ಹಲೋ ಸ್ನೇಹಿತರೇ, ತಿಂಗಳಿಗೆ 50 ಸಾವಿರದಿಂದ 60,000 ಸಂಪಾದನೆ ಮಾಡುವಂತಹ ಅವಕಾಶ ಸಿಕ್ಕರೆ ಯಾರು ತಾನೆ ಬಿಡ್ತಾರೆ ಹೇಳಿ. ಒಂದು ವೇಳೆ ನಿಮ್ಮ ಬಳಿ 500 ಸ್ಕ್ವೇರ್ ಫೀಟ್ ಜಾಗ ಖಾಲಿಯಾಗಿ ಇದ್ದರೆ, ನೀವು ಈಗ ಹೇಳುವಂತಹ ವಿಧಾನವನ್ನು ಫಾಲೋ ಮಾಡಬಹುದಾಗಿದೆ ಮತ್ತು ಆರಂಭದಲ್ಲಿ ನೀವು ಕೆಲವೊಂದು ಡಾಕ್ಯೂಮೆಂಟ್ ಮತ್ತು ಪೇಪರ್ ವರ್ಕ್ ಗಳನ್ನು ಮಾಡಬೇಕಾಗಿರುತ್ತದೆ ಅನಂತರ ಯಾವುದೇ ರೀತಿಯ ಕೆಲಸ ಮಾಡಬೇಕಾದ ಅಗತ್ಯ ಇರುವುದಿಲ್ಲ. ಹೀಗಾಗಿ ಮೊದಲಿಗೆ ನೀವು ಮೊಬೈಲ್ ಟವರ್ ಕಂಪನಿಯ ಜೊತೆಗೆ ಮಾತನಾಡಿ ಖಾಲಿ ಜಾಗದಲ್ಲಿ ಟವರ್ ಅನ್ನು ಇರಿಸಬೇಕು. ಅಲ್ಲಿ ಟವರ್ ಇರಿಸುವುದಕ್ಕಾಗಿ ಕಂಪನಿ ನಿಮಗೆ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ನೀಡುತ್ತದೆ.
ಖಾಲಿ ಚಾವಣಿಯ ಮೇಲೆ ಮೊಬೈಲ್ ಟವರ್ ಅನ್ನು ಇಡುವುದಕ್ಕಾಗಿ 500 ಸ್ಕ್ವೇರ್ ಫೀಟ್ ಜಾಗ ಬೇಕಾಗಿರುತ್ತದೆ ಆದರೆ ಖಾಲಿ ಕೆಳಗಿನ ಜಾಗದಲ್ಲಿ 2000 ರಿಂದ 2500 ಸ್ಕ್ವೇರ್ ಫೀಟ್ ಬೇಕಾಗುವುದು ಕೂಡ ಅದು ಗ್ರಾಮೀಣ ಭಾಗದಲ್ಲಿ ಇದೆಯೋ ಅಥವಾ ನಗರ ಭಾಗದಲ್ಲಿ ಇದೆಯೋ ಅನ್ನೋದು ಕೂಡ ಪ್ರಮುಖವಾಗಿರುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ಆಸ್ಪತ್ರೆಯಿಂದ 100 ಮೀಟರ್ ಗಳಷ್ಟು ದೂರ ಇರಬೇಕು ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಹಾಗೂ ಅದು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವಂತಹ ಪ್ರದೇಶ ಆಗಿರಬಾರದು ಎಂಬುದನ್ನು ಕೂಡ ನೀವು ಗಮನಿಸಬೇಕಾಗಿರುತ್ತದೆ. ಯಾಕೆಂದರೆ ಮೊಬೈಲ್ ಟವರ್ ನಿಂದ ಹೊರಬರುವಂತಹ ರೇಡಿಯೇಷನ್ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ.
ಟವರ್ ಹಾಕೋದು ಹೇಗೆ?
ಯಾವುದೇ ಕಂಪನಿಯು ಸಹ ಟವರ್ ಹಾಕೋದಕ್ಕೆ ಜನರ ಮನೆಗೆ ಬರೋದಿಲ್ಲ ಬದಲಿಗೆ ನಾವೇ ಕಂಪನಿಗೆ ಹೋಗಿ ಕಾಂಟಾಕ್ಟ್ ಅನ್ನು ಮಾಡಬೇಕಾಗಿರುತ್ತದೆ. ನಿಮ್ಮ ಮನೆಯ ಮೇಲಿರುವ ಚಾವಣಿಯನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ಅನಂತರ ಅವರೇ ನಿಮ್ಮ ಮನೆಯ ಮೇಲೆ ಟವರ್ ಅನ್ನು ಹಾಕಬಹುದು ಇಲ್ಲವೋ ಎನ್ನುವುದನ್ನ ನಿಮ್ಗೆ ಹೇಳುತ್ತಾರೆ. ಎಲ್ಲ ಸರಿಯಾದ ಮೇಲೆ ಅಗ್ರಿಮೆಂಟ್ ಮಾಡಿಸಿ ಅಗ್ರಿಮೆಂಟ್ ಪ್ರಕಾರವಾಗಿ ನಿಮಗೆ ಪ್ರತಿ ತಿಂಗಳು ಹಣವನ್ನು ನೀಡುತ್ತದೆ..
ನಂಬರ್ ಪ್ಲೇಟ್ ಹಾಕಿಸದವರಿಗೆ ಗುಡ್ ನ್ಯೂಸ್.!! ಈ ದಾಖಲೆ ತೊರಿಸದರೆ ಸಿಗುತ್ತೆ ರಿಯಾಯಿತಿ
ಆದಾಯ ಎಷ್ಟು ಬರುತ್ತೆ?
ನಿಮ್ಗೆ ಎಷ್ಟು ಹಣ ಸಿಗುತ್ತೆ ಅನ್ನೋದಕ್ಕೆ ಟವರ್ ನ್ನು ಎಲ್ಲಿ ಹಾಕ್ತಾರೆ ಮತ್ತು ಯಾವ ಕಂಪನಿ ನಿಮ್ಮ ಜಾಗದಲ್ಲಿ ಟವರ್ ಅನ್ನು ಹಾಕುತ್ತಿದೆ ಅನ್ನೋದರ ಮೇಲೆ ನಿರ್ಧಾರವಾಗಿರುತ್ತದೆ. ಹಾಗೂ ಈ ರೀತಿಯಾಗಿ ಟವರ್ ಹಾಕಿಸುವುದಕ್ಕೆ ಕಂಪನಿಗಳು ತಿಂಗಳಿಗೆ 10,000 ಗಳಿಂದ ಪ್ರಾರಂಭಿಸಿ ಪ್ರತಿ ತಿಂಗಳಿಗೆ 60 ಸಾವಿರ ರೂಪಾಯಿಗಳವರೆಗೆ ಕೂಡ ಹಣವನ್ನು ನೀಡುತ್ತಾರೆ.
ಟವರ್ ಹಾಕುವಂತಹ ಕಂಪನಿಗಳು
ಏರ್ಟೆಲ್ ಮತ್ತು ಅಮೆರಿಕನ್ ಟವರ್ ಕಾರ್ಪೊರೇಟಿವ್, ಬಿಎಸ್ಎನ್ಎಲ್ ಟವರ್ ಇನ್ಫ್ರಾಸ್ಟ್ರಕ್ಚರ್, ಎಸ್ ಆರ್ ಟೆಲಿಕಾಂ ಹಾಗೂ ಜಿ ಟಿ ಎಲ್ ಇನ್ಟ್ರಾಸ್ಟ್ರಕ್ಚರ್, ಎನ್ ಎಫ್ ಸಿ ಎಲ್ ಕನೆಕ್ಷನ್ ಇನ್ಫ್ರಾಸ್ಟ್ರಕ್ಚರ್, ಐಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್, ವೊಡಾಫೋನ್ ಸೇರಿದಂತೆ ಸಾಕಷ್ಟು ಕಂಪನಿಗಳು ಮೊಬೈಲ್ ಟವರ್ ಅನ್ನು ಅಳವಡಿಸುತ್ತವೆ. ಇದರ ಅಧಿಕೃತ ವೆಬ್ ಸೈಟ್ ಗೆ ಹೋಗಿ ನೀವು ಟವರ್ ಅನ್ನು ಅಳವಡಿಸುವುದರ ಬಗ್ಗೆ ಈ ರಿಕ್ವೆಸ್ಟ್ ಕಳಿಸಬಹುದಾಗಿದೆ. ಇದಕ್ಕಾಗಿಯೇ ನಗರಸಭೆಯಿಂದ NOC ಸೇರಿದಂತೆ ಸಾಕಷ್ಟು ಡಾಕ್ಯುಮೆಂಟ್ ಗಳನ್ನು ಸಹ ಸಂಬಂಧ ಪಟ್ಟಂತೆ ಒದಗಿಸಬೇಕಾಗಿರುತ್ತದೆ. ಸರಿಯಾದ ಮಾಹಿತಿಗಳನ್ನು ಪಡೆದುಕೊಂಡ ನಂತರವಷ್ಟೇ ಈ ಯೋಜನೆಗೆ ನೀವು ಚಾಲನೆ ನೀಡಬಹುದಾಗಿದೆ.
ಇತರೆ ವಿಷಯಗಳು:
ಆಧಾರ್ ಬಳಕೆದಾರರೇ ಹುಷಾರ್.!! ಈ ದಾಖಲೆ ತಪ್ಪಾಗಿದ್ರೆ ಬೀಳುತ್ತೆ ಭಾರೀ ದಂಡ