ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!! ಈ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ

ಹಲೋ ಸ್ನೇಹಿತರೇ, 2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಬ್ ಇನ್ಸ್ ಪೆಕ್ಟರ್, ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ ನೀಡಲಾಗುತ್ತದೆ.

Pre-Exam Training of Social Welfare Department
Pre-Exam Training of Social Welfare Department

ಅಲ್ಲದೇ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿಯನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತಂತೆ ಬೆಂಗಳೂರಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಮುಖ್ಯ ಆಡಳಿತಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದಿದ್ದಾರೆ.

ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.

ನೇಮಕಾತಿ ತರಬೇತಿ ವಿವರ:

ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ನೀಡುವ ಸಂಬಂಧ ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿ ನೀಡಲಾಗುವುದು.

ವಯಸ್ಸು – ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ. ಸೇವಾನಿರತವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ
ವಿದ್ಯಾರ್ಹತೆ- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ (Degree) ಅಥವಾ ತತ್ಸಮಾನ (ಪಿಯುಸಿ ನಂತರ ಪದವಿಗೆ ಸಮನಾದ ಯಾವುದೇ ವಿದ್ಯಾರ್ಹತೆ) ಶಿಕ್ಷಣ ಪಾಸ್ ಮಾಡಿರಬೇಕು.
ಸೇವಾನಿರತ ಅಭ್ಯರ್ಥಿಗಳಿಗೆ ಅನುಭವ – ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರಬೇಕು.

ಬ್ಯಾಂಕ್‌ ಖಾತೆದಾರರೇ ಹುಷಾರ್.!!‌ 1,000 ರೂಪಾಯಿಕ್ಕಿಂತ ಕಡಿಮೆ ಹಣ ಇದ್ರೆ ಎಚ್ಚರ..

ಅಭ್ಯರ್ಥಿಯ ಸಾಮಾನ್ಯ ಅರ್ಹತೆ:

1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು;
2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
3.ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಎತ್ತರ – ಪುರುಷರಿಗೆ ಕನಿಷ್ಠ 163 ಸೆಂ.ಮೀ, ಮಹಿಳೆಯರಿಗೆ ಕನಿಷ್ಠವಾಗಿ 153 ಸೆಂ.ಮೀ

ತೂಕ – ಪುರುಷರಿಗೆ ಕನಿಷ್ಠವಾಗಿ 50 ಕೆ.ಜಿ ಮಹಿಳೆಯರಿಗೆ ಕನಿಷ್ಠ 45 ಕೆ.ಜಿ
ಎದೆಯ ಗಾತ್ರ (ಪುರುಷರಿಗೆ) – ಕನಿಷ್ಠ 76 ಸೆಂ.ಮೀ
ಆಯ್ಕೆ ವಿಧಾನ – ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವೆಬ್ ಸೈಟ್ ವಿಳಾಸ – Petc.kar.nic.in
ಅರ್ಜಿ ಸಲ್ಲಿಸಲು – 31.08.2024

ಗಮನದಲ್ಲಿಡಬೇಕಾದ ಅಂಶ

*ಇಲಾಖಾ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ನೀಡಲಾಗುವಂತಹ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ.

*ಇಲಾಖಾವತಿಯಿಂದ ಪತ್ರ ವ್ಯವಹಾರವನ್ನು ಯಾವುದೇ ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್ ಸೈಟ್ ನ್ನು ಕಾಲಕಾಲಕ್ಕೆ ವೀಕ್ಷಿಸತಕ್ಕದ್ದು.

*ತಪ್ಪು ಮಾಹಿತಿಯ ಕಾರಣದಿಂದ ಊಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.

ಇತರೆ ವಿಷಯಗಳು:

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ.!! ʻNMMSʼ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮದುವೆಯಾಗುವವರಿಗೆ ಸರ್ಕಾರದಿಂದ ಬಂಪರ್‌ ಸುದ್ದಿ! 2.50 ಲಕ್ಷ ರೂ. ಪ್ರೋತ್ಸಾಹ ಧನ

Leave a Reply

Your email address will not be published. Required fields are marked *