ಹಲೋ ಸ್ನೇಹಿತರೆ, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ವ್ಯಾಪ್ತಿಯ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ. ಏನೆಂದರೆ ಇತರ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನದಂತೆ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ಪಾವತಿಸುವಂತೆ ಕೇಳಿಕೊಳ್ಳಲಾಗಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅವರ ಬೇಡಿಕೆ ಈಡೇರಿಸಿದ್ದು, ಎಚ್‌ಆರ್‌ಎಂಸ್ ಮೂಲಕ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ.
ಆಗಸ್ಟ್ ತಿಂಗಳಿನಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಂತೆ ವೇತನವನ್ನು ಈ ವ್ಯವಸ್ಥೆಯ ಮೂಲಕ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆದೇಶ ಹೊರಡಿಸಿದೆ.
ಈ ಆದೇಶದ ಅನುಸಾರ ”KSRTC ನಿಗಮದಲ್ಲಿ ಈಗಾಗಲೇ ಹೆಚ್.ಆರ್.ಎಂ.ಎಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಎಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜಾ ದಿನಗಳ ಮಂಜೂರಾತಿಯ ಅನ್ವಯ ಇದೇ 2024ರ ಆಗಸ್ಟ್ ತಿಂಗಳಿಂದ ಕಡ್ಡಾಯವಾಗಿ ಎಚ್.ಆರ್.ಎಂ.ಎಸ್ ತಂತ್ರಾಂಶದ ಅಡಿಯಲ್ಲಿ ನಿಗಮದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ವೇತನ ಬಿಲ್ಲುಗಳನ್ನು ತಯಾರಿಸಿ ಪಾವತಿಸಲು ಕ್ರಮಕೈಗೊಳ್ಳಲಾಗುವುದು.
ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ.. ಕೂಡಲೇ ಇದನ್ನು ಮಾಡಿ
ಇನ್ನೂ HRMS ತಂತ್ರಾಂಶವನ್ನು ಹೊರತುಪಡಿಸಿ, ಇತರೇ ಮಾದರಿಯ ವೇತನ ಬಿಲ್ಲುಗಳನ್ನು ತಯಾರಿಸಲು ಅವಕಾಶ ಇಲ್ಲ” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆಯಾ ಘಟಕ/ವಿಭಾಗ/ಪ್ರಾ.ಕಾರ್ಯಾಗಾರ/ಕೇಂದ್ರ ಕಛೇರಿಗಳಲ್ಲಿ HRMS ತಂತ್ರಾಂಶದಲ್ಲಿ ವೇತನ ಬಿಲ್ಲುಗಳನ್ನು ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆದೇಶದ ಮೂಲಕ ಸೂಚಿಸಲಾಗಿದೆ.
ಎಚ್‌ಆರ್‌ಎಂಎಸ್ ನಿಂದ ಸಿಗುವ ಸೌಕರ್ಯಗಳು ಏನು?
ಈ ಎಚ್‌ಆರ್‌ಎಂಎಸ್ (Human Resource Management System) ಅಡಿ ರಾಜ್ಯ ಸರ್ಕಾರಿ ನೌಕರರು ಕೆಜಿಐಡಿ ಮೂಲಕ ನೋಂದಣಿ ಮಾಡಿಕೊಂಡು ವೇತನವನ್ನು ನೇರವಾಗಿ ಪೇ ಸ್ಲಿಪ್ ಮೂಲಕ ಪಡೆಯಬಹುದು. ಇದೇ ರೀತಿ ಸಾರಿಗೆ ನೌಕರರು ಇನ್ನು ಮುಂದೆ ವೇತನದ ಪೇ ಸ್ಲಿಪ್ ಪಡೆಯಲಿದ್ದಾರೆ.
ಸಾರಿಗೆ ನೌಕರರು ತಮಗೆ ಎಷ್ಟು ರಜೆ ಇವೆ ಎಂದು ಎಚ್‌ಆರ್‌ಎಂಎಸ್‌ನಲ್ಲಿ ಪಟ್ಟಿಯನ್ನು ಪರಿಶೀಲಿಸಬಹುದು. ಇದರಿಂದ ಮುಂದಿನ ರಜೆ ಪಡೆಯಲು ಅವರಿಗೆ ಅನುಕೂಲವಾಗಲಿದೆ. ಅಲ್ಲದೇ ಸಾಲ ಅಥವಾ ಮುಂಗಡದ ವಿವರ ತಿಳಿಯಲು ಜೊತೆಗೆ ಉದ್ಯೋಗಿಗಳು ವೇತನ ಕಡಿತ, ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್ ಮುಂತಾದ ಸೌಲಭ್ಯಗಳ ಡೇಟಾವನ್ನು ಸಹ ನೋಡಬಹುದು.
ಇತರೆ ವಿಷಯಗಳು:
ಸಾಲ ಪಡೆಯುವವರಿಗೆ ಗುಡ್ ನ್ಯೂಸ್.!! ಈ ದಾಖಲೆ ಇದ್ದವರ ಕೈ ಸೇರಲಿದೆ 5 ಲಕ್ಷ ರೂ.
ನಿರುದ್ಯೋಗಿ ಯುವಕರಿಗೆ ಭರ್ಜರಿ ಗುಡ್ ನ್ಯೂಸ್! ಸ್ವಯಂ ಉದ್ಯೋಗಕ್ಕೆ 30,000 ಸಹಾಯಧನ