆರ್ಥಿಕವಾದ ಸಹಾಯವನ್ನು ಪರಿಶಿಷ್ಟ ಜಾತಿಯಲ್ಲದ ಹಿಂದೂ ಧರ್ಮದ ವ್ಯಕ್ತಿಯನ್ನು ಮದುವೆಯಾಗುವ ಕರ್ನಾಟಕದ ಪರಿಶಿಷ್ಟ ಜಾತಿಯ ನಿವಾಸಿಗಳಿಗೆ ಮಾತ್ರವೇ ಈ ಯೋಜನೆಯಡಿ ಧನ ಸಹಾಯವನ್ನು ಒದಗಿಸಲಾಗುತ್ತದೆ. ಮದುವೆಯಾದ ದಂಪತಿಯರ ವಾರ್ಷಿಕ ಆದಾಯ ರೂ.500000/- ಕಿಂತ ಹೆಚ್ಚಾಗಿರಬಾರದು.
01-04-2018 ರ ಅನಂತರ ನಡೆದ ವಿವಾಹಗಳು ಕರ್ನಾಟಕ ಅಂತರ್ ಜಾತಿಯ ಜೋಡಿಗಳ ವಿವಾಹ ಸಹಾಯ ಯೋಜನೆ ಅಡಿ ಆರ್ಥಿಕವಾದ ಸಹಾಯಕ್ಕೆ ಅರ್ಹರಾಗಿರುತ್ತಾರೆ. ಮದುವೆಯಾದ ಒಂದು ವರ್ಷದ ಒಳಗೆ ಆರ್ಥಿಕ ಸಹಾಯಕ್ಕಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಒಂದು ವರ್ಷದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.
ಕರ್ನಾಟಕ ಅಂತರ್ಜಾತಿ ವಿವಾಹ ಸಹಾಯ ಧನ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಅರ್ಹತೆಯನ್ನು ಹೊಂದಿದ ದಂಪತಿಗಳು ಈ ಸಹಾಯವನ್ನು ಪಡೆಯಲು ಆನ್ಲೈನ್ ನ ಮೂಲಕ ಕರ್ನಾಟಕ ಅಂತರ್ಜಾತಿ ದಂಪತಿ ಸಹಾಯ ನಮೂನೆಯನ್ನು ಭರ್ತಿ ಮಾಡುವ ಮೂಲಕ ಈ ಯೋಜನೆಯ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.
ಅಗತ್ಯವಾಗಿ ಬೇಕಾಗಿರುವ ದಾಖಲೆಗಳು
- ಕರ್ನಾಟಕದ ನಿವಾಸ
- ವಧು ಮತ್ತು ವರನ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಖಾತೆ ವಿವರಗಳು
- ಮದುವೆಯ ಫೋಟೋ
- ಮದುವೆ ಪ್ರಮಾಣಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
ಕಿಸಾನ್ 17ನೇ ಕಂತಿನ ಹಣ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕೀ!
ಅರ್ಜಿ ಸಲ್ಲಿಸುವ ವಿಧಾನ
- ಈ ಯೋಜನೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಸಂಗಾತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು.
- ನೋಂದಣಿಯ ಅನಂತರ ವೈಯಕ್ತಿಕವಾದ ವಿವರಗಳು, ಸಂಪರ್ಕ ವಿವರಗಳು ಹಾಗೂ ಮದುವೆಯಾಗಿರುವುದಕ್ಕೆ ಸಂಬಂಧಿಸಿದ ವಿವರಗಳು, ವಧು ಮತ್ತು ವಧುವರರ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿಯನ್ನು ಮಾಡಿ.
- ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸುವ ಮೂಲಕ ಅರ್ಜಿಯನ್ನು ಸಬ್ಮಿಟ್ ಮಾಡಿ.
- ಭರ್ತಿ ಮಾಡಲಾದ ಅರ್ಜಿ ನಮೂನೆಯನ್ನು ಪೂರ್ವ ವೀಕ್ಷಿಸಿ ಸಲ್ಲಿಸಿ. ಯಾಕೆಂದ್ರೆ ಮತ್ತೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಒಮ್ಮೆ ಭರ್ತಿ ಮಾಡಿದರೆ ಅದು ಮತ್ತೆ ತಿದ್ದುಪಡಿಪಡಿಸಲು ಸಾಧ್ಯವಿಲ್ಲ.
- ಸ್ವೀಕೃತಿ ರಶೀದಿಯನ್ನು ಮುದ್ರಿಸಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಇವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಮುಂದೆ ಇದು ಬೇಕಾಗುತ್ತದೆ.
- ಪ್ರಗತಿಸಲಾದ ದಾಖಲೆಗಳು ಮತ್ತು ಸಲ್ಲಿಸಿದ ಅರ್ಜಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಾರೆ.
- ಪರಿಶೀಲನೆಯ ನಂತರ ಕರ್ನಾಟಕ ಅಂತರ್ಜಾತಿ ಮದುವೆ ಆರ್ಥಿಕ ಸಹಾಯವನ್ನು ಅರ್ಜಿ ಸಲ್ಲಿಸಲಾದ ಫಲಾನುಭವಿಯ ಬ್ಯಾಂಕ್ ಖಾತೆಗೆ ಅರ್ಧ ಹಣವನ್ನು ಜಮಾ ಮಾಡಲಾಗುತ್ತದೆ. ಉಳಿದರ್ಧವನ್ನು ಜಂಟಿಖಾತೆಯಲ್ಲಿ ಎಫ್ಡಿ ಇಡಲಾಗುತ್ತದೆ.
ಈ ಯೋಜನೆ ಸಂಬಂಧ ಹೆಚ್ಚಿನ ಮಾಹಿತಿ ಅಗತ್ಯ ಇದ್ದರೆ ಇವರನ್ನು ಸಂಪರ್ಕಿಸಿ.
ಕರ್ನಾಟಕ ರಾಜ್ಯ ಅಂತರ್ ಜಾತಿ ಜೋಡಿಯ ವಿವಾಹ ಸಹಾಯ ಯೋಜನೆಯ ಸಹಾಯವಾಣಿ ಸಂಖ್ಯೆ ಈ ಕೆಳಗಿನಂತಿವೆ.
080-22340956
080-22634300
09480843005
09008400078
ಕರ್ನಾಟಕ ಅಂತರ್ ಜಾತಿ ಜೋಡಿ ವಿವಾಹ ಸಹಾಯ ಯೋಜನೆ ಸಹಾಯವಾಣಿ ಇಮೇಲ್
[email protected]
ಕವೇರಿ ವಿಳಾಸ
ಸಮಾಜ ಕಲ್ಯಾಣ ಇಲಾಖೆಯ ಕಮಿಷನರೇಟ್, ಕರ್ನಾಟಕ ಸರ್ಕಾರ,
5 ನೇ ಮಹಡಿ, MS ಕಟ್ಟಡ,
ಡಾ. ಅಂಬೇಡ್ಕರ್ ವೀಧಿ,
ಬೆಂಗಳೂರು, ಕರ್ನಾಟಕ – 560001.
ಅರ್ಜಿ ಸಲ್ಲಿಕೆ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
ಇತರೆ ವಿಷಯಗಳು
ನಿಮ್ಮ ಆಧಾರ್ ಕಳೆದುಹೋಗಿದೆಯೇ? ಸಂಖ್ಯೆ ನೆನಪಿಲ್ಲವೇ? ಈ ರೀತಿಯಲ್ಲಿ ಕಂಡುಹಿಡಿಯಿರಿ!
ಇನ್ಮುಂದೆ ಮನೆ ಬದಲಿಸಿದರೂ ಗೃಹಜ್ಯೋತಿ ಯೋಜನೆ ಲಾಭ!