ಹಲೋ ಸ್ನೇಹಿತರೇ, ಚಿತ್ರದುರ್ಗ ಜಿಲ್ಲೆಯ 1647 ಬಾಲಕಿಯರು, ಹದಿನೆಂಟು ವರ್ಷದ ಹಿಂದೆ ರಾಜ್ಯದಲ್ಲಿ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಯ ತಲಾ ಒಂದು ಲಕ್ಷ ರೂ. ಲಾಭವನ್ನು ಪಡೆಯಲಿದ್ದಾರೆ.
ಜಿಲ್ಲೆಯಲ್ಲಿಈ ಯೋಜನೆ ಅಡಿ ನೋಂದಾಯಿಸಿದ ಹದಿನೆಂಟು ವರ್ಷ ಪೂರ್ಣಗೊಂಡ ಏಪ್ರಿಲ್ ಹಾಗೂ ಮೇ ತಿಂಗಳಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯನ್ನು ಮೆಚ್ಯೂರಿಟಿ ಬೆನಿಫಿಷರ್‌ಗೆ ಅರ್ಹರಾಗಿದ್ದು, ಈ ಹಣವನ್ನು ಇನ್ನೆರಡು ತಿಂಗಳಲ್ಲಿಅರ್ಹ ಫಲಾನುಭವಿಗಳ ಖಾತೆಗೆ ಆದ್ಯತೆಯ ಮೇರೆಗೆ ಜಮೆ ಆಗಲಿದೆ.
ಈಗಾಗಲೇ ಅಗತ್ಯ ದಾಖಲೆಗಳನ್ನು ಇಲಾಖೆಯು ಪಡೆಯಲು ಮುಂದಾಗಿದೆ.
ಲಿಂಗಾನುಪಾತದ ಉತ್ತಮ ಪಡಿಸಲು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಮತ್ತು ಬಾಲ್ಯ ವಿವಾಹ ಪದ್ಧತಿಗೆ ಬ್ರೇಕ್ ಹಾಕಲು, ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮ ಪಡಿಸಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರಕಾರವು ನಿಶ್ಚಿತ ಠೇವಣಿ ಹೂಡಿ,
ಕೇಂದ್ರ ನೌಕರರಿಗೆ ಹೊಸ ಸರ್ಕಾರದಿಂದ ಏಳಿಗೆ! ಸಂಬಳದಲ್ಲಿ ಭಾರಿ ಹೆಚ್ಚಳ
ಈ ಮಗುವಿಗೆ ಹದಿನೆಂಟು ವರ್ಷ ಪೂರ್ಣಗೊಂಡ ಅನಂತರ ಬಡ್ಡಿಯ ಸಹಿತ ಪರಿಪಕ್ವವಾಗಿ ಹಣವನ್ನು ನೀಡುವ ಉದ್ದೇಶದಿಂದ 2006-07 ರಲ್ಲಿ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಗೆ ಪ್ರಸ್ತುತವಾಗಿ ಹದಿನೆಂಟು ವರ್ಷವಾಗಿರುವ ಹಿನ್ನೆಲೆ ಎಲ್ಲ ತಾಲೂಕುಗಳ ಸಿಡಿಪಿಒ ಇಲಾಖೆಯ ಪರಿಪಕ್ವ ಹಣವನ್ನು ನೀಡಲು ಈಗಾಗಲೇ ಅರ್ಹರಿಂದ ಅರ್ಜಿ ಹಾಗೂ ಅಗತ್ಯ ದಾಖಲೆ ಸಂಗ್ರಹಿಸುತ್ತಿದೆ.
ಈ ಯೋಜನೆಯ ಹಣ ಪಡೆಯಲು BPL ಕಾರ್ಡ್ ಮತ್ತು ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರಿರದಂತಿರಬೇಕು. (ಬಹುಪತಿ-ಪತ್ನಿಯರನ್ನು ಹೊಂದಿದ್ದರೂ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ಅರ್ಹರು). ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.
ಇತರೆ ವಿಷಯಗಳು:
ರೈತ ಮಹಿಳೆಯರಿಗೆ ಬಂಪರ್ ಸುದ್ದಿ.!! ಈ ಯೋಜನೆಡಿ ನಿಮ್ಮದಾಗಲಿದೆ 60 ರಿದ 80 ಸಾವಿರ ರೂ.
ಬಿಪಿಎಲ್ ಕಾರ್ಡ್ ಹೊಸ ಅರ್ಜಿದಾರರಿಗೆ ತಡೆ!