ಹಲೋ ಸ್ನೇಹಿತರೆ, ಕೇಂದ್ರ ಸರ್ಕಾರವು ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ನೀಡಿದ್ದು, ಈ ರೀತಿ ದಾಖಲೆ ಸಲ್ಲಿಸಿ ಆಯುಷ್ಮಾನ್ ಕಾರ್ಡ್ ಪಡೆದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಇನ್ಮುಂದೆ ಇವರು ಉಚಿತ ಚಿಕಿತ್ಸೆ ಪಡೆಯುವುದಿಲ್ಲ. ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ಹೆಸರನ್ನು ಹೇಗೆ ಚೆಕ್ ಮಾಡುವುದು. ಯಾರ ಕಾರ್ಡ್ ಗಳು ರದ್ದಾಗಲಿವೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆಯೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಪಡಿತರ ಚೀಟಿ ಸಂಖ್ಯೆಯಿಂದ ಕಾರ್ಡ್ ಅನ್ನು ಪರಿಶೀಲಿಸಲಾಗುತ್ತದೆ. ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡಲಾಗುವುದು ಎಂಬ ವಿವರಗಳನ್ನು ಸಿದ್ಧಡಿಸುವಲ್ಲಿ ಆರೋಗ್ಯ ಇಲಾಖೆ ಈಗಾಗಲೇ ಕಾರ್ಯ ನಿರತವಾಗಿದೆ.
ಪಡಿತರ ಚೀಟಿದಾರರನ್ನು ಚೆಕ್ ಮಾಡಲು ಆಹಾರ ಇಲಾಖೆ ಇ-ಕೆವೈಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಹಿಂದೆ ಅನರ್ಹ ಕಾರ್ಡುದಾರರಿಂದ ಹಣ ವಸೂಲಿಗೆ ಆದೇಶ ಬೆಳಕಿಗೆ ಬಂದಿತ್ತು. ಈ ಮೇಲೆ, ಅನೇಕ ಅನರ್ಹರು ಸ್ವತಃ ಪಡಿತರ ಚೀಟಿಗಳನ್ನು ಹಿಂದುರಿಸಿದ್ದರು. ಇದರಲ್ಲಿ ಮುಖ್ಯವಾಗಿ ಆದಾಯ ತೆರಿಗೆ ಪಾವತಿದಾರರು, ಪಿಂಚಣಿದಾರರು ಸಹ ಸೇರಿದ್ದಾರೆ. ಹೀಗಾಗಿ ಅನರ್ಹ ಆಯುಷ್ಮಾನ್ ಕಾರ್ಡ್ ಗಳನ್ನು ರದ್ದುಪಡಿಸಲಾಗುವುದು. ಈ ಅನರ್ಹ ಕಾರ್ಡ್ ಹೊಂದಿರುವವರ ಹೆಸರುಗಳನ್ನು ಆಯುಷ್ಮಾನ್ ಪಟ್ಟಿಯಿಂದ ತೆಗೆದುಹಾಕಲು ಕೇಂದ್ರ ಕಚೇರಿಯಿಂದ ಸೂಚನೆಗಳನ್ನು ನೀಡಲಾಗಿದೆ.
ಇದನ್ನು ಓದಿ: ರಾಜ್ಯದ ಬಡಜನತೆಗೆ ಸಿಹಿ ಸುದ್ದಿ!! ರಾಜ್ಯಾದ್ಯಂತ ಮತ್ತೆ 252 ‘ನಮ್ಮ ಕ್ಲಿನಿಕ್ʼ ಆರಂಭ
ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಹೇಗೆ ಪರಿಶೀಲಿಸಬಹುದು?
ಹಂತ 1:
- ನೀವು ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಮೊದಲು ಯೋಜನೆಯ ಈ ಅಧಿಕೃತ beneficiary.nha.gov.in ಲಿಂಕ್ ಗೆ ಹೋಗುವುದು
- ಇದರ ನಂತರ, ನೀವು ವೆಬ್ಸೈಟ್ನ ಲಾಗಿನ್ ಪುಟವನ್ನು ನೋಡುತ್ತೀರಿ.
ಹಂತ 2:
- ನಂತರ ಈ ಪುಟಕ್ಕೆ ಲಾಗಿನ್ ಆಗಬೇಕು, ಇದಕ್ಕಾಗಿ ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು
- ಇದರ ನಂತರ, ನೀವು ವೆರಿಫೈ ಮೇಲೆ ಕ್ಲಿಕ್ ಮಾಡಬೇಕು
- ನಂತರ ನೀವು ನೀಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ, ಅದನ್ನು ನೀವು ನಮೂದಿಸಬೇಕು.
ಹಂತ 3:
- ಇದಾದ ನಂತರ ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಮೊದಲು ಯೋಜನೆಯನ್ನು ಹೆಸರನ್ನು ಆಯ್ಕೆ ಮಾಡಬೇಕು
- ಇದರ ನಂತರ, ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ಯೋಜನೆಗಳಲ್ಲಿ ಪಿಎಂಜೆಎವೈ ಅನ್ನು ಆಯ್ಕೆ ಮಾಡಿ
- ನಂತರದಲ್ಲಿ ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ಅಂತಿಮವಾಗಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇತರೆ ವಿಷಯಗಳು:
ಯಜಮಾನಿಯರಿಗೆ 10 ದಿನದೊಳಗೆ 2 ತಿಂಗಳ ʻಗೃಹಲಕ್ಷ್ಮಿʼ ಹಣ ಖಾತೆಗೆ ಜಮಾ!
ಬಜೆಟ್‌ನ ಈ ಯೋಜನೆಯಿಂದ ನಿಮ್ಮ ಮಕ್ಕಳ ಜೀವನ ಸೆಟಲ್.!! ಪೋಷಕರಿಗೆ ಭರ್ಜರಿ ಆಫರ್