ಮದ್ಯ ಪ್ರಿಯರಿಗೆ ಬ್ಯಾಡ್ ನ್ಯೂಸ್.!! ದುಬಾರಿಯಾಗಲಿದೆ ಬಡವರ ಬ್ರಾಂಡ್

ಹಲೋ ಸ್ನೇಹಿತರೇ, ರಾಜ್ಯದ ಬೊಕ್ಕಸ ತುಂಬಿಸುವ ಅತಿದೊಡ್ಡ ಇಲಾಖೆಯಾಗಿರುವ ಅಬಕಾರಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾಲ್ಕೈದು ಬಾರಿ ಬಡವರ ಬ್ರಾಂಡ್ ಪರಿಷ್ಕರಣೆ ಮಾಡಿ ಜನರ ಜೇಬಿಗೆ, ಹೊಟ್ಟೆಗೆ ಬಿಸಿ ಮುಟ್ಟಿಸಿದೆ. ಆದ್ರೆ ಈ ಬಾರಿ ಮಾತ್ರ ಕ್ಲಾಸ್ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದರಿಂದ ಬಡವರ್ಗದ ಮದ್ಯಪ್ರಿಯರಿಗೆ ಮತ್ತೆ ಬ್ಯಾಡ್ ನ್ಯೂಸ್ ಅನ್ನು ಸಹ ನೀಡಲು ಮುಂದಾಗುತ್ತಿದೆ.

alcohol brands price hike

ಸದ್ಯದಲ್ಲೇ ರಾಜ್ಯದ ಮದ್ಯ ಪ್ರಿಯರಿಗೆ ಶುಭ ಸದ್ದಿಯನ್ನು ಹಾಗೂ ಕಹಿ ಸುದ್ದಿಯನ್ನು ಎರಡೂ ಸಿಗಲಿವೆ. ಹೈಫೈ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಅನ್ನು ಸಾಮಾನ್ಯ ಮದ್ಯಗಳ ಪ್ರಿಯರಿಗೆ ಬ್ಯಾಡ್ ನ್ಯೂಸ್ ನೀಡಲಿದೆ ಅಬಕಾರಿ ಇಲಾಖೆ. ಸ್ಕಾಚ್​​​ಗಳ ಬೆಲೆಯಲ್ಲಿ ಭಾರಿ ಇಳಿಕೆ‌ಯನ್ನು ಮಾಡಲು ರಾಜ್ಯ ಅಬಕಾರಿ ಇಲಾಖೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಆಗಸ್ಟ್ ಒಂದರಿಂದಲೇ ಪ್ರೀಮಿಯಂ ಮದ್ಯದ ದರವನ್ನು ಕಡಿಮೆ ಮತ್ತು ಮಧ್ಯಮ ವರ್ಗದವರು ಕುಡಿಯುವ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಇನ್ನೂ ಅಧಿಕೃತ ಆದೇಶ ಆಗಿಲ್ಲ. ಈ ವಾರ ಅಥವಾ ಮುಂದಿನ ವಾರದಲ್ಲಿ ಹೊಸ ದರ ಏರಿಕೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರಣಕ್ಕಾಗಿಯೇ ಮದ್ಯ ಮಾರಾಟಗಾರರು ದುಬಾರಿ ಬೆಲೆಯ ಮದ್ಯವನ್ನು ಖರೀದಿಯನ್ನು ಮಾಡುತ್ತಿಲ್ಲ. ಒಂದು ವೇಳೆ ಸರ್ಕಾರದ ಸ್ಕಾಚ್​​ಗಳ ಬೆಲೆಯನ್ನು ಏಕಾಏಕಿ ಕಡಿಮೆ ಮಾಡಿದರೆ ಮಾಲೀಕರಿಗೆ ನಷ್ಟ ಆಗಲಿದೆ ಎಂದು ಯಾರೂ ಖರೀದಿಸಲು ಮುಂದಾಗುತ್ತಿಲ್ಲ ಎಂದು ಬಾರ್ ಮಾಲೀಕ ರಾಮಕೃಷ್ಣ ಎಂಬವರು ತಿಳಿಸಿದ್ದಾರೆ.

ಎಷ್ಟು ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ?

2500 ರಿಂದ 3000 ರೂ. ದರ ಇರುವಂತಹ ಫುಲ್ ಬಾಟಲ್ ಸ್ಕಾಚ್ ದರ 1500 ಇಂದ 1800 ರೂಪಾಯಿ ವರೆಗೆ ಇಳಿಕೆಯಾಗಲಿದೆ. ಬೇರೆ-ಬೇರೆ ರಾಜ್ಯದಲ್ಲಿ ಪ್ರೀಮಿಯಂ ಸ್ಕಾಚ್ ಫುಲ್ ಬಾಟಲ್ ಗೆ 1000 ರೂ.ನಿಂದ 1500 ರೂಪಾಯಿವರೆಗೆ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ದರ ದುಪ್ಪಟ್ಟು ಇರುವ ಕಾರಣ, ಸ್ಕಾಚ್​​ಗಳ ಮಾರಾಟವನ್ನು ಕಡಿಮೆ ಆಗುತ್ತಿದೆ. ಇದರಿಂದ ಶ್ರೀಮಂತ ಮದ್ಯಪ್ರಿಯರು ಅಕ್ಕಪಕ್ಕದ ರಾಜ್ಯಗಳ ಮಿಲ್ಟ್ರಿ ಕ್ಯಾಂಟೀನ್​​​ಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿಯೇ ರಾಜ್ಯ ಸರ್ಕಾರ ಪ್ರಿಮಿಯಮ್ ಮದ್ಯದ ದರವನ್ನು ಶೇ 40 ರಿಂದ 50 ರಷ್ಟು ಇಳಿಕೆಯನ್ನು ಮಾಡಲು ಮುಂದಾಗಿದೆ.

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ.!! ಮೂಲ ವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಭಾರಿ ಏರಿಕೆ

ಬೆಲೆ ಇಳಿಕೆಯಿಂದ ಒಂದು ಕ್ವಾರ್ಟರ್ ಸ್ಕಾಚ್ ಬೆಲೆಯನ್ನು 300 ರಿಂದ 350ಕ್ಕೆ ಇಳಿಕೆಯಾಗಲಿದೆ. ಆಗಲೇ ನಾರ್ಮಲ್ ಮದ್ಯ ಕುಡಿಯುವ ಮದ್ಯ ಪ್ರಿಯರು ಸ್ಕಾಚ್ ಕುಡಿಯಲು ‌ಮುಂದಾಗುತ್ತಾರೆ. ಇದರಿಂದಲೇ ಅಬಕಾರಿ ಇಲಾಖೆಯ ಬೊಕ್ಕಸ ತುಂಬುತ್ತದೆ.

ಎಷ್ಟು ದುಬಾರಿಯಾಗಲಿದೆ ಬಡವರ ಬ್ರಾಂಡ್?

ಬಡವರ ಬ್ರಾಂಡ್ ಅಂದರೆ 100 ರಿಂದ 120 ರೂಪಾಯಿ ಬೆಲೆ ಇರುವ ಮದ್ಯದ ದರವನ್ನು ಕ್ವಾರ್ಟರ್ ಗೆ 20 ರಿಂದ 30 ರೂಪಾಯಿ, ಫುಲ್ ಬಾಟಲ್ ಮೇಲೆ 100 ರಿಂದ 150 ರೂಪಾಯಿ ವರೆಗೆ ಏರಿಕೆ ಆಗಲಿದೆ. ಇದಕ್ಕೆ ಸಾಮಾನ್ಯ ಮದ್ಯ ಕುಡಿಯುವ ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿದೆ. ಮತ್ತೆ ಇದೀಗ ದರವನ್ನು ಏರಿಕೆ ಮಾಡಿದರೆ.

ಒಟ್ಟಿನಲ್ಲಿ ಸರ್ಕಾರ ಏನೋ ಹೈಫೈ ಮದ್ಯಪ್ರಿಯರು ಕುಡಿಯುವ ದರವನ್ನು ಶೇ 40 ರಿಂದ 50 ರಷ್ಟು ಇಳಿಕೆ ಮಾಡಿ ಸಿಹಿ ಸುದ್ದಿ ನೀಡಿದರೆ ಬಡ ವರ್ಗದ ಮದ್ಯಪ್ರಿಯರಿಗೆ ದರ ಏರಿಕೆ ಮಾಡಿ ಶಾಕ್ ನೀಡಲು ಮುಂದಾಗಿದೆ.

ಇತರೆ ವಿಷಯಗಳು :

ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ಹತ್ತಿರದಲ್ಲಿದೆ ಅವಧಿ!

LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಬದಲಾವಣೆ! ಗ್ರಾಹಕರಿಗೆ ಶಾಕ್‌ ಮೇಲೆ ಶಾಕ್

Leave a Reply

Your email address will not be published. Required fields are marked *