ಹಲೋ ಸ್ನೇಹಿತರೇ, ನೀವು ಸ್ವಂತ ವ್ಯಾಪಾರವನ್ನು ಉದ್ಯಮ ವನ್ನು ಆರಂಭ ಮಾಡಲು ಅಥವಾ ಆ ವ್ಯಾಪಾರವನ್ನು ಉತ್ತೇಜನ ಮಾಡಲು ಸರಕಾರವು ಸಹಾಯಧನ ನೀಡಲಿದೆ. ಹೌದು ರಾಜ್ಯ ಸರಕಾರವು ಶ್ರಮ ಶಕ್ತಿ ಯೋಜನೆ ಯನ್ನು ಜಾರಿಗೆ ತಂದಿದ್ದು ನೀವು ಕೂಡ ಸಹಾಯ ಪಡೆಯಬಹುದು. ಈ ಯೋಜನೆ ಮೂಲಕ ನಿಮಗೆ ಸಬ್ಸಿಡಿ ಹಣ ಕೂಡ ದೊರೆಕಲಿದೆ.
ಯಾರಿಗೆ ಈ ಯೋಜನೆ?
ಈ ಶ್ರಮ ಶಕ್ತಿ ಯೋಜನೆ ಯನ್ನು ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಯೋಜನೆಯಾಗಿದ್ದು ರಾಜ್ಯ ಸರ್ಕಾರವು ಈ ಯೋಜನೆ ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಸಿಗಲಿದ್ದು ಅರ್ಧದಷ್ಟು ಹಣವನ್ನು ಸರಕಾರ ಮಾರುಪಾವತಿ ಮಾಡಲಿದೆ. ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನರು, ಬೌದ್ಧರು ಹಾಗೂ ಸಿಖ್ಖರು, ಪಾರ್ಸಿ ಜನಾಂಗದವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಸಾಲ ಸೌಲಭ್ಯ:
ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ನೀವು 50 ಸಾವಿರ ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರೆ, ನಿಮಗೆ 25ರಷ್ಟು ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಇನ್ನು ಬಾಕಿಯಾಗಿ ಉಳಿದಂತಹ 25,000 ರೂ. ಹಣವನ್ನು ಮಾತ್ರ ಪಾವತಿ ಮಾಡಬೇಕು.
ಪೋಸ್ಟ್ ಆಫೀಸ್ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್ ಸೆಟಲ್
ಬೇಕಾಗುವ ದಾಖಲೆಗಳೇನು:
- ನಿಮ್ಮ ಆಧಾರ್ ಕಾರ್ಡ್
- ವಯಸ್ಸಿನ ಪ್ರಮಾಣ ಪತ್ರ
- ಖಾಯಂ ವಿಳಾಸದ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರ
- ಜಾತಿ ಪ್ರಮಾಣ ಪತ್ರ ಇತ್ಯಾದಿ.
ಅರ್ಹತೆ ಏನು?
ಕರ್ನಾಟಕ ರಾಜ್ಯದಲ್ಲಿ ಖಾಯಂ ಆಗಿ ನಿವಾಸಿಯಾಗಿದ್ರೆ ಅರ್ಜಿ ಹಾಕಬಹುದು.ಇನ್ನು ಅರ್ಜಿ ಸಲ್ಲಿಕೆ ಮಾಡುವವರು ಅಲ್ಪಸಂಖ್ಯಾತ ಸಮುದಾಯದವಾಗಿರಬೇಕು. ಇನ್ನು 18 ರಿಂದ 55 ವರ್ಷ ದೊಳಗಿನ ವಯೋಮಿತಿ ಹೊಂದಿದ್ದವರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆ ಇದ್ದರೆ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಸಿ:
https://kmdconline.karnataka.gov.in ಇಲ್ಲಿ ಅರ್ಜಿ ಸಲ್ಲಿಸಬಹುದು.ಇಲ್ಲದಿದ್ದಲ್ಲಿ KMDC ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆ ಮಾಡಬಹುದಾಗಿದೆ.
ಇತರೆ ವಿಷಯಗಳು:
ವಾಹನ ಸವಾರರಿಗೆ ಹೊಸ ಸಿಸ್ಟಂ! ಇನ್ಮುಂದೆ ಟೋಲ್ ಪ್ಲಾಜಾ ಇಲ್ಲ, ಫಾಸ್ಟ್ಯಾಗ್ ಇಲ್ಲ?
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.!! ಇಂದಿನ ಬೆಲೆ ಏಷ್ಟು ಗೊತ್ತಾ??