ಹಲೋ ಸ್ನೇಹಿತರೇ, ಕಾರನ್ನು ಖರೀದಿಸುವುದು ಪ್ರತಿಯೊಬ್ಬರಿಗೂ ಕೂಡ ಅತ್ಯಂತ ಇಷ್ಟವಾಗಿರುವಂತಹ ಕೆಲಸ ಎಂದು ಹೇಳಬಹುದಾಗಿದೆ. ಹಣ ಇದ್ದರೆ ಸಾಕು ಯಾವ ರೀತಿಯ ಕಾರ್ ಅನ್ನು ಬೇಕಾದರು ನೀವು ಖರೀದಿ ಮಾಡಬಹುದು ಆದ್ರೆ ಕೆಲವೊಂದು ನಿಯಮಗಳನ್ನು ಕೂಡ ನಾವು ಕಾರನ್ನು ಖರೀದಿ ಮಾಡುವ ಸಂದರ್ಭದಲ್ಲಿ ಪಾಲಿಸಲೇ ಬೇಕು. ಇದು ಅತ್ಯಂತ ಪ್ರಮುಖವಾಗಿರುತ್ತದೆ. ಈಗಾಗಲೇ ನಿಮಗೆ ತಿಳಿದಿರಬಹುದು RC ನಲ್ಲಿ ಯಾವ ರೀತಿಯಲ್ಲಿ ಕಾರಿನ ವಿವರಗಳು ದಾಖಲೆ ಆಗಿರುತ್ತವೆ ಅದೇ ರೀತಿಯಲ್ಲಿ ಕಾರು ಇರಬೇಕು ಯಾವುದೇ ರೀತಿಯ ಬದಲಾವಣೆ ಅಥವಾ ಮಾಡಿಫಿಕೇಶನ್ ಮಾಡುವ ಹಾಗಿರುವುದಿಲ್ಲ ಅನ್ನೋದನ್ನ ಕೂಡ ವಾಹನ ಇಲಾಖೆ ಹೇಳುತ್ತದೆ. ಇಷ್ಟೆಲ್ಲ ಹೇಳಿದ್ರು ಕೂಡ ಕೆಲವರು ತಮ್ಮ ಶೋಕಿಗಾಗಿ ಮಾಡಿಫಿಕೇಶನ್ ಮಾಡುವಂತಹ ಕೆಲಸವನ್ನು ಮಾಡುತ್ತಾರೆ.
ಈ ಕಲರ್ ಕಾರನ್ನು ಖರೀದಿಸುವ ಹಾಗಿಲ್ಲ
ನಿಮಗಡೆ ಬೇಕಿರುವ ಬಣ್ಣದಲ್ಲಿ ಇರುವಂತಹ ಕಾರನ್ನು ಖರೀದಿ ಮಾಡುವಂತಹ ಆಸಕ್ತಿಯನ್ನು ಪ್ರತಿಯೊಬ್ಬರಿಗೂ ಕೂಡ ಇರುತ್ತದೆ ನಿಯಮಗಳ ಪ್ರಕಾರ ಅದರಲ್ಲಿ ಕೂಡ ಕೆಲವೊಮ್ಮೆ ಪ್ರತಿಬಂಧಗಳನ್ನು ನೀವು ಎದುರಿಸಬೇಕಾಗಿರುತ್ತದೆ ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೌದು ಮೋಟಾರ್ ವೆಹಿಕಲ್ ಅಟ್ ನಿಯಮಗಳ ಪ್ರಕಾರವಾಗಿ ನೀವು ಈ ಬಣ್ಣದ ಕಾರಗಳನ್ನು ಖರೀದಿ ಮಾಡುವಂತಿಲ್ಲ. ಹೌದು ಇದಕ್ಕೆ ಮೋಟಾರ್ ವೆಹಿಕಲ್ ಆಟ್ ನಲ್ಲಿ ಪ್ರತ್ಯೇಕವಾದ ನಿಯಮವನ್ನ ಮಾಡಲಾಗಿದ್ದು ಈ ಬಣ್ಣದ ಕಾರನ್ನು ಖರೀದಿ ಮಾಡಿದ್ರೆ ನಿಮ್ಮ ಕಾರನ್ನು ಕಬ್ಜಾ ಮಾಡಿಕೊಳ್ಳುವಂತಹ ಅವಕಾಶ ಕೂಡ ಸಾರಿಗೆ ಇಲಾಖೆಗೆ ಇದೆ.
ಮೋಟಾರ್ ವೆಹಿಕಲ್ ಅಟ್ 121ರ ಪ್ರಕಾರ Olive Green ಬಣ್ಣದ ಕಾರನ್ನು ಹಾಗೂ ವಾಹನವನ್ನು ಯಾವುದೇ ಕಾರಣಕ್ಕೂ ಕೂಡ ವೈಯಕ್ತಿಕ ಬಳಕೆಗಾಗಿ ಯಾರು ಸಹ ಪಡೆದುಕೊಳ್ಳುವ ಹಾಗಿಲ್ಲ ಎನ್ನುವುದಾಗಿ ಘೋಷಣೆಯನ್ನು ಮಾಡಲಾಗಿದೆ.
ಆಧಾರ್ ಬಳಕೆದಾರರೇ ಹುಷಾರ್.!! ಈ ದಾಖಲೆ ತಪ್ಪಾಗಿದ್ರೆ ಬೀಳುತ್ತೆ ಭಾರೀ ದಂಡ
ಕಂಪನಿಗಳಿಗೆ ಕೂಡ ಈ ರೀತಿಯ ಬಣ್ಣದ ಕಾರುಗಳನ್ನು ಮಾರಾಟ ಮಾಡುವುದಕ್ಕೆ ಪ್ರತಿಬಂಧವನ್ನು ವಿಧಿಸಲಾಗಿದೆ.
ಈ ರೀತಿಯ ಕಲರ್ನ ಕಾರನ್ನು ನಿರ್ಮಾಣ ಮಾಡಿರುವುದಕ್ಕಾಗಿ ಈಗಾಗಲೇ ಸಾಕಷ್ಟು ಕಾರ್ ಕಂಪನಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು ಅದು ಸಾಬೀತಾದರೆ ಆ ರೀತಿಯ ಕಾರನ್ನು ಹೊಂದಿರುವವರು ಪ್ರತಿಯೊಬ್ಬರು ತಮ್ಮ ಕಾರುಗಳನ್ನು ಹಿಂದಿರುಗಿಸಬೇಕಾಗುತ್ತದೆ. ಪ್ರಮುಖವಾಗಿ ಈ ನಿಯಮಗಳನ್ನು ಜಾರಿಗೆ ತಂದಿರೋದು ಈ ಕಲರ್ ನ ವಾಹನವನ್ನು ಹೊಂದಿರುವಂತಹ ಅವಕಾಶವನ್ನು ಹೊಂದಿರುವ ಏಕೈಕ ಸಂಸ್ಥೆ ಎಂದರೇ ಅದು ನಮ್ಮ ಆರ್ಮಿಯ ವಾಹನಗಳು ಮಾತ್ರ. ಸೈನ್ಯದ ವಾಹನಗಳ ಮೇಲೆ ಮಾತ್ರ ಈ ಕಲರ್ ನ ಬಳಕೆಯನ್ನು ಮಾಡಬಹುದಾಗಿದೆ. ಬೇರೆ ಯಾವುದೇ ವಾಹನಗಳ ಮೇಲೆ ಈ ರೀತಿಯಾದ ಬಣ್ಣವನ್ನು ಬಳಕೆ ಮಾಡುವಂತಹ ಅವಕಾಶವನ್ನು ವಾಹನ ಇಲಾಖೆಯು ನೀಡಿಲ್ಲ
ಇತರೆ ವಿಷಯಗಳು:
ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.