ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆ ಹಣ ಖಾತೆಗೆ ಬರದಿರುವ ಇರುವ ಮಹಿಳೆಯರಿಗೆ ಮತ್ತೊಂದು ಅಪ್ ಡೇಟ್ ನೀಡಲಾಗಿದೆ. ಯಜಮಾನಿಯರಿಗೆ ಹಣ ಬರದಿರುವ ಈ ಸಮಸ್ಯೆ ನಿವಾರಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಬಿಡುಗಡೆ ಮಾಡಲಾಗಿದೆ, ಗೃಹ ಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡ ಕೆಲ ಮಹಿಳೆಯರಿಗೆ ಹಣ ಬಾರದೇ ಇರುವ ಬಗ್ಗೆ ದೂರುಗಳು ಬರುತ್ತಿವೆ. ಇದರ ಸಲುವಾಗಿ ಸರ್ಕಾರ ಸೂಚನೆ ನೀಡಿದೆ.
ಈ ಸಮಸ್ಯೆ ನಿವಾರಣೆಗಾಗಿ ಯಜಮಾನಿಯರು ಕೆಲ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಂತೆ ತಿಳಿಸಿದೆ. ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ₹2000 ಹಣ ಪಡೆಯದ ಯಜಮಾನಿ ಮಹಿಳೆಯರು, ತಪ್ಪದೇ ಕೆವೈಸಿ ಮಾಡಿಸುವಂತೆ ತಿಳಿಸಿದೆ. ಅಲ್ಲದೇ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರ ಕೆವೈಸಿ ಅಪ್ ಡೇಟ್ ಆಗಿರಬೇಕು ಎಂದು ತಿಳಿಸಿದೆ.
ಇದನ್ನು ಓದಿ: ಯಜಮಾನಿಯರೇ ಇತ್ತ ಕಡೆ ಗಮನಕೊಡಿ.!! ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ
ಇನ್ನೂ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರು ಬ್ಯಾಂಕ್ ಗಳಿಗೆ ಹೋಗಿ ತಮ್ಮ ಆಧಾರ್ ಸಂಖ್ಯೆ ನೀಡಿ, ಕೈವೈಸಿ ಅಪ್ಡೇಟ್ ಮಾಡಿಸಬೇಕು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು NPCI ಕಡ್ಡಾಯವಾಗಿ ಮಾಡಿಸಬೇಕು. ಬ್ಯಾಂಕ್ ಖಾತೆಯಲ್ಲಿನ ಹೆಸರು, ಆಧಾರ್ ಕಾರ್ಡ್ ನಲ್ಲಿನ ಹೆಸರು ಒಂದೇ ಇದೆಯಾ ಅಂತ ಚೆಕ್ ಮಾಡಿ. ತಪ್ಪಿದ್ದರೇ ಸರಿ ಪಡಿಸಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ.
ಈ ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದಂತ ಯಜಮಾನಿ ಮಹಿಳೆಯರು ಸರಿಪಡಿಸಿಕೊಳ್ಳಬೇಕಾಗಿ ತಿಳಿಸಲಾಗಿದೆ, ಈ ಎಲ್ಲಾ ಸಮಸ್ಯೆ ನಿವಾರಿಸಿಕೊಂಡರೆ ಪ್ರತಿ ತಿಂಗಳು ರೂ.2000 ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಅಂತ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಇತರೆ ವಿಷಯಗಳು:
ಈ ಯೋಜನೆಯಡಿ ಒಂದು ಅರ್ಜಿ ಭರ್ತಿ ಮಾಡುವ ಮೂಲಕ ಸಿಗತ್ತೆ ₹15000!
ಒಂದೇ ಮೊಬೈಲ್ ಸಂಖ್ಯೆಗೆ ಎಷ್ಟು ಆಧಾರ್ ಲಿಂಕ್ ಮಾಡಬಹುದು ಇಲ್ಲಿದೆ ಹೊಸ ಅಪ್ಡೇಟ್!