ಹಲೋ ಸ್ನೇಹಿತರೇ, ಬಡವರ್ಗದ ಜನೆತೆಯ ಹಸಿವನ್ನು ನೀಗಿಸಲು ಆಹಾರ ಇಲಾಖೆಯು ಆಹಾರ ಧಾನ್ಯಗಳನ್ನುವಿತರಣೆ ಮಾಡುತ್ತಿದೆ. ಈಗಾಗಲೇ ಪಡಿತರ ದಾರರು ಉಚಿತ ರೇಷನ್ ಅನ್ನು ಪಡೆಯುವ ಜೊತೆಗೆ ಕೆಲವು ಇತರ ಸೌಲಭ್ಯ ಗಳನ್ನು ಕೂಡ ಪಡೆಯುತ್ತಿದ್ದಾರೆ. ಉಚಿತ ರೇಷನ್ ಅನ್ನು ಪಡೆಯಲು ರೇಷನ್ ಕಾರ್ಡ್ ಬಹಳಷ್ಟು ಅಗತ್ಯವಾಗಿ ಬೇಕಾಗಿದೆ. ಈಗಾಗಲೇ ಈ ಕಾರ್ಡ್ ನ್ನು ಮೂರು ವಿಧಗಳಾಗಿ ವಿಂಗಡಣೆಯನ್ನು ಮಾಡಿದ್ದಾರೆ. ಅದೇ ರೀತಿಯಾಗಿ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಗೆ ಸಹ ಅರ್ಜಿಯನ್ನು ಹಾಕಬಹುದಾಗಿದೆ.
ಅನ್ನಭಾಗ್ಯ ಹಣ:
ಪಡಿತರ ಜೊತೆಗೆ ಸರಕಾರವು ಅನ್ನಭಾಗ್ಯ ಯೋಜನೆಯ ಮೂಲಕ ಖಾತೆಗೆ ಹಣವನ್ನು ಕೂಡ ವಿತರಣೆ ಮಾಡುತ್ತಿದೆ. ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಉಚಿತ ಅಕ್ಕಿ ಒದಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಕ್ಕಿ ಕೊರತೆ ನಿವಾರಣೆ ಆದ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಉಚಿತ ಅಕ್ಕಿ ವಿತರಣೆ ಮಾಡಲಿದೆ.
ಹೌದು ಹೆಚ್ಚುವರಿಯಾಗಿ ಅಕ್ಕಿಯ ಬದಲಾಗಿ ಕುಟುಂಬ ಮುಖ್ಯಸ್ಥರ ಖಾತೆಗೆ 1 ಕೆಜಿ ಅಕ್ಕಿಗೆ 36 ರೂಪಾಯಿಯಂತೆ ತಲಾ ಐದು ಕೆಜಿ ಅಂತೆ ಕುಟುಂಬ ಸದಸ್ಯರ ಒಟ್ಟು ಹಣವು ಖಾತೆಗೆ ಜಮೆಯಾಗಲಿದೆ. ಈಗಾಗಲೇ ಖಾತೆಗೆ ಹಣವನ್ನು ಜಮೆಯನ್ನು ಮಾಡುತ್ತಿದ್ದು ಹೆಚ್ಚಿನ ಜನರು ಈ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದಾರೆ.
ಮೇ ತಿಂಗಳ ಹಣ?
ಈಗಾಗಲೇ ಮೇ ತಿಂಗಳ ವರೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಸರಕಾರ ಬಿಡುಗಡೆ ಮಾಡಿದ್ದು ಮೇ ತಿಂಗಳ ಹಣ ಕೆಲವು ಫಲಾನುಭವಿಗಳಿಗೆ ಇನ್ನು ಕೂಡ ಖಾತೆಗೆ ಬಂದಿಲ್ಲ. ಇದಕ್ಕಾಗಿಯೇ ಕೆಲವು ಕಾರಣ ಗಳಿದ್ದು ಏನು ಎಂಬುದನ್ನು ತಿಳಿದುಕೊಳ್ಳಿ
ಇಡೀ ಕುಟುಂಬಕ್ಕೆ ಸಿಗತ್ತೆ ಬರೋಬ್ಬರಿ 90% ಅನುದಾನ!
ಯಾಕೆ ಹಣ ಬಂದಿಲ್ಲ?
ಅಕ್ಕಿ ಹಣವೂ ಖಾತೆಗೆ ಜಮೆಯಾಗದಿರಲು ಕಾರಣವಾದ ಕುಟುಂಬದ ಮುಖ್ಯಸ್ಥನ ಆಧಾರ್ ಕಾರ್ಡ್ ನ ಅಪ್ಡೇಟ್ ಆಗದೇ ಇರುವುದು ಸಹ ಕಾರಣವಾಗಿದ್ದು ನೀವು ಈ ಕೆಲಸವನ್ನು ಮೊದಲು ಮಾಡಬೇಕು. ಹಾಗೂ ಪಡಿತರ ಚೀಟಿಯ ಈ-ಕೆವೈಸಿ ಆಗದೆ ಇರುವುದು ಹಣ ಬಾರದೇ ಇರಲು ಮುಖ್ಯವಾದ ಕಾರಣ ವಾಗಿದೆ. ಹಾಗಾಗಿ ಮೊದಲು ಪಡಿತರ ಚೀಟಿ ಅಪ್ಡೇಟ್ ಮಾಡಿ. ಹೀಗೆ ಮಾಡಿದ್ದಲ್ಲಿ ಖಾತೆಗೆ ಹಣ ಜಮೆಯಾಗಲಿದೆ.
ಹಣ ಜಮೆ ಯಾಗಿದೇಯೇ ಎಂದು ತಿಳಿದು ಕೊಳ್ಳಲು ಕರ್ನಾಟಕ ಸರ್ಕಾರದ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.
ಇತರೆ ವಿಷಯಗಳು:
ಈ ಕಾರ್ಡ್ ಇದ್ರೆ ಸಾಕು, ಮದುವೆ & ಗರ್ಭಿಣಿ ಸ್ತ್ರೀ ಖರ್ಚು ವೆಚ್ಚ ಸರ್ಕಾರದ್ದೇ
ಅನ್ನದಾತರಿಗೆ ಶಾಕಿಂಗ್ ಬ್ರೇಕಿಂಗ್ ನ್ಯೂಸ್.!! ಬಿತ್ತನೆ ಬೀಜ ದರ ರಾಜ್ಯದಲ್ಲಿ ಏರಿಕೆ