ಅನ್ನಭಾಗ್ಯ ಹಣ ಖಾತೆಗೆ ಜಮಾ ಆಗದೆ ಇದ್ದವರಿಗೆ ಗುಡ್‌ ನ್ಯೂಸ್!

ಅನ್ನಭಾಗ್ಯ ಯೋಜನೆ ತಲುಪದ ಪಡಿತರದಾರರಿಗೆ ಆಧಾರ್ KYC ಅಭಿಯಾನವನ್ನು ಮಾಡುವಂತೆ ಕಾರ್ಮಿಕ ಇಲಾಖೆಯ ಸಚಿವರಾಗಿರುವ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರು ಹೇಳಿದ್ದಾರೆ.

Anna Bhagya Scheme Kannada

ಅವರು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಕಲಘಟಗಿಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಣೆ ಮಾಡಿ ಮಾತನಾಡಿದರು.

ಅನ್ನಭಾಗ್ಯ ಯೋಜನೆಯ ನೇರ ಹಣವು ಜಮೆ ಆಗದ ಪ್ರಕರಣಗಳಲ್ಲಿ ಆಧಾರ್ ಜೋಡಣೆ ಮತ್ತು ಬಾಂಕ್ ಹೊಸ ಖಾತೆಯನ್ನು ತೆರೆಯಲು ಅನುಕೂಲವಾಗುವಂತೆ ಆಯ್ದ ನಗರ ಹಾಗೂ ಗ್ರಾಮೀಣ ನ್ಯಾಯಬೆಲೆಯ ಅಂಗಡಿಗಳಲ್ಲಿ KYC ಜೋಡಣೆಯ ಸಲುವಾಗಿ ಜುಲೈ 1 ರಿಂದ 7 ರ ವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾವು ಸಚಿವರಾದಾಗಿನಿಂದ ವಾರದ ಬಹುತೇಕ ದಿನಗಳನ್ನು ನನ್ನ ಮತಕ್ಷೇತ್ರ ಹಾಗೂ ಜಿಲ್ಲೆಯ ಜನರ ಮಧ್ಯದಲ್ಲಿದ್ದು, ಅವರ ದೂರುಗಳನ್ನು ಅಹವಾಲುಗಳಿಗೆ ಪ್ರತಿದಿನವು ಸ್ಪಂದಿಸುತ್ತಿದ್ದೇನೆ. ನಿತ್ಯ ಜನತಾದರ್ಶನವನ್ನು ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

‌ರೈತರಿಗಾಗಿ ಸರ್ಕಾರದ ಕೊಡುಗೆ.! ರಾಜ್ಯ ಸರ್ಕಾರದಿಂದ ಸಿಗಲಿದೆ ಬೊಂಬಾಟ್‌ ಗಿಫ್ಟ್

ವಿಶೇಷಚೇತನನ ಕಂಡು ಕಣ್ಣಿರಾದ ಸಚಿವರು:

ವಯಸ್ಕ ಮಗನ ವಿಶೇಷಚೇತನನಿದ್ದು, ಏಳಲು, ಅಡ್ಡಾಡಲು ಬರುವದಿಲ್ಲ. ಮನೆ ಆರ್ಥಿಕ ಸ್ಥಿತಿಯು ಚನ್ನಾಗಿಲ್ಲ. ಮಗನನ್ನು ಸಾಕಿ, ಸಲುಹಲು ಸಹಾಯ ಮಾಡಿ ಎಂದು ವಿಶೇಷಚೇತನನ ತಾಯಿ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು.

ಅವರ ಪರಿಸ್ಥಿತಿಯನ್ನು ನೋಡಿ, ಕಣ್ಣಿರಾದ ಸಚಿವ ಸಂತೋಷ್ ಲಾಡ ಅವರು, ತಮ್ಮ ಫೌಡೇಶನ್ ನಿಂದ ಸಹಾಯವನ್ನು ಮಾಡುವದಾಗಿ ತಿಳಿಸಿದರು. ಆರೋಗ್ಯ, ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಯೋಜನೆಗಳ ಸಹಾಯವನ್ನು ಮಾಡಿಸುವುದಾಗಿ ಭರವಸೆಯನ್ನು ನೀಡಿದರು.

ಇತರೆ ವಿಷಯಗಳು:

ಕರ್ನಾಟಕದಲ್ಲಿ ಶುರುವಾಯ್ತು ಕುರ್ಚಿ ಸಮರ.!! ರಾಜ್ಯಕ್ಕೆ ಇನ್ಮುಂದೆ ಇವರೇ ಸಿಎಂ

ಕರ್ನಾಟಕದಲ್ಲಿ ಮುಂದುವರೆದ ಭಾರೀ ಮಳೆ.!! ಇನ್ನು ಎಷ್ಟು ದಿನ ಗೊತ್ತಾ ಶಾಲಾ ಕಾಲೇಜು ರಜೆ??

Leave a Reply

Your email address will not be published. Required fields are marked *