ಗ್ರಾಮೀಣ ಜನತೆಗೆ ಭರ್ಜರಿ ಅವಕಾಶ! ಈ ಇಲಾಖೆ ವತಿಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಲೋ ಸ್ನೇಹಿತರೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2024-25ನೇ ಸಾಲಿನ ಜಿಲ್ಲಾ ವಲಯದ ಯೋಜನೆಯಡಿ ಬಂಡಾವಳ ಹೂಡಿಕೆ ಸಹಾಯಧನ, ತರಬೇತಿ ಹಾಗೂ ತರಬೇತಿ ಪಡೆದಂತಹ ಫಲಾನುಭವಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ, ವೃತ್ತಿಪರ/ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸಲಕರಣೆ ಸರಬರಾಜು ಮತ್ತು ಬಡ್ಡಿ ಸಹಾಯಧನ ಸೌಲಭ್ಯಗಳನ್ನು ನೀಡಲು ಆಸಕ್ತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಜಿ ಹೇಗೆ ಸಲ್ಲಿಸುವುದು? ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Applications invited for Department of Industry and Commerce facilities

 ರಿಯಾಯಿತಿ

  • ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವವರಿಗೆ ಉತ್ತೇಜನ ನೀಡಲು ಸ್ಥಿರಾಸ್ಥಿ ಬಂಡವಾಳ ಹೂಡಿಕೆಯ ಮೇಲೆ ಸಹಾಯಧನ
  • ವಿವಿಧ ವರ್ಗಗಳಿಗೆ ಶೇ.15 ರಿಂದ ಶೇ.35ರವರೆಗೆ ಸಹಾಯಧನ ನೀಡಲಾಗುತ್ತದೆ.

 ಅರ್ಹತೆಗಳು/ಮಾನದಂಡಗಳು

  • ಉತ್ಪಾದನಾ ಕೈಗಾರಿಕಾ ಘಟಕಗಳಾದ ಸೂಕ್ಷ್ಮ, ಸಣ್ಣ ಹಾಗೂ ಮದ್ಯಮ ಗಾತ್ರದ ಕೈಗಾರಿಕೆಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆನ್‍ಲೈನ್

 ಸಲ್ಲಿಸಬೇಕಾದ ದಾಖಲೆಗಳು

  • ನಿಗಧಿತ ಅರ್ಜಿ ನಮೂನೆಯಲ್ಲಿ ವಿವರ
  • ಕೈಗಾರಿಕೆ ಸ್ಥಾಪಿಸಿರುವ ಬಗ್ಗೆ ದಾಖಲಾತಿಗಳು

ಆಸಕ್ತಿ ಇರುವ ಇಲಾಖೆಯ https://shimoga.nic.in ಪೊರ್ಟಲ್ ಮೂಲಕ ದಿ: 30/08/2024 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ.ಸಂಖ್ಯೆ: 08182-223376, ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9380561275, ಸೊರಬ, ಶಿಕಾರಿಪುರ, ಹೊಸನಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9481743640 ಹಾಗೂ ಸಾಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ: 9448401714 ಇವರುಗಳನ್ನು ಸಂಪರ್ಕಿಸುವುದು.

ಇತರೆ ವಿಷಯಗಳು:

ಇಂದಿನಿಂದ ಬಸ್‌ಗಳಲ್ಲಿ QR ಕೋಡ್‌ ಟಿಕೆಟ್‌ ವ್ಯವಸ್ಥೆ ಜಾರಿ! ಕೈಯಲ್ಲಿ ಹಣ ಇಲ್ಲದಿದ್ದರೆ ಚಿಂತೆ ಬೇಡ

38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ಹಣ ಜಮಾ : ಸಚಿವ ಕೃಷ್ಣ ಬೈರೇಗೌಡ ಮಹತ್ವದ ಹೇಳಿಕೆ

Leave a Reply

Your email address will not be published. Required fields are marked *