ಜೂನ್‌ ತಿಂಗಳು ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಯಾರು ಕೂಡ ಹಸಿವಿನಿಂದ ಸಮಸ್ಯೆ ಎದುರಿಸಬಾರದು ಎಂದು ಜಾರಿಗೆ ತಂದ ಯೋಜನೆ ಅನ್ನಭಾಗ್ಯ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ರಾಜ್ಯ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ, ಆ ಕಾರ್ಡ್ ನಲ್ಲಿರುವ ಅಷ್ಟು ಸದಸ್ಯರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವ ಭರವಸೆ ಕೊಟ್ಟಿತ್ತು.

anna bhagya dbt status check

ಆದರೆ ಅಷ್ಟು ಅಕ್ಕಿ ಹೊಂದಿಸಲು ಸಾಧ್ಯ ಆಗದ ಕಾರಣ ಒಬ್ಬರಿಗೆ 5 ಕೆಜಿ ಅಕ್ಕಿ ನೀಡಿ, ಇನ್ನು 5 ಕೆಜಿಯ ಅಕ್ಕಿ ಹಣವನ್ನು ಒಂದು ಕೆಜಿಗೆ 35 ರೂಪಾಯಿಯ ಹಾಗೆ 5 ಕೆಜಿಗೆ 170 ರೂಪಾಯಿಗಳನ್ನು ಜನರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ತಿಳಿಸಿ, ಹಲವು ತಿಂಗಳುಗಳಿಂದ ಈ ಹಣವನ್ನು ರೇಷನ್ ಕಾರ್ಡ್ ನಲ್ಲಿ ಸೂಚಿಸಿರುವ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಾ ಬರಲಾಗುತ್ತಿದೆ. ಜನರು ಸಹ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಿಂದ ಅವರಿಗೆ ಸಹಾಯ ಕೂಡ ಆಗುತ್ತಿದೆ.

ಈ ತಿಂಗಳು ಮಾತ್ರ ಅನ್ನಭಾಗ್ಯ ಯೋಜನೆಯ ಹಣ ಬರುವುದಕ್ಕೆ ಸ್ವಲ್ಪ ತಡವಾಗಿದೆ, ಅದಕ್ಕೆ ಕಾರಣ ಇತ್ತೀಚೆಗೆ ನಡೆದ ಚುನಾವಣೆ ಮತ್ತು ಅದರ ಫಲಿತಾಂಶ ಆಗಿದೆ. ಈ ಕಾರಣಕ್ಕೆ ಜೂನ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗುವುದಕ್ಕೆ ತಡ ಆಗಿತ್ತು, ಇದೀಗ ಸಿಕ್ಕಿರುವ ಮಾಹಿತಿಯ ಅನುಸಾರ ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರ ಈಗ ಬಿಡುಗಡೆ ಮಾಡಿದ್ದು, ನಿಮ್ಮ ಖಾತೆಗೆ ಬಂದಿದ್ಯಾ ಎಂದು ಈ ರೀತಿ ಚೆಕ್ ಮಾಡಿ..

ಹಣಕ್ಕಾಗಿ ಅಲ್ಲಿ ಇಲ್ಲಿ ಅಲೆಯುವ ಟೆನ್ಷನ್‌ಯೇ ಬೇಡ.!! ಈ ದಾಖಲೆ ಇದ್ರೆ ಕೂಡಲೇ ನಿಮ್ಮ ಖಾತೆಗೆ ದುಡ್ಡು

ಅನ್ನಭಾಗ್ಯ ಹಣದ DBT Status ಚೆಕ್ ಮಾಡುವ ವಿಧಾನ:

  • ಮೊದಲಿಗೆ ನೀವು ಸರ್ಕಾರದ ಈ ವೆಬ್ಸೈಟ್ ಗೆ ಭೇಟಿ ನೀಡಿ https://www.karnataka.gov.in/
  • ಇಲ್ಲಿ E Services ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅದರಲ್ಲಿ DBT ಸ್ಟೇಟಸ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
  • ಇಲ್ಲಿ ರೇಷನ್ ಕಾರ್ಡ್ ಮೂಲಕ ಸ್ಟೇಟಸ್ ತಿಳಿಯಬೇಕು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
  • ಈಗ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, Continue ಎನ್ನುವ ಆಪ್ಶನ್ ಅನ್ನು ಸೆಲೆಕ್ಟ್ ಮಾಡಿ
  • ಈಗ ನಿಮ್ಮ ಸ್ಕ್ರೀನ್ ಮೇಲೆ ಅನ್ನಭಾಗ್ಯ ಯೋಜನೆಯ ಎಷ್ಟು ಕಂತುಗಳ ಹಣ ಯಾವಾಗ ಬಂದಿದೆ ಎನ್ನುವುದನ್ನು ತೋರಿಸಲಾಗುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ತಕ್ಷಣ ಈ ರೀತಿ ಮಾಡಿ:

ಒಂದು ವೇಳೆ ನಿಮಗೆ ಇನ್ನು ಕೂಡ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ನೀವು ನೀಡಿರುವ ಯಾವುದಾದರೂ ದಾಖಲೆಯಲ್ಲಿ ಸಮಸ್ಯೆ ಇರಬಹುದು. ಹಾಗೇನಾದರೂ ಆಗಿದ್ದರೆ ಈ ರೀತಿ ಮಾಡಿ..

  • ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ
  • ರೇಷನ್ ಕಾರ್ಡ್ ನ Kyc ಅಪ್ಡೇಟ್ ಆಗಿದ್ಯಾ ಎಂದು ಚೆಕ್ ಮಾಡಿ
  • ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ ಗೆ ಕೂಡ kyc ಮಾಡಿಸಿ
  • ರೇಷನ್ ಕಾರ್ಡ್ ಅನ್ನು ಕೂಡ ಅಪ್ಡೇಟ್ ಮಾಡಿಸಿ.

ಇತರೆ ವಿಷಯಗಳು:

ಜನ ಸಾಮಾನ್ಯರ ಮೇಲೆ ಬೀಳುತ್ತಾ ಮತ್ತೊಂದು ಬರೆ.!! ಯಾವುದು ಗೊತ್ತಾ ಈ ಹೊರೆ

ಮೊಬೈಲ್‌ ಬಳಕೆದಾರರಿಗೆ ಹೊಸ ತಲೆ ನೋವು.!! ಮತ್ತೆ ಏರಿಕೆ ಕಂಡ ಜಿಯೋ-ಎರ್ಟೆಲ್‌ ರಿಚಾರ್ಜ್

Leave a Reply

Your email address will not be published. Required fields are marked *