ಹಲೋ ಸ್ನೇಹಿತರೇ, ನಮ್ಮ ಮನೆಯಲ್ಲಿ ಚಿನ್ನ ಅಥವಾ ಬೆಲೆಬಾಳುವ ವಸ್ತು ಹಾಗೂ ಆಭರಣಗಳು ಸಂಗ್ರಹವಾದ್ರೆ ಅದು ಕಳ್ಳತನ ಆಗಬಹುದು ಎಂಬ ಭಯ ನಿಮ್ಮಲ್ಲಿ ಸದಾ ಇದ್ದೇ ಇರಲಿದೆ. ಹಾಗೆಂದು ಮನೆಯಲ್ಲಿ ಎಷ್ಟು ನಾವು ಸುರಕ್ಷಿತವಾಗಿ ಇಡುತ್ತೇವೆ ಎಂದು ಹೇಳಿದರೂ ಚಿನ್ನ ಎಲ್ಲಿ ಕಳ್ಳತನ ಆಗಬಹುದು ಎಂಬ ಭಯ ಅಂತೂ ಸದಾ ಇರಿತ್ತದೆ ಹಾಗಾಗಿ ಸುರಕ್ಷಿತವಾಗಿ ನಮ್ಮ ಸ್ವತ್ತು ಜೋಪಾನವಾಗಿಸುವ ನೆಲೆಯಲ್ಲಿ ಬ್ಯಾಂಕ್ ಲಾಕರ್ ಗಳು ಸಹಕಾರಿ ಆಗಿದ್ದು ಈ ಬಗ್ಗೆ ಕೆಲವು ಮಹತ್ವ ಪೂರ್ಣ ಉಪಯುಕ್ತ ಮಾಹಿತಿ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ.
ಹಣ ಕಟ್ಟಬೇಕು?
ಬ್ಯಾಂಕ್ ಲಾಕರ್ ನಲ್ಲಿ ನಾವು ಚಿನ್ನ ಇತರೆ ಬೆಲೆ ಬಾಳುವ ವಸ್ತುಗಳನ್ನು ನೀಡುವ ಮುನ್ನ ಅದನ್ನು ಸಿಬ್ಬಂದಿ ಪರಿಶೀಲನೆ ಮಾಡಿ ಲಾಕರ್ ಚಾರ್ಜ್ ವಿಧಿಸಲಿದ್ದಾರೆ. ಆ ಪ್ರಕಾರ ಲಾಕರ್ ಗೆ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ವಿಧವಾಗಿ ಚಾರ್ಜ್ ಮಾಡಲಾಗುವುದು. ಅದೇ ರೀತಿ ಲಾಕರ್ ಗೆ ಮೊತ್ತವು ಬ್ಯಾಂಕ್ ನಿಂದ ಡಿಡಕ್ಟ್ ಆಗಲಿದ್ದು ಅದನ್ನು ನೀವು ಪ್ರತ್ಯೇಕವಾಗಿ ಸಹ ಪಾವತಿ ಮಾಡಬಹುದು. ಹಾಗಿದ್ದರೂ ಕೆಲವರು ಲಾಕರ್ ಬಳಕೆ ಉತ್ತಮ ಅಲ್ಲ ಎಂದು ಸಹ ಹೇಳುತ್ತಿದ್ದು ಯಾಕೆ ಉತ್ತಮ ಅಲ್ಲ ಎಂಬುದನ್ನು ತಿಳಿಸಲಿದ್ದೇವೆ.
ಉಪಯುಕ್ತ ಹೇಗೆ?
ಲಾಕರ್ ಬಳಕೆ ನಾವು ಮಾಡಿದಾಗ ನಮ್ಮ ಸ್ಚತ್ತು ಬ್ಯಾಂಕ್ ಅಥವಾ ಸ್ವಸಹಾಯ ಸಂಘದಲ್ಲಿ ಸುರಕ್ಷಿತವಾಗಿ ಕಾಯಲ್ಪಡಲಿದೆ. ಅದರ ಜೊತೆಗೆ ನಿಮ್ಮ ಚಿನ್ನವು ಒಂದು ವೇಳೆ ಕಳ್ಳತನ ಆದರೆ ಅದಕ್ಕೆ ಬ್ಯಾಂಕ್ ನೇರ ಹೊಣೆ ಆಗಲಿದೆ ಹಾಗಾಗಿ ನಿಮಗೆ ಚಿನ್ನದ ಮೊತ್ತ ಕೂಡ ಸಿಗುತ್ತದೆ ಎನ್ನಬಹುದು. ಅದೆ ರೀತಿ ಬೆಂಕಿ ಇತರ ಅಪಘಾತ ಆಗಿದ್ದಾಗಲು ಚಿನ್ನದ ಮೊತ್ತವನ್ನು ಬ್ಯಾಂಕ್ ವಾಪಾಸ್ಸು ನೀಡುವ ಕಾರಣ ನಿಮ್ಮ ಚಿನ್ನ ಯಾವಾಗಲೂ ಸುರಕ್ಷಿತವಾಗಿ ಇರುತ್ತದೆ ಎನ್ನಬಹುದು.
ಆಭರಣ ಖರೀದಿಗೆ ಶುಭ ಘಳಿಗೆ.!! ಕೊಂಚ ಇಳಿಕೆ ಕಂಡ ಬಂಗಾರ
ನಿಯಮ ಜಾರಿ:
ಹಿಂದಿಗಿಂತ ಲಾಕರ್ ಸಿಸ್ಟಂ ಜಾರಿಗೆ ತರಲು ಇತ್ತೀಚೆಗಷ್ಟೇ ಕೆಲವು ನಿಯಮಗಳನ್ನು ಬದಲಾವಣೆ ಕಡ್ಡಾಯ ಮಾಡಲಾಗಿದೆ. ಹಿಂದೆಲ್ಲ ಗ್ರಾಹಕರು ಯಾವ ವಸ್ತು ಬ್ಯಾಂಕ್ ಲಾಕರ್ ನಲ್ಲಿ ಇಡುತ್ತಿದ್ದರು ಎಂಬ ಪೂರ್ತಿ ಮಾಹಿತಿ ಬ್ಯಾಂಕ್ ಗೆ ಲಭ್ಯ ಆಗುತ್ತಿರಲಿಲ್ಲ ಆದರೆ ಈಗ ನಿಯಮ ಬದಲಾಗಿ ಗ್ರಾಹಕರು ಇಡುತ್ತಿದ್ದ ವಿಷಯ ವಸ್ತುಗಳ ಬಗ್ಗೆ ಬ್ಯಾಂಕಿಗೆ ಕಡ್ಡಾಯವಾಗಿ ಮಾಹಿತಿ ನೀಡಲೇ ಬೇಕು ಎಂಬ ನಿಯಮ ಜಾರಿಗೆ ಬಂದಿದೆ.
ನಿಮಗೆ ಲಾಸ್ ಆಗುವ ಸಾಧ್ಯತೆ ಇದೆ:
ನೀವು ಬ್ಯಾಂಕ್ ಲಾಕರ್ ಗಳಲ್ಲಿ ಚಿನ್ನ ಇಟ್ಟಂತಹ ಸಂದರ್ಭದಲ್ಲಿ ನಿಮ್ಮ ಚಿನ್ನವನ್ನು ಕಳೆದು ಹೋದ್ರೆ ಬ್ಯಾಂಕ್ ಅದರ ಪರಿಹಾರವನ್ನು ಮೊತ್ತ ನೀಡುವುದು ನಿಜವಾದರೂ ಸಹ ನಿಮಗೆ ಲಾಸ್ ಆಗುವ ಸಾಧ್ಯತೆ ಇದೆ. ನಿಮಗೆ ಬ್ಯಾಂಕ್ ನಿಂದ 100 ಪಟ್ಟು ಪರಿಹಾರ ಧನವನ್ನು ಸಿಗುವುದಾದರೂ ಸಹ ನೀವು ಬ್ಯಾಂಕ್ ಲಾಕರ್ ಗೆ ಎಷ್ಟು ಪೇ ಮಾಡಿದ್ದೀರಿ ಅದ್ರೆ ಮೇಲೆ 100% ನೀಡಲಾಗುತ್ತೆ ಅಂದ್ರೆ ನೀವು ಲಾಕರ್ ಗಾಗಿ 3000 ಪೇ ಮಾಡಿದರೆ 3ಲಕ್ಷದ ತನಕ ಪರಿಹಾರ ಸಿಗುತ್ತೆ ಆದರೆ ನಿಮ್ಮ ಚಿನ್ನ ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಲಾಸ್ ಆಗುತ್ತದೆ ಹಾಗಾಗಿಯೇ ಲಾಕರ್ ನಲ್ಲಿ ಚಿನ್ನ ಇಟ್ಟರು ನಷ್ಟ ಆಗುವ ಸಾಧ್ಯತೆ ಇದೆ. ಭೂಕಂಪ , ಸುನಾಮಿ ಆಗಿ ಬ್ಯಾಂಕ್ ಹಾನಿಯಾದರೆ ಅದಕ್ಕೆ ಬ್ಯಾಂಕ್ ಪರಿಹಾರ ಮೊತ್ತ ನೀಡಲಾರದು. ಹಾಗಾಗಿಯೇ ಲಾಕರ್ ಓಪನ್ ಮಾಡುವ ಮುನ್ನ ಈ ಎಲ್ಲ ವಿಚಾರ ಕೂಡ ಪರಿಶೀಲಿಸಿ.
ಇತರೆ ವಿಷಯಗಳು:
ಪೋಸ್ಟ್ ಆಫೀಸ್ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್ ಸೆಟಲ್
ಮಹಿಳೆಯರಿಗೆ ಭರ್ಜರಿ ಸುದ್ದಿ.!! ಈ ಸ್ಕೀಮ್ ನಿಂದ ನಿಮ್ಮದಾಗಲಿದೆ 50 ಸಾವಿರ ರೂ.