ಹಲೋ ಸ್ನೇಹಿತರೆ, ದೇಶದಲ್ಲಿ ಲೋಕಸಭೆ ಚುನಾವಣೆಗೂ ಮೊದಲು ಶುರುವಾಗಿದ್ದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಭಾರತ್ ಅಕ್ಕಿ ಯೋಜನೆಯು ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿಲ್ಲದ ಜನಸಾಮಾನ್ಯರಿಗೆ ಅಗ್ಗದ ಪಡಿತರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಸ್ಥಗಿತಗೊಳಿಸಲು ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಈ ಯೋಜನೆಯಡಿಯಲ್ಲಿ ಕೆಜಿಗೆ 29 ರೂಪಾಯಿಗೆ ಅಕ್ಕಿಯನ್ನು, 27.50 ರೂ. ಗೆ ಗೋಧಿ ಹಿಟ್ಟು ಹಾಗೂ 60 ರೂಪಾಯಿಗೆ ಕಡ್ಲೆ ಬೇಳೆ ವಿತರಿಸಲಾಗುತ್ತಿತ್ತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿಯನ್ನು ವಿತರಿಸಲು ಸರ್ಕಾರ ಯೋಜನೆ ರೂಪಿಸಲಾಗಿತ್ತು. ಹಾಗೆಯೇ ಗ್ರಾಹಕರಿಂದಲೂ ಭಾರತ್ ಅಕ್ಕಿಗೆ ಭಾರಿ ಬೇಡಿಕೆ ಇತ್ತು. ಆದರೆ ಯೋಜನೆಯನ್ನು ಈಗ ದಿಢೀರ್ ನಿಲ್ಲಿಸಲಾಗಿದೆ.
ಅಂಗನವಾಡಿ ಮಕ್ಕಳಿಗೂ ಬ್ಯಾಗ್, ಸಮವಸ್ತ್ರ ವಿತರಣೆ! ರಾಜ್ಯ ಸರ್ಕಾರದ ಘೋಷಣೆ
ಕೇಂದ್ರದ ಆದೇಶದ ಹಾಗೇ ಸಾಮಗ್ರಿಗಳನ್ನು ಜೂ.10 ರವರೆಗೆ ಸರಬರಾಜು ಮಾಡಲಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ಸದ್ಯಕ್ಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. 2024ರ ಫೆಬ್ರವರಿ 2ರಿಂದ ಭಾರತ್ ಅಕ್ಕಿ ಯೋಜನೆ ಆರಂಭಿಸಲಾಗಿತ್ತು. ಅಕ್ಕಿ ಮತ್ತು ಗೋಧಿ ತಲಾ 10 ಕೆಜಿ, ಕಡ್ಲೆಬೇಳೆ ಐದು ಕೆಜಿ ಬ್ಯಾಗ್ ಗಳಲ್ಲಿ ನೀಡಲಾಗುತ್ತಿತ್ತು, ಮೊಬೈಲ್ ವ್ಯಾನ್ ಮತ್ತು ಮಾಲ್ ಗಳಲ್ಲಿಯೂ ಸಹ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸದ್ಯಕ್ಕೆ ಯೋಜನೆ ಸ್ಥಗಿತಗೊಳಿಸಲಾಗಿದೆ.
ಇತರೆ ವಿಷಯಗಳು:
ಕೊಳವೆ ಬಾವಿ ವಿಫಲವಾದ ರೈತರಿಗೆ ಸರ್ಕಾರದಿಂದ ಈ ಯೋಜನೆ ಜಾರಿ!
ರೈತರಿಗೆ ಸಂತಸದ ಸುರಿ ಮಳೆ.!! ನೀರಾವರಿಗಾಗಿ ಸೋಲಾರ್ ಪಂಪ್‌ಗಳ ಮೇಲೆ ಭರ್ಜರಿ ಸಬ್ಸಿಡಿ