ಹಲೋ ಸ್ನೇಹಿತರೇ, ಎಣ್ಣೆ ಪ್ರೀಯರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ನೀವು ಮನೆಯಲ್ಲಿ ಕುಳಿತು ಎಣ್ಣೆ ಹೊಡೆಯುತ್ತಿದ್ದಾಗ, ಎಣ್ಣೆ ಖಾಲಿ ಆದರೆ ಏನ್ ಮಾಡಬೇಕು. ಗಾಡಿ ತೆಗೆದುಕೊಂಡರೆ ಹೋದ್ರೆ, ಪೊಲೀಸರ ಕಾಟ.. ಎಣ್ಣೆ ಹೊಡೆದು ನಡೆದು ಹೋಗಲು ಒಲ್ಲದ ಮನಸ್ಸು.. ಮತ್ತೆ ಪಾರ್ಟಿಗೆ ಕೂತುವರು ಏನು ಮಾಡಬೇಕು ಎಂದು ತಿಳಿಯದೇ ಕೈ ಕೈ ಹಿಚಿಕಿ ಕೊಳ್ಳುವ ಪರಿಸ್ಥಿತಿ, ಆದರೆ ಇನ್ನು ಈ ಸ್ಥಿತಿ ಬರಲು ಚಾನ್ಸ್ ಇಲ್ಲವೇ ಇಲ್ಲ.
ಮನೆಯಲ್ಲಿ ಕುಳಿತು ತಿಂಡಿ ಊಟ ಆರ್ಡರ್ ಮಾಡಿದಂತೆ ಇನ್ನು ಬಿಯರ್, ವೈನ್ ಸೇರಿ ಯಾವುದೇ ಮದ್ಯದ ಬಾಟಲಿಗಳನ್ನು ಸ್ವಿಗಿ ಹಾಗೂ ಜೊಮ್ಯಾಟೋದಲ್ಲಿ ಆರ್ಡರ್ ಮಾಡಬಹುದು. ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಮನೆಯ ಬಾಗಿಲಿಗೆ ಕೆಲವೇ ಕ್ಷಣಗಳಲ್ಲಿ ಲಭ್ಯ. ಇನ್ನೇನು ಕೆಲವೇ ದಿನಗಳಲ್ಲಿ ಮದ್ಯದ ಬಾಟಲ್ಗಳು ಸಹ ಹೋಮ್ ಡಿಲಿವಿರಿ ಆಗಲಿವೆ.
ಯಾವ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಚಾಲನೆ
ಈಗ ದೆಹಲಿ, ಪಂಜಾಬ್, ಹರಿಯಾಣ, ಕೇರಳ, ಕರ್ನಾಟಕ, ಗೋವಾ, ತಮಿಳುನಾಡು ರಾಜ್ಯಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಲು ಉದ್ದೇಶಿಸಲಾಗಿದೆ. ಮದ್ಯ ತಯಾರಿಕೆಯ ದೈತ್ಯ ಕಿಂಗ್ ಫಿಶರ್ ಹಾಗೂ ಎಬಿ ಇನ್ವೆಬ್ ಸೇರಿ, ಹಲವು ಕಂಪನಿಗಳು ಈ ಯೋಜನೆಯೊಂದಿಗೆ ಕೈ ಜೋಡಿಸಲು ಮುಂದೆ ಬಂದಿವೆ. ಈ ಯೋಜನೆಯಡಿಯಲ್ಲಿ ಆರಂಭದಲ್ಲಿ ಬಿಯರ್, ವೈನ್ ಹಾಗೂ ಕಡಿಮೆ ಪ್ರಮಾಣದ ಅಲ್ಕೋ ಹಾಲ್ ವಿತರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಈ ಯೋಜನೆಯನ್ನು ಆರಂಭಿಸಲು ಸರ್ಕಾರದ ಅನುಮತಿಯ ಅವಶ್ಯಕತೆ ಇದೆ. ಹೀಗಾಗಿ ಕಂಪನಿಗಳು ಕೇಂದ್ರ ಸರ್ಕಾರದ ನಿಲುವನ್ನು ಕಾಯ್ದು ನೋಡುತ್ತಿವೆ ಎಂದು ಮದ್ಯ ಉದ್ಯಮದ ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿ ಬೆಳಕಿಗೆ ಬಂದಿದೆ.
ಮೊಟ್ಟೆ ಭಾಗ್ಯ: ಇನ್ಮುಂದೆ ಶಾಲಾ ಮಕ್ಕಳಿಗೆ ವಾರದ 6 ದಿನವೂ ಸಿಗಲಿದೆ ಮೊಟ್ಟೆ!
ಈ ಪ್ರಯೋಗವನ್ನು ಇದಕ್ಕೂ ಮೊದಲು ಕೊರೊನಾ ಸಮಯದಲ್ಲಿ ಹಲವು ರಾಜ್ಯಗಳಲ್ಲಿ ಅಪ್ಲೈ ಮಾಡಲಾಗಿತ್ತು. ಲಾಕ್ಡೌನ್ ವೇಳೆ ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಢ, ಅಸ್ಸಾಂ ಮದ್ಯವನ್ನು ಮನೆಯ ಬಾಗಿಲಿಗೆ ಮಾರಟ ಮಾಡಲು ಮುಂದಾಗಿದ್ದವು, ಲಾಕ್ಡೌನ್ ಮುಕ್ತಾಯವಾಗುತ್ತಿದ್ದಂತೆ ಈ ಸೇವೆಯನ್ನು ಸ್ಥಗಿತ ಗೊಳಿಸಲಾಗಿತ್ತು. ಇನ್ನು ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಇದೇ ವ್ಯವಸ್ಥೆಯನ್ನು ಕಲ್ಪಿಸಿದಾಗ ಕೈ ಹಿಡಿದಿತ್ತು ಎಂದು ತಿಳಿದು ಬಂದದೆ.
ಮಾಧ್ಯಮ ವರದಿಗಳ ಪ್ರಕಾರ, ಕರೋನಾ ಅವಧಿಯಲ್ಲಿ ಮದ್ಯದ ಆನ್ಲೈನ್ ವಿತರಣೆ ನಡೆಯಿತು. ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರವು 4 ರಾಜ್ಯಗಳಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಿತ್ತು. ಇವುಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್ಗಢ, ಅಸ್ಸಾಂ ಸೇರಿವೆ. ಕರೋನಾ ಅವಧಿ ಮುಗಿದ ತಕ್ಷಣ, ಈ ರಾಜ್ಯಗಳಲ್ಲಿ ಹೋಮ್ ಡೆಲಿವರಿ ಸೌಲಭ್ಯವನ್ನು ಸಹ ನಿಲ್ಲಿಸಲಾಗಿದೆ. ಮತ್ತೊಂದೆಡೆ, ಮದ್ಯದ ಮನೆ ವಿತರಣೆಯು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅನೇಕ ಪ್ರಯೋಜನಗಳನ್ನು ಒದಗಿಸುತ್ತಿದೆ ಎಂದು ಕಂಡುಬಂದಿದೆ.
ಮನೆಯ ಬಾಗಿಲಿಗೆ ಮದ್ಯವನ್ನು ಮಾರಾಟ ಮಾಡಿದ್ದರಿಂದ ಆ ಸರ್ಕಾರಕ್ಕೆ ಶೇಕಡಾ 20 ರಿಂದ 30 ರಷ್ಟ ಆದಯ ಹೆಚ್ಚಾಗಿತ್ತು. 2 ರಾಜ್ಯಗಳ ಆದಾಯದಲ್ಲಿ ಹೆಚ್ಚಳವನ್ನು ಕಂಡ ಸರ್ಕಾರವು ಇತರ ರಾಜ್ಯಗಳಲ್ಲಿಯೂ ಮದ್ಯವನ್ನು ಹೋಮ್ ಡೆಲಿವರಿ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಮೊದಲು ಪ್ರಯೋಗ ನಡೆಸಿ, ಯಶಸ್ವಿಯಾದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಇತರೆ ವಿಷಯಗಳು:
ಜುಲೈ 22 ರವರೆಗೆ IMD ಭಾರೀ ಮಳೆ ಎಚ್ಚರಿಕೆ.!! ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ
ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಗುಡ್ ನ್ಯೂಸ್! ವಿಮೆ ಮೊತ್ತ 10 ಲಕ್ಷಕ್ಕೆ ಏರಿಕೆ