ಹಲೋ ಸ್ನೇಹಿತರೇ, ಗ್ಯಾರಂಟಿ ಯೋಜನೆಗಳನ್ನು ಇಂದಿನ ಸಚಿವರನ್ನು ಕೇಳಿ ಮಾಡಿಲ್ಲ. ಇವುಗಳನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು, ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಗಳಾದ ರಣದೀಪ್ ಸುರ್ಜೇವಾಲಾ ರವರು, ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ, ಇಂದಿನ CM ಸಿದ್ದರಾಮಯ್ಯರವರು, ಅಂದಿನ ಕೆಪಿಸಿಸಿ ಅಧ್ಯಕ್ಷರು ಮತ್ತು ಇಂದಿನ DCM ಡಿಕೆ ಶಿವಕುಮಾರ್ ಅವರೆಲ್ಲರೂ ಸೇರಿ ಕರೋನಾದಿಂದ ತತ್ತರಿಸಿದ ಜನರ ಬದುಕಿಗೆ ಆಸರೆ ಆಗಬೇಕು. ಅವರ ಬದುಕಿಗೆ ಬೆಳಕಾಗಬೇಕು ಎಂಬ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆಯನ್ನು ಮಾಡಲಾಗಿತ್ತು.
ಅಲ್ಲದೆ, ಗ್ಯಾರಂಟಿಗಳನ್ನು ಚುನಾವಣೆಯ ಮತ ಗಳಿಕೆಗಾಗಿ ಘೋಷಣೆ ಮಾಡಿದ್ದಲ್ಲ. ಶ್ರೀಸಾಮಾನ್ಯರನ್ನು ಮಹಿಳೆಯರನ್ನು ಆರ್ಥಿಕವಾಗಿ ಶಕ್ತಿಯುತರಾಗಿ ಸಬಲರನ್ನಾಗಿ ಮಾಡಬೇಕೆಂಬ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಈ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಜಾರಿಗೆ ತಂದಿದೆ.
ಇಂದು ಈಗ್ಯಾರಂಟಿ ಯೋಜನೆಗಳು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಜೀವನಾಧಾರವಾಗಿವೆ. 4.40 ಕೋಟಿ ಜನರಿಗೆ ಈ ಐದೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ರಾಜ್ಯ ಸರ್ಕಾರವನ್ನು ಕೂಡ ಈ ಬಜೆಟ್ ನಲ್ಲಿ 58,000 ಕೋಟಿ ರೂಪಾಯಿಯನ್ನು ಇದಕ್ಕೋಸ್ಕರ ತೆಗೆದಿರಿಸಿದೆ.
ಎಸ್ಎಸ್ಎಲ್ಸಿ ಪಾಸಾದ ಮಹಿಳೆಯರಿಗೆ ಬಂಪರ್ ನ್ಯೂಸ್ : ಈ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇದರ ಬಗ್ಗೆ ಕೆಲವರು ಅನಾವಶ್ಯಕವಾಗಿ ಮಾಧ್ಯಮಗಳಿಗೆ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದನ್ನು ಪಕ್ಷದ ಚೌಕಟ್ಟಿನಲ್ಲಿ ಸರ್ಕಾರ ತೀರ್ಮಾನ ಮಾಡುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಕೂಡ ಅನಾವಶ್ಯಕವಾಗಿ ಕೆಲವು ಸಚಿವರು ಮಾತನಾಡುತ್ತಿರುವುದು ಸರಿಯಲ್ಲ. ಅದೇನೇ ಇದ್ದರೂ ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ಹೇಳಿಕೆ ಕೊಡಬೇಕು .
ಇತರೆ ವಿಷಯಗಳು:
ಉಚಿತ ಗ್ಯಾಸ್ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ! ಈ ದಾಖಲೆಗಳು ಕಡ್ಡಾಯ
ಜನ ಸಾಮಾನ್ಯರಿಗೆ ಭರ್ಜರಿ ನ್ಯೂಸ್.!! ಈ ದಾಖಲೆ ಇದ್ರೆ ನಿಮಗೆ ಸಿಗಲಿದೆ 20 ಲಕ್ಷ ಸಾಲ ಸೌಲಭ್ಯ