ರಾಜ್ಯದ ರೈತರ ಗಮನಕ್ಕೆ, ಆಧಾರ್ ಕಾರ್ಡ್ ಮೂಲಕ ಬರ ಪರಿಹಾರದ ಹಣ ವಿವರ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.

ನಮಸ್ಕಾರ ಸ್ನೇಹಿತರೇ, ಬರಗಾಲ ಪೀಡಿತ ಪ್ರದೇಶದ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ (Bara Parihara) ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿಯನ್ನು ಮೊಬೈಲ್ ಫೋನ್ ಮೂಲಕವೇ ಪರಿಶೀಲಿಸಬಹುದು. ಈ ಲೇಖನದಲ್ಲಿ ಮೊಬೈಲ್ ನಲ್ಲಿ ಬರ ಪರಿಹಾರದ (Bara Parihara) ಮಾಹಿತಿಯನ್ನು ಹೇಗೆ ಚೆಕ್ ಮಾಡುವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.

ಭೂಮಿ ಆನ್‌ಲೈನ್ – ಪರಿಹಾರ (ಇನ್‌ಪುಟ್ ಸಬ್ಸಿಡಿ) ಪಾವತಿ ವಿವರಗಳು:

ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನವನ್ನು ತಿಳಿಯಲು, ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್ Bhoomi Online Parihara ಲಿಂಕ್ ಗೆ ಭೇಟಿ ನೀಡಿ. ಮುಂಗಾರು ಹಂಗಾಮಿನ ಬರ ಪರಿಹಾರದ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿಯನ್ನು ಅರ್ಹ ಫಲಾನುಭವಿ ರೈತರ ಆಧಾರ್ ಕಾರ್ಡ್ ನಂಬರ್ ಬಳಸಿ ಪಡೆಯಬಹುದು.

ಬರ ಪರಿಹಾರದ ಹಣ ಚೆಕ್ ಮಾಡುವ ವಿಧಾನ:

  • ಭೂಮಿ ಆನ್‌ಲೈನ್ – ಪರಿಹಾರ (ಇನ್‌ಪುಟ್ ಸಬ್ಸಿಡಿ) ಪಾವತಿ ವಿವರಗಳು ಲಿಂಕ್ ಗೆ ಭೇಟಿ ನೀಡಿ.
    ನಂತರ, ವರ್ಷ/Year, ಸೀಸನ್/Season, ವಿಪತ್ತಿನ ವಿಧ/Kharif Calamity, ಬರ/Drought ಎಂದು ಆಯ್ಕೆಮಾಡಿ.
    “ಹುಡುಕು/Get Data” ಆಯ್ಕೆಯನ್ನು ಕ್ಲಿಕ್ ಮಾಡಿ.
    ಆಧಾರ್ ಕಾರ್ಡ್/Adhar Card ಬಟನ್ ಮೇಲೆ ಕ್ಲಿಕ್ ಮಾಡಿ, 12 ಅಂಕಿಯ ಆಧಾರ್ ಕಾರ್ಡ್ ನಂಬರ್ನು ನಮೂದಿಸಿ “Get Data” ಆಯ್ಕೆಮಾಡಿ.
    ಈ ಬಳಿಕ, ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೆಂದು ವಿವರ ತೋರಿಸಲಾಗುತ್ತದೆ. ಅದರ ಜೊತೆಗೆ ಯಾವೆಲ್ಲ ಸರ್ವೆ ನಂಬರ್ ಗೆ ಬರ ಪರಿಹಾರದ ಹಣ ಜಮಾ ಆಗಿದೆಯೆಂಬುದರ ಮಾಹಿತಿಯೂ ತೋರಿಸಲಾಗುತ್ತದೆ.

ಆಧಾರ್ ಕಾರ್ಡ್ ನಂಬರ್ ಬಳಸಿ ಬರ ಪರಿಹಾರದ ವರದಿ ಹುಡುಕಲು ಸಾಧ್ಯವಾಗದಿದ್ದಲ್ಲಿ:

ಆಧಾರ್ ಕಾರ್ಡ್ ನಂಬರ್ ಬಳಸಿ ಪರಿಹಾರದ ವರದಿ ಹುಡುಕಲು ಸಾಧ್ಯವಾಗದಿದ್ದರೆ, “ಮೊಬೈಲ್ ನಂಬರ್” ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರಿಂದ ಕೂಡಾ ಪರಿಹಾರದ ವಿವರಗಳನ್ನು ಪಡೆಯಬಹುದು.

ಈ ವಿಧಾನವನ್ನು ಬಳಸಿ, ಬರಗಾಲ ಪೀಡಿತ ರೈತರು ತಮ್ಮ ಪರಿಹಾರದ ಹಣದ ಮಾಹಿತಿ ಸುಲಭವಾಗಿ ಪಡೆಯಬಹುದು.

ಇತರೆ ವಿಷಯಗಳು

ರಾಜ್ಯದಲ್ಲಿ ಇನ್ನೂ 3 ದಿನ ಭರ್ಜರಿ ಮಳೆಯಾಗಲಿದೆ, ಎಲ್ಲೆಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ಗಂಗಾ ಕಲ್ಯಾಣ ಯೋಜನೆ 2024, ಉಚಿತ ಬೋರ್ವೆಲ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ.

Leave a Reply

Your email address will not be published. Required fields are marked *