ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತೆ ತರಕಾರಿ ತರದ ದಿನೇ ದಿನೇ ಹೆಚ್ಚಳವಾಗುತ್ತಿದೆ.
ಬಿಸಿಲು, ಮುಂಗಾರು ಪೂರ್ವ ಮಳೆಯು ಪರಿಣಾಮ ಸಗಟು ಮಾರುಕಟ್ಟೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೀರ್ಘಾವಧಿಗೆ ತರಕಾರಿ ಬೆಲೆ ಹೆಚ್ಚಳವಾಗಿರುವುದು ದಿನ ಬಳಕೆಯ ಮಾತ್ರವಲ್ಲದೆ, ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಖರ್ಚು ವೆಚ್ಚಗಳನ್ನು ಹೆಚ್ಚಳವನ್ನು ಮಾಡಲಾಗಿದೆ. ಹೋಟೆಲ್, ಕೇಟರಿಂಗ್ ಗಳ ಮೇಲೆಯೂ ತರಕಾರಿಯ ಬೆಲೆ ಹೆಚ್ಚಳದ ಪರಿಣಾಮ ಬೀರಿದೆ.
ಬೀನ್ಸ್ ಬೆಲೆ Kg ಗೆ 250 ರೂ., ಕ್ಯಾರೆಟ್ ಬೆಲೆ 100 ರೂ., ಕ್ಯಾಪ್ಸಿಕಂ ದರ 90 ರೂ.,
ಮೊಬೈಲ್ ಬಳಕೆದಾರರೇ ಎಚ್ಚರಿಕೆ: ಈ ರೀತಿಯ ಸಂದೇಶ ಬಂದ್ರೆ ಹೀಗೆ ಮಾಡಿ
ಬದನೆಕಾಯಿ ಬೆಲೆ 85 ರೂ. ವರೆಗೆ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಗಳಾದ KR ಮಾರುಕಟ್ಟೆ, ಯಶವಂತಪುರ, ಬಿನ್ನಿ ಮಿಲ್, ಕಲಾಸಿಪಾಳ್ಯ ಮೊದಲಾದ ತರಕಾರಿಗಳ ಮಾರುಕಟ್ಟೆಗಳಿಗೆ ಬರುವ ತರಕಾರಿಗಳ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ತರಕಾರಿಗಳು ಹಾನಿಯಾಗಿದ್ದು, ತರಕಾರಿಯ ದರ ಏರಿಕೆ ಮುಂದುವರೆದಿದೆ.
ಇತರೆ ವಿಷಯಗಳು:
ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.